ಬುಧವಾರ, ಜನವರಿ 20, 2021
27 °C

‘ದೇವಾ ನೀನು’ ವಿಡಿಯೊ ಸಾಂಗ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ಲಾಸಿಕ್ ಮೀಡಿಯಾ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿರುವ ‘ದೇವಾ ನೀನು’ ವಿಡಿಯೊ ಆಲ್ಬಂ ಹಾಡು ಜನಮನ್ನಣೆ ಗಳಿಸುತ್ತಿದೆ. ಈ ಹಾಡಿಗೆ ಜಿಜೆ ಶಿವಾನಂದ ನಿರ್ದೇಶನವಿದ್ದು, ಅರ್ಫಾಜ್ ಉಳ್ಳಾಲ್ ದನಿ ನೀಡಿದ್ದಾರೆ. ಸನ್ಮಿತ್ ವಿಹಾನ್ ಹಾಗೂ ಪೂಜಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ವಿಡಿಯೊ ಅಲ್ಬಂಗೆ ಡಾ. ಸುನಿಲ್ ಕುಂಬಾರ್‌ ಹಾಗೂ ಶೈಲಜಾ ಪ್ರಕಾಶ್ ಹಣ ಹೂಡಿಕೆ ಮಾಡಿದ್ದಾರೆ. ಜೋಗಿ ಪ್ರೇಮ್, ಹರ್ಷಿಕಾ ಪೂಣಚ್ಚ, ಚಂದನ್ ಶೆಟ್ಟಿ, ಪೃಥ್ವಿ ಅಂಬರ್ , ಶ್ರುತಿ ಪ್ರಕಾಶ್, ಬಾಲ್‌ರಾಜ್‌ ವಾಡಿ, ಸ್ಕಂದ ಅಶೋಕ್, ರಘುರಾಮ್ ಮುಂತಾದ ಚಿತ್ರರಂಗದ ಗಣ್ಯರು ಈ ತಂಡಕ್ಕೆ ವಿಡಿಯೊ ಸಂದೇಶದ ಮುಖಾಂತರ ಶುಭ ಕೋರಿದ್ದಾರೆ.

ಸನ್ಮಿತ್ ಈಗಾಗಲೇ ಮಲೆನಾಡಿನ ಹೂವು ನೀ, ನೀಲಿ ನೀಲಿ ಆಕಾಶ, ಮೋಸಗಾತಿಯೇ ಹಾಡಿನ ಮೂಲಕ ಜನರಿಗೆ ಪರಿಚಿತರಾಗಿದ್ದಾರೆ. ಅಲ್ಲದೇ ಈ ನಟ ವಿಡಿಯೊ ಹಾಡಿನ ಮೂಲಕವೇ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದಾರೆ. ಹಾಡಿಗೆ ಭರತ್ ಇಂಡಿಯನ್ ಛಾಯಾಗ್ರಾಹಣವಿದ್ದು ಸುರಕ್ಷಿತ್ ಶೆಟ್ಟಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಹಾಡಿನ ಪ್ರತಿಕ್ರಿಯೆಗೆ ನೋಡಿ ಇನ್ನೊಂದು ವಿಡಿಯೊ ಹಾಡಿನ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ತಂಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು