ರೌಡಿ ರಾಥೋರ್, ರಾ...ರಾಜ್ಕುಮಾರ್ ಸಿನಿಮಾದ ನಂತರ ಬಾಲಿವುಡ್ನಲ್ಲೇ ತಾವು ಹೆಚ್ಚು ಬ್ಯುಸಿಯಾಗಿರುವುದಾಗಿ ಜನ ಅಭಿಪ್ರಾಯ ಪಡುತ್ತಿರುವುದನ್ನು ನಟ, ನಿರ್ದೇಶಕ, ನೃತ್ಯ ನಿರ್ದೇಶಕ ಪ್ರಭುದೇವ ಅಲ್ಲಗಳೆದಿದ್ದಾರೆ.
‘ಬಾಲಿವುಡ್ನಲ್ಲಿ ಬ್ಯುಸಿಯಾಗಿರುವುದರಿಂದ ನಾನು ತಮಿಳು ಇಂಡಸ್ಟ್ರಿಯನ್ನು ನಿರ್ಲಕ್ಷಿಸುತ್ತಿದ್ದೇನೆ ಎಂದರ್ಥವಲ್ಲ. ಬಾಲಿವುಡ್ನಲ್ಲಿ ಒಪ್ಪಿಕೊಂಡ ಒಂದಷ್ಟು ಕೆಲಸವನ್ನು ಮುಗಿಸಬೇಕಿದೆ. ಅದು ಮುಗಿದ ನಂತರ ನಾನು ಮತ್ತೆ ತಮಿಳು ಸಿನಿಮಾಗಳನ್ನು ಮಾಡುತ್ತೇನೆ’ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಸದ್ಯಕ್ಕೆ ಅಜಯ್ ದೇವಗನ್ ಅಭಿನಯಿಸುತ್ತಿರುವ ‘ಆ್ಯಕ್ಷನ್ ಜಾಕ್ಸನ್’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭುದೇವ ಬ್ಯುಸಿಯಾಗಿದ್ದಾರೆ.