ಪ್ರದೀಪ್ ಸರ್ಕಾರ್ ನಿರ್ದೇಶನದ ‘ಮರ್ದಾನಿ’ ಚಿತ್ರದಲ್ಲಿ ರಾಣಿ ಮುಖರ್ಜಿ ಅಭಿನಯಕ್ಕೆ ‘ಬೆಸ್ಟ್ ರೆಪ್ರೆಸೆಂಟೇಷನ್ ಆಫ್ ದ ಕೋರ್ಸ್ ಆಫ್ ಸೇಫ್ಟಿ, ಸೆಕ್ಯೂರಿಟಿ ಅಂಡ್ ಪ್ರೊಟೆಕ್ಷನ್ ಆಫ್ ವುಮೆನ್ ಅಂಡ್ ಗರ್ಲ್ ಚೈಲ್ಡ್’ (ಮಹಿಳೆ ಮತ್ತು ಹೆಣ್ಣು ಮಕ್ಕಳ ರಕ್ಷಣೆ, ಭದ್ರತೆ ಕುರಿತ ಉತ್ತಮ ಪ್ರಾತಿನಿಧಿಕ ಚಿತ್ರಣ) ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

‘ದ ಇನ್‌ಸ್ಟಿಟ್ಯೂಟ್ ಫಾರ್ ಜೆಂಡರ್ ಜಸ್ಟಿಸ್’ ಸಂಸ್ಥೆ ನೀಡುವ ಈ ಪ್ರಶಸ್ತಿ ಈ ಬಾರಿ ರಾಣಿ ಮುಖರ್ಜಿ ಪಾಲಾಗಿದೆ. ಆಯ್ಕೆ ಸಮಿತಿಯಲ್ಲಿದ್ದ ತೀರ್ಪುಗಾರರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಶ್ರೀರೂಪ ಮಿತ್ರಾ ಚೌಧರಿ ತಿಳಿಸಿದ್ದಾರೆ.
‘ಮರ್ದಾನಿ ಚಿತ್ರದಲ್ಲಿ ಶಿವಾನಿ ಶಿವಾಜಿ ರಾಯ್ ಪಾತ್ರದಲ್ಲಿ ರಾಣಿಯ ಅಭಿನಯ ಮನಮೋಹಕವಾಗಿದೆ. ಮಾನವ ಕಳ್ಳಸಾಗಣಿಕೆ ವಿರುದ್ಧ ದೊಡ್ಡ ಸಮರವನ್ನೇ ಸಾರಿ ಅದರಲ್ಲಿ ಯಶಸ್ಸು ಸಾಧಿಸುತ್ತಾರೆ’ ಎಂದು ಅವರು ಪ್ರಶಂಸಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.