ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾದೇವ’ನಿಗೆ ಜೋಡಿಯಾದ ಸೋನಲ್‌

Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

‘ರಾಬರ್ಟ್‌’ ಸಿನಿಮಾ ಬಳಿಕ ವಿನೋದ್‌ ಪ್ರಭಾಕರ್ ಹಾಗೂ ಸೋನಲ್‌ ಮೊಂತೆರೋ ಜೋಡಿಯಾಗಿ ನಟಿಸುತ್ತಿರುವ ‘ಮಾದೇವ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಟೀಸರ್ ಅನಾವರಣ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ನಿರ್ದೇಶಕ ತರುಣ್ ಸುಧೀರ್, ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಸಿನಿಮಾ ತಂಡಕ್ಕೆ ಜೊತೆಯಾದರು. ಮಾಸ್ ಅಂಶಗಳಿಂದ ಕೂಡಿರುವ ಚಿತ್ರದ ಟೀಸರ್‌ನಲ್ಲಿ ‘ಮರಿ ಟೈಗರ್’ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಖಳನಾಯಕನಾಗಿ ಶ್ರೀನಗರ ಕಿಟ್ಟಿ ನಟಿಸಿದ್ದು, ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ರಾಬರ್ಟ್’ ಸಿನಿಮಾದಲ್ಲಿ ರಾಘವ್ ಮತ್ತು ತನು ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ವಿನೋದ್‌–ಸೋನಲ್‌ ಜೋಡಿ, ಈ ಸಿನಿಮಾದಲ್ಲೂ ಮೋಡಿ ಮಾಡುವ ನಿರೀಕ್ಷೆ ಇದೆ.

ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯಲಿದೆ. ಕನಕಪುರ, ಚನ್ನಪಟ್ಟಣ, ಶಿವಮೊಗ್ಗ, ರಾಮೋಜಿ ಫಿಲಂ ಸಿಟಿ, ಹೆಸರಘಟ್ಟ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ರಾಬರ್ಟ್ ಸಿನಿಮಾ ಬಳಿಕ ನನಗೆ ಹಾಗೂ ವಿನೋದ್‌ ಅವರಿಗೆ ಜೋಡಿಯಾಗಿ ತುಂಬಾ ಸಿನಿಮಾಗಳು ಬಂದವು. ಆದರೆ ಯಾವುದೂ ನಮಗೆ ಹಿಡಿಸಲಿಲ್ಲ. ‘ಮಾದೇವ’ ಸಿನಿಮಾ ವಿನೋದ್ ಅವರ ಬಳಿ ಬಂದಾಗ, ಅವರು ನನ್ನನ್ನು ನಾಯಕಿಯನ್ನಾಗಿ ಕಾಸ್ಟ್ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದಾಗ ಈ ಸಿನಿಮಾ ಪಯಣ ಆರಂಭವಾಯಿತು’ ಎಂದು ನೆನಪಿಸಿಕೊಂಡರು ಸೋನಲ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT