`ಬರ್ಫಿ' ಚಿತ್ರದ ಯಶಸ್ಸಿನ ನಂತರ ಅನುರಾಗ್ ಬಸು ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅದು ಗಾಯಕ, ನಟ ಕಿಶೋರ್ ಕುಮಾರ್ ಅವರ ಜೀವನದ ಕತೆಯನ್ನು ಆಧರಿಸಿದ ಸಿನಿಮಾ. ಕಿಶೋರ್ ಪಾತ್ರಕ್ಕಾಗಿ ರಣಬೀರ್ ಕಪೂರ್ ಅವರನ್ನು ಒಪ್ಪಿಸಿರುವ ಬಸು, ಸದ್ಯದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ.
`ಈ ಚಿತ್ರದಲ್ಲಿ ನಾನು 19ನೇ ವಯಸ್ಸಿನಿಂದ 58 ವರ್ಷಗಳವರೆಗಿನ ನಾಲ್ಕು ಆಯಾಮದ ಪಾತ್ರ ನಿರ್ವಹಿಸಬೇಕಿದೆ. ಅದರಿಂದ ದಪ್ಪಗಾಗಬೇಕಿದೆ' ಎಂದು ರಣಬೀರ್ ಕಪೂರ್ ಪಾತ್ರದ ಸವಾಲನ್ನು ವಿವರಿಸಿದ್ದಾರೆ. ಇನ್ನೂ ಹೆಸರಿಡದ, ತಮ್ಮ ಮಹಾತ್ವಾಕಾಂಕ್ಷೆಯ ಚಿತ್ರದ ಕಿಶೋರ್ ಪಾತ್ರಕ್ಕೆ ರಣಬೀರ್ ನ್ಯಾಯ ಸಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ಬಸು ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ರಣಬೀರ್ಗೆ ನಾಲ್ವರು ನಾಯಕಿಯರು.