‘ರಗಡ್’ ಟೀಸರ್‌ನಲ್ಲಿ ವಿನೋದ್‌ ಪ್ರಭಾಕರ್ ಖಡಕ್ ಲುಕ್

7

‘ರಗಡ್’ ಟೀಸರ್‌ನಲ್ಲಿ ವಿನೋದ್‌ ಪ್ರಭಾಕರ್ ಖಡಕ್ ಲುಕ್

Published:
Updated:

ವಿನೋದ್ ಪ್ರಭಾಕರ್ ಅಭಿನಯದ ಹೊಸ ಚಿತ್ರ ‘ರಗಡ್’. ಇದು ತೆರೆಗೆ ಬರಲು ಸಜ್ಜಾಗುತ್ತಿದ್ದು, ಇದಕ್ಕೆ ಪೂರಕವಾಗಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಅದಕ್ಕೊಂದು ಪುಟ್ಟ ಕಾರ್ಯಕ್ರಮ ಆಯೋಜಿಸಿ, ಆ ಕಾರ್ಯಕ್ರಮಕ್ಕೆ ಚಿತ್ರತಂಡ ಒಂದಿಷ್ಟು ಜನರನ್ನು ಆಹ್ವಾನಿಸಿತ್ತು.

‘ರಗಡ್’ ಚಿತ್ರದ ಟೀಸರ್‌ ಇರುವುದು ಒಂದು ನಿಮಿಷ ಹದಿನೈದು ಸೆಕೆಂಡ್‌ಗಳಷ್ಟು. ‘ನನ್ ಲವರ್ ಹೇಗಿರಬೇಕು ಗೊತ್ತಾ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಇದ್ದಾಂಗೆ ಇರಬೇಕು’ ಎಂದು ನಾಯಕಿ ಚೈತ್ರಾ ರೆಡ್ಡಿ ಟೀಸರ್‌ ಆರಂಭದಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲಿ ಹೇಳುತ್ತಾರೆ. ನಂತರದ ದೃಶ್ಯಗಳಲ್ಲಿ ಒಂದಿಷ್ಟು ಹೊಡಿ–ಬಡಿ ಸನ್ನಿವೇಶಗಳಿವೆ. ಇದರ ಬೆನ್ನಲ್ಲೇ ವಿನೋದ್ ಅವರ ಏಯ್ಟ್‌ ಪ್ಯಾಕ್‌ ದೇಹ ಕಾಣಿಸುತ್ತದೆ!

ಟೀಸರ್‌ನ ಕೊನೆಯಲ್ಲಿ ವಿನೋದ್ ಅವರು ಆವೇಶದಲ್ಲಿ ಒಂದು ಡೈಲಾಗ್‌ ಹೊಡೆಯುತ್ತಾರೆ. ಟೀಸರ್‌ನಲ್ಲಿ ಇರುವುದೆಲ್ಲ ಪಕ್ಕಾ ಆ್ಯಕ್ಷನ್‌ ಸಿನಿಮಾವೊಂದರ ಅಂಶಗಳಾದರೂ, ಚಿತ್ರದಲ್ಲಿ ಇದನ್ನು ಮೀರಿದ ಅಂಶಗಳೂ ಇವೆಯಂತೆ. ಇದರಲ್ಲಿ ಸೆಂಟಿಮೆಂಟ್‌ ಅಂಶಗಳೂ ಸಾಕಷ್ಟು ಇವೆ ಎನ್ನುವುದು ಚಿತ್ರತಂಡದ ಹೇಳಿಕೆ.

ವಿನೋದ್ ಪ್ರಭಾಕರ್ ಅವರ ಹುರಿಗಟ್ಟಿದ ದೇಹದ ಮಾಟ ಗಮನ ಸೆಳೆಯುವಂತಿದೆ. ನಾಯಕಿ ಚೈತ್ರಾ ರೆಡ್ಡಿಯ ಮುದ್ದು ಮುಖ ಇಷ್ಟವಾಗುತ್ತದೆ. ಮಹೇಶ್‌ಗೌಡ ಅವರು ಈ ಚಿತ್ರದ ನಿರ್ದೇಶಕರು. ಅರುಣ್‌ ಕುಮಾರ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

‘ರಗಡ್’ ನಾಯಕಿ ಚಿತ್ರಾರೆಡ್ಡಿ
‘ರಗಡ್’ ಚಿತ್ರದ ನಾಯಕಿ ಚಿತ್ರಾರೆಡ್ಡಿ

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !