ತಾರೆಯರ ಕ್ರಿಕೆಟ್ ಪ್ರೀತಿ

ಶನಿವಾರ, ಜೂಲೈ 20, 2019
25 °C
ಕ್ರಿಕೆಟ್ ವಿಶ್ವಕಪ್ ಮತ್ತು ತಾರೆಯರು

ತಾರೆಯರ ಕ್ರಿಕೆಟ್ ಪ್ರೀತಿ

Published:
Updated:
Prajavani

ವಿಶ್ವಕಪ್ ಕ್ರಿಕೆಟ್ ಜ್ವರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ಕ್ರಿಕೆಟ್ ಜ್ವರ ಕಾವು ಬಾಲಿವುಡ್ ತಾರೆಯರನ್ನೂ ಬಿಟ್ಟಿಲ್ಲ. ಈಚೆಗೆ ಇಂಗ್ಲೆಂಡ್‌ ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪಂದ್ಯಾವಳಿಯನ್ನು ಬಾಲಿವುಡ್‌ನ ಸೆಲೆಬ್ರಿಟಿಗಳು ಕಣ್ತುಂಬಿಕೊಂಡಿದ್ದು, ಭಾರತದ ಗೆಲುವನ್ನು ತಮ್ಮದೇ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. 

ಸಲ್ಮಾನ್  ಖಾನ್

‘ಭಾರತ್’ ಸಿನಿಮಾ ಬಿಡುಗಡೆ ತುಸು ರಿಲ್ಯಾಕ್ಸ್ ಆಗಿರುವ ಸಲ್ಮಾನ್ ಖಾನ್ ಟೀಂ ಇಂಡಿಯಾದ ಗೆಲುವಿಗಾಗಿ ಸಂಭ್ರಮಿಸಿದ್ದು, ‘ಅಭಿನಂದನೆಗಳು ಟೀಂ ಭಾರತ್... ಫ್ರಂ #ಭಾರತ್’ ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಭಾರತದ ಕ್ರಿಕೆಟ್ ಆಟಗಾರರ ನೀಲಿ ಜರ್ಸಿ ಧರಿಸಿರುವ ತಮ್ಮ ಚಿತ್ರವನ್ನೂ ಸಲ್ಮಾನ್ ಹಾಕಿದ್ದಾರೆ. 

ರಣ್‌ವೀರ್ ಸಿಂಗ್

80ರ ದಶಕದಲ್ಲಿ ಭಾರತ ವಿಶ್ವಕಪ್ ಗೆದ್ದ ಕಥೆಯಾಧಾರಿತ ‘83’ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರ ಮಾಡುತ್ತಿರುವ ರಣ್‌ವೀರ್ ಸಿಂಗ್, ಮ್ಯಾಂಚೆಸ್ಟರ್ ಸ್ಟೇಡಿಯಂ ತುಂಬಾ ಓಡಾಡಿ ತಮ್ಮ ಹೈವೋಲ್ಟ್ ಶಕ್ತಿ ಪ್ರದರ್ಶಿಸಿದ್ದಾರೆ.

ಅಲ್ಲಿ ಜೈನಾಬ್ ಅಬ್ಬಾಸ್, ವಾಸಿಂ ಅಕ್ರಂ ಮತ್ತು ವೀರೇಂದ್ರ ಸೆಹ್ವಾಗ್ ಅವರ ಜೊತೆಗೆ ಸೆಲ್ಫಿ ತೆಗೆದುಕೊಂಡರು.  ಭಾರತ ಗೆಲುವು ಸಾಧಿಸಿದಾಗ ಕ್ರೀಡಾಂಗಣದಲ್ಲಿ ರಣ್‌ವೀರ್, ವಿರಾಟ್ ಕೊಹ್ಲಿ ಮತ್ತು ಸುನೀಲ್ ಗವಾಸ್ಕರ್ ಜೊತೆಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.  

ಕರೀನಾ–ತೈಮೂರ್ ಖಾನ್ 

ಬಿಟೌನ್ ಬೆಡಗಿ ಕರೀನಾ ಕಪೂರ್ ತಮ್ಮ ಮುದ್ದು ಮಗ ತೈಮೂರ್‌ನೊಂದಿಗೆ ಮನೆಯಲ್ಲೇ ಕ್ರಿಕೆಟ್ ಪಂದ್ಯ ವೀಕ್ಷಿಸಿದರೆ, ಸೈಫ್ ಅಲಿ ಖಾನ್ ಮ್ಯಾಚೆಂಸ್ಟರ್‌ನ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡದ ಜರ್ಸಿ ತೊಟ್ಟು ಪಂದ್ಯ ವೀಕ್ಷಿಸಿದರು. 

ಭಾರತ ಕ್ರಿಕೆಟ್ ತಂಡ ಜರ್ಸಿ ಉಡುಪು ತೊಟ್ಟಿದ್ದ ತೈಮೂರ್ ಭಾರತದ ಗೆಲುವನ್ನು ತನ್ನದೇ ಮುದ್ದುಮುದ್ದು ಶೈಲಿಯಲ್ಲಿ ಸಂಭ್ರಮಿಸಿದ. ಈ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಕರೀನಾ. ‘ಒಂದೇ ಪ್ರೀತಿ ಒಂದೇ ಹೃದಯ  ಭಾರತಕ್ಕಾಗಿ’ ಎಂದು ಬರೆದುಕೊಂಡಿದ್ದಾರೆ.

ಕರಿಷ್ಮಾ ಕಪೂರ್

ತಂಗಿ ಕರೀನಾ ಕಪೂರ್‌ನೊಂದಿಗೆ ಕ್ರಿಕೆಟ್ ವೀಕ್ಷಿಸಿದ ಕರಿಷ್ಮಾ ಕಪೂರ್, ಭಾರತದ ಗೆಲುವನ್ನು ಸಂಭ್ರಮಿಸಿ, ‘ಅಭಿನಂದನೆಗಳು’ ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ಅನಿಲ್ ಕಪೂರ್

ಭಾರತ–ಪಾಕಿಸ್ತಾನದ ಪಂದ್ಯದ ಕಾರಣ ಇಂದು ನನ್ನ ಕಣ್ಣುಗಳು ಟಿವಿ ಸ್ಕ್ರೀನ್‌ನತ್ತಲೇ ಅಂಟಿಕೊಂಡು ಬಿಟ್ಟಿವೆ!. ಅತ್ಯುತ್ತಮ ಮ್ಯಾಚ್ ಮತ್ತು ಅದ್ಭುತ ಗೆಲುವು. ಭಾನುವಾರ ಸಾರ್ಥಕವಾಗಿ ಕಳೆಯಿತು. ಅಭಿನಂದನೆಗಳು ಟೀಂ ಇಂಡಿಯಾ’ ಎಂದು ಟ್ವಿಟರ್‌ನಲ್ಲಿ ಹಿರಿಯ ನಟ ಅನಿಲ್ ಕಪೂರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಬಿಪಾಶ ಬಸು

ಬಾಲಿವುಡ್‌ನ ಗ್ಲ್ಯಾಮರ್ ಬೆಡಗಿ ಬಿಪಾಶ ಬಸು ತಮ್ಮ ಎರಡೂ ಮುಂಗೈಗಳಿಗೆ ಭಾರತದ ಬಾವುಟದ ಬಣ್ಣ ಬಳಿದುಕೊಂಡು ಭಾರತದ ಗೆಲುವನ್ನು ಸಂಭ್ರಮಿಸಿದರು.

Post Comments (+)