ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ, ಪಾಕಿಗಳಿಗೆ ಬೆಂಬಲ ನೀಡಿರುವ ಟರ್ಕಿ ಮೂಲದ ಸಿನಿಮಾ ಹಾಗೂ ವೆಬ್ ಸೀರೀಸ್ಗಳನ್ನು ತೆಗೆದುಹಾಕುವಂತೆ ಪಶ್ಚಿಮ ಭಾರತ ಸಿನಿಮಾ ಉದ್ಯೋಗಿಗಳ ಒಕ್ಕೂಟ(ಎಫ್ಡಬ್ಲುಐಸಿಇ) ಆಗ್ರಹಿಸಿದೆ.

ಓಟಿಟಿ ವೇದಿಕೆಗಳಲ್ಲಿ ಟರ್ಕಿ ಸಿನಿಮಾ ಹಾಗೂ ವೆಬ್ ಸೀರೀಸ್ಗಳನ್ನು ಬಹಿಷ್ಕರಿಸುವಂತೆ ನಾವು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಓಟಿಟಿ ವೇದಿಕೆಗಳಿಗೆ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆಯುತ್ತೇವೆ. ದೇಶದ ಸುರಕ್ಷಿತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಎಫ್ಡಬ್ಲುಐಸಿಇ ಒತ್ತಾಯಿಸಿದೆ.

ಕಾಶ್ಮೀರದ ವಿಷಯ ಸೇರಿದಂತೆ, ಟರ್ಕಿಯು ಪಾಕಿಸ್ತಾನಕ್ಕೆ ರಾಜತಾಂತ್ರಿಕ ಹಾಗೂ ಸೇನಾ ಸಹಾಯ ನೀಡುವ ಮೂಲಕ ಭಾರತದ ಐಕ್ಯತೆ ಹಾಗೂ ರಾಷ್ಟ್ರೀಯತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿತು.

ದೇಶದೆಲ್ಲೆಡೆ ಟರ್ಕಿಯ ಉತ್ಪನ್ನಗಳಿಗೆ ಬಾಯ್ಕಾಟ್ ಕೇಳಿಬರುತ್ತಿದೆ. ಇದೀಗ, ಪ್ರಮುಖ ಓಟಿಟಿ ವೇದಿಕೆಗಳಾದ ಅಮೇಜಾನ್ ಪ್ರೈಮ್ ವಿಡಿಯೊ, ನೆಟ್ಪ್ಲಿಕ್ಸ್, ಜಿಯೋ ಹಾಟ್ಸ್ಟಾರ್ ಮುಂತಾದ 'ಓಟಿಟಿ'ಗಳಿಂದ ಟರ್ಕಿ ಮೂಲದ ಸಿನಿಮಾಗಳನ್ನು ತೆರವುಗೊಳಿಸಲು ಆಗ್ರಹಿಸಲಾಗಿದೆ.

ಬಿನ್ಬಿರ್ ಗಿಸೆ, ಆ್ಯಸ್ ದಿ ಕ್ರೌವ್ ಪ್ಲೈಸ್, ಅನದರ್ ಸೆಲ್ಫ್, ಯಬನಿ, ಇಥೋಸ್ ಸೇರಿದಂತೆ 20ರ ದಶಕದ ಟರ್ಕಿ ಸಿನಿಮಾಗಳು, ಭಾರತದಲ್ಲಿ ಪ್ರಸಿದ್ಧಿ ಪಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.