ಬೆಂಗಳೂರು: ಹಸಿರು ತುಂಬಿದ ಹಿನ್ನೆಲೆ.. ಅದರಲ್ಲಿ ಬಳುಕುವ ಬಳ್ಳಿಯ ಹೂವಿನಂತೆ ಫೋಟೊಗೆ ಪೋಸ್ ನೀಡಿದ ನಟಿ ಮೌನಿ ರಾಯ್..
ಕೆಜಿಎಫ್ ಚಿತ್ರದ ಹಿಂದಿ ಆವೃತ್ತಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ನಟಿ ಮೌನಿ ರಾಯ್, ಇನ್‌ಸ್ಟಾಗ್ರಾಂನಲ್ಲಿ ಹಳೆಯ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಅದರಲ್ಲಿ ಹಸಿರಿನ ಹಿನ್ನೆಲೆಯಿದ್ದು, 'ಸೀಕ್ರೆಟ್ ಗಾರ್ಡನ್' ಎಂದು ಕರೆದಿದ್ದಾರೆ ಮೌನಿ ರಾಯ್.
ಮೌನಿ ಅವರು ಸಿನಿಮಾದಲ್ಲಿ ಮಾತ್ರವಲ್ಲದೆ, ಗಾಯನ ಮತ್ತು ನೃತ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಕಥಕ್ ನೃತ್ಯ ಪ್ರವೀಣೆಯಾಗಿರುವ ಮೌನಿ, ಹಿಂದಿ ಕಿರುತೆರೆಯಲ್ಲೂ ಹೆಸರು ಗಳಿಸಿದ್ದಾರೆ.
ಕಲರ್ಸ್ ವಾಹಿನಿಯ ನಾಗಿನ್ ಸರಣಿ ಧಾರಾವಾಹಿಗಳಲ್ಲಿ, ಸ್ಟಾರ್ ಪ್ಲಸ್‌ನ ವಿವಿಧ ಟಿವಿ ಶೋಗಳಲ್ಲಿ ಕೂಡ ಪಾತ್ರ ನಿರ್ವಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.