ಹರ್ಷವರ್ಧನ್ ರಾಜ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಮಿತ್ರ ಈ ಚಿತ್ರದ ನಾಯಕ. ನಾಯಕಿ ಅಕ್ಷತಾ ಮಂಗಳೂರಿನವರು. ಹೈದರಾಬಾದ್ನಲ್ಲಿ ವಾಸವಾಗಿರುವ ಅವರು ಒಂದು ತೆಲುಗು ಸಿನಿಮಾದ ನಿರ್ದೇಶನವನ್ನೂ ಮಾಡಿದ್ದಾರೆ. ಕನ್ನಡಕ್ಕೆ ಬರುವುದಾದರೆ ಯಾವುದಾದರೂ ಭಿನ್ನ ಕಥೆಯ ಮೂಲಕವೇ ಬರಬೇಕು ಎಂದು ಅಂದುಕೊಂಡಿದ್ದರಂತೆ. ಸುಜಯ್ ಕುಮಾರ್ ಛಾಯಾಗ್ರಹಣವಿದೆ. ಮನೋಜ್, ತರುಣ್ ಕಿಶೋರ್, ಚಂದ್ರಪ್ರಭ, ಗೋವಿಂದೇಗೌಡ ಮುಂತಾದವರು ತಾರಾಗಣದಲ್ಲಿದ್ದಾರೆ.