2015 ಬಾಲಿವುಡ್ ಹಾಗೂ ಹಾಲಿವುಡ್ನ ಅನೇಕ ಜನಪ್ರಿಯ ತಾರೆಗಳ ಮದುವೆಗೆ ಸಾಕ್ಷಿಯಾಗಲಿದೆ. ಬಿ–ಟೌನ್ನ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಶಾಹಿದ್ ಕಪೂರ್ ಈ ವರ್ಷಾಂತ್ಯದಲ್ಲಿ ಗೃಹಸ್ಥರಾಗಲಿದ್ದಾರೆ. ಹಾಗೆಯೇ, ನಟ ರಣ್ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ನವೆಂಬರ್ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಕೂಡ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ದೆಹಲಿ ಹುಡುಗಿ ಮೀರಾ ರಜ್ಪೂತ್ ಅವರನ್ನು ವಿವಾಹವಾಗುವುದಾಗಿ ನಟ ಶಾಹಿದ್ ಕಪೂರ್ ಈಗಾಗಲೇ ಘೋಷಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂಬುದು ತಿಳಿದಿತ್ತು. ಆದರೆ, ಶಾಹಿದ್ ಹಾಗೂ ಮೀರಾ ಮದುವೆ ಜೂನ್ನಲ್ಲಿ ಆಗಲಿದೆ ಎಂಬುದು ಹೊಸ ಸಮಾಚಾರವಾಗಿದೆ.
ಹುಡುಗ ಮತ್ತು ಹುಡುಗಿ ಇಬ್ಬರ ಕುಟುಂಬದವರೂ ಜೂನ್ 10ಕ್ಕೆ ಇವರಿಬ್ಬರ ವಿವಾಹ ಮಾಡುವುದೆಂದು ನಿರ್ಧರಿಸಿದ್ದಾರೆ. ಹಾಗಾಗಿ, ಈಗಾಗಲೇ ಮದುವೆ ಸಿದ್ಧತೆಗಳು ಆರಂಭವಾಗಿವೆ. ಶಾಹಿದ್ ಕುಟುಂಬದ ಆಪ್ತರು ಹೇಳುವಂತೆ ಇವರಿಬ್ಬರ ಮದುವೆ ಇಸ್ತಾಂಬುಲ್ ಅಥವಾ ಗ್ರೀಸ್ನಲ್ಲಿ ನಡೆಯಲಿದೆ.
ಇದೇವೇಳೆ, ‘ಕಾಯ್ ಪೊ ಚೆ’ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜ್ಪೂತ್ ತಾವು ಈ ವರ್ಷ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳತಿ ಅಂಕಿತಾ ಅವರನ್ನೇ ಸುಶಾಂತ್ ವರಿಸಲಿದ್ದಾರೆ. ಸುಶಾಂತ್ ಹಾಗೂ ಅಂಕಿತಾ ಏಳು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಹಾಗೆಯೇ, ಬಹಳಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಅಭಿಷೇಕ್ ಕಪೂರ್ ಹಾಗೂ ಪ್ರಜ್ಞಾ ಜೋಡಿ ಸಹ ಮೇ ತಿಂಗಳಿನಲ್ಲಿ ಸಪ್ತಪದಿ ತುಳಿಯಲು ಅಣಿಯಾಗಿದೆ.
ಹಾಲಿವುಡ್ನಲ್ಲಿ...