ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪ್ರತಿಭೆಗಳಿಂದ ‘ಸ್ವರ ಗೀತೋತ್ಸವ’

Last Updated 23 ಡಿಸೆಂಬರ್ 2018, 15:29 IST
ಅಕ್ಷರ ಗಾತ್ರ

ಬಾಗೂರು ಕಲಾ ವೇದಿಕೆಯ ಆಶ್ರಯದಲ್ಲಿ ‘ಸ್ವರ ಗೀತೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗಾಯಕಿ ಇಂದೂ ವಿಶ್ವನಾಥ್ ಉದ್ಘಾಟಿಸಿದರು. ಅತಿಥಿಗಳಾಗಿ ಭರತನಾಟ್ಯ ಕಲಾವಿದೆ ಯಮುನಾ ಶ್ರೀನಿಧಿ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ವೆಂಕಟೇಶ್ ಆಲ್ಕೋಡ್ ಭಾಗವಹಿ
ಸಿದ್ದರು. ಅಧ್ಯಕ್ಷರಾಗಿ ಕವಿ ಬಾಗೂರು ಮಾರ್ಕಾಂಡೇಯ ಉಪಸ್ಥಿತರಿದ್ದರು.

‘ಶಾಸ್ತೀಯ ಸಂಗೀತ ಎಲ್ಲ ಪ್ರಾಕಾರಗಳಿಗೆ ಅಡಿಪಾಯವಿದ್ದಂತೆ. ಸಂಗೀತಗಾರರಿಗೆ ಈ ಅಡಿಪಾಯ ಅಗತ್ಯ’ ಎಂದುಇಂದೂ ವಿಶ್ವನಾಥ್ ಹೇಳಿದರು.

ಪಂಡಿತ್ ವೆಂಕಟೇಶ್ ಆಲ್ಕೋಡ್ ಅವರು ಮಾತನಾಡುತ್ತಾ, ಬೇರೆ ಸಂಗೀತ ಪ್ರಾಕಾರಗಳಿಂದ ಖುಷಿ ಸಿಕ್ಕರೆ ಶಾಸ್ತೀಯ ಸಂಗೀತ ಕೇಳುವುದರಿಂದ, ಹಾಡುವುದರಿಂದ ಮನಸಿಗೆ ನೆಮ್ಮದಿ ಸಿಗುತ್ತದೆ. ಕೆಲವು ರಾಗಗಳನ್ನು ಸಂಗೀತ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಎಂದು ತಿಳಿಸಿದರು.

ಯುವ ಪ್ರತಿಭೆಗಳಾದ ಆಶೀಷ್ ನಾಯಕ್ ಹಾಗೂ ರಕ್ಷಿತಾ ಆನಂದ್ ಸುಶ್ರಾವ್ಯವಾಗಿ ಬಿಹಾಗ್ ಹಾಗೂ ಶುದ್ಧ ಸಾರಂಗ್ ರಾಗಗಳನ್ನು ಪ್ರಸ್ತುತಪಡಿಸಿದರು. ಸಿತಾರ್ ವಾದನದಲ್ಲಿ ಋತ್ವಿಕ್ ರಾವ್ ಮಧುರವಾಗಿ ಯೆಮನ್ ರಾಗವನ್ನು ನುಡಿಸಿದರು. ಭಕ್ತಿ ಸಂಗೀತದಲ್ಲಿ ಪ್ರಶಾಂತ್ ನಾಯಕ್, ಅನುಷ್ಕಾ, ಸ್ವರ್ಣ ಬಾಗೂರು, ಸುಧಾ ಗಡಿಯಾರ, ಸ್ನೇಹಲತಾ, ಬಸಂತ್ ಹಾಡಿದರು. ಇವರೆಲ್ಲರಿಗೂ ಶಶಿಭೂಷಣ ಗುರ್ಜರ್ ತಬಲಾ ಹಾಗೂ ಸಂವಾದಿನಿಯಲ್ಲಿ ಗೌರವ್ ಗಡಿಯಾರ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT