ರಂಗದ ಮೇಲೆ ಇಂದಿರಾ!

7
Indira new drama

ರಂಗದ ಮೇಲೆ ಇಂದಿರಾ!

Published:
Updated:

ಕನ್ನಡ ರಂಗಭೂಮಿಯಲ್ಲಿ ಇಂದಿರಾ ಗಾಂಧಿ ಕುರಿತು ಬರುತ್ತಿರುವ ಪೂರ್ಣ ಪ್ರಮಾಣದ ಮೊದಲ ನಾಟಕವಿದು. ಚುನಾವಣೆ ಸಮೀಪದಲ್ಲಿರುವಾಗ ಇಂದಿರಾ ನಾಟಕವೇಕೆ ಎನ್ನುವ ಪ್ರಶ್ನೆ ಸಹಜ. ಅದಕ್ಕೆ ನಿರ್ದೇಶಕರು ಹೀಗೆ ಹೇಳುತ್ತಾರೆ– ಚುನಾವಣೆಗೂ ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಎಡಪಂಥವೂ ಅಲ್ಲ ಬಲಪಂಥವೂ ಅಲ್ಲ. ಇಂದಿರಾಳನ್ನು ರಂಗಕ್ಕೆ ತರಬೇಕೆಂದು ಎರಡು ವರ್ಷಗಳಿಂದ ಕಾರ್ಯನಿರತಳಾಗಿದ್ದೆ. ಅದಕ್ಕಾಗಿ ಅಧ್ಯಯನ ಮಾಡಿ, ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ನಾಟಕ ಬರೆದು ನಿರ್ದೇಶಿಸಿದ್ದೇನೆ.

ಇಂದಿರಾ ತಾನು ಮಾಡದೇ ಇರುವ ಅನೇಕ ತಪ್ಪುಗಳಿಗಾಗಿ ಬಲಿತೆತ್ತಿದ್ದಾರೆ. ಅಮೃತಸರದ ಸ್ವರ್ಣಮಂದಿರ ದಾಳಿ ನಡೆಸಲು ಅವರಿಗೆ ಇಷ್ಟವಿರಲಿಲ್ಲ. ಅದೊಂದು ಸಾಮೂಹಿಕ ನಿರ್ಧಾರವಾಗಿತ್ತು. ಆದರೆ, ಅದಕ್ಕೆ ಕೊನೆಗೆ ಇಂದಿರಾ  ಬಲಿಯಾಗಬೇಕಾಯಿತು. ಈ ನಾಟಕದಲ್ಲಿ 1967ರಿಂದ 84ರ ತನಕ ಇಂದಿರಾ ಇದ್ದಾರೆ. ನಾಟಕದಲ್ಲಿ ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನದ ನೈಜ ಘಟನೆಗಳಿಗೆ ನಾಟಕೀಯ ಸ್ಪರ್ಶ ನೀಡಲಾಗಿದೆ.


ದಿವ್ಯಾ ಕಾರಂತ್

ಇಂದಿರಾ ಒಲ್ಲದ ಮನಸ್ಸಿನಿಂದಲೇ ರಾಜಕಾರಣ ಪ್ರವೇಶಿಸಿದವರು. ಅವರು ಅಸಾಧಾರಣ ಬುದ್ಧಿವಂತೆಯಾಗಿರಲಿಲ್ಲ. ಸಾಮಾನ್ಯ ಹೆಣ್ಣುಮಕ್ಕಳಂತಿದ್ದರು. ರಾಜಕಾರಣಕ್ಕೆ ಪ್ರವೇಶಿಸಿ ಎಲ್ಲವನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಗಟ್ಟಿಯಾದ ವ್ಯಕ್ತಿತ್ವದಿಂದಾಗಿ ಜಗತ್ತಿನ ಗಮನಸೆಳೆದರು. ಮೊದಲ ಮಹಿಳಾ ಪ್ರಧಾನಿಯಾದರು. ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಇಂದಿರಾ ಮನುಷ್ಯ ಸಹಜವಾದ ತಪ್ಪುಗಳನ್ನು ಮಾಡಿದ್ದಾರೆ. ಅದನ್ನೂ ರಂಗದ ಮೇಲೆ ತರಲು ಪ್ರಯತ್ನಿಸಿದ್ದೇನೆ.

‘ಇಂದಿರಾ’ ನಾಟಕ ನೋಡಲು ಬರುವವರು ಪೂರ್ವಗ್ರಹಪೀಡಿತರಾಗಿ ಬರಬಹುದು. ರಾಜಕೀಯ ಪಕ್ಷದವರಿಗೆ ನಿರಾಸೆಯಾಗಲೂಬಹುದು. ಈಗಾಗಲೇ ನಾಟಕದ ಬಗ್ಗೆ ಹಲವರು ಟೀಕಿಸಿದ್ದಾರೆ. ಇಂದಿರಾ ಪಾತ್ರವನ್ನು ನಾನೇ ಮಾಡ್ತಾ ಇದ್ದೀನಿ. ಇಂದಿರಾ ಪಾತ್ರಕ್ಕೆ ಇಂಗ್ಲಿಷ್ ರಂಗಭೂಮಿಯ ಇಬ್ಬರು ನಟಿಯರನ್ನು ಆಯ್ಕೆ ಮಾಡಿದ್ದೆ. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಕೊನೆಗೆ ನಾನೇ ಈ ಪಾತ್ರ ಮಾಡುವ ಅನಿವಾರ್ಯತೆ ಉಂಟಾಯಿತು. ಮುಂದಿನ ಷೋಗಳಲ್ಲಿ ಯಾರಾದರೂ ಸಿಗಬಹುದು ಎಂಬ ನಿರೀಕ್ಷೆ ನನ್ನದು. ಇಂದಿಗೂ ಇಂದಿರಾ ಮಹಿಳೆಯರಿಗೆ ಮಾದರಿ ಅನ್ನುವುದು ನನ್ನ ಅಭಿಪ್ರಾಯ. 

‘ಇಂದಿರಾ’ ನಾಟಕ ಪ್ರದರ್ಶನ: ರಚನೆ, ನಿರ್ದೇಶನ–ದಿವ್ಯಾ ಕಾರಂತ್. ಪ್ರಸ್ತುತಿ–ಅಂಕೋರ್. ಸ್ಥಳ– ಕೆ.ಎಚ್. ಕಲಾಸೌಧ, ಹನುಮಂತ ನಗರ, ಫೆ.2ಕ್ಕೆ ರಾತ್ರಿ 7.30. ಫೆ. 3ರಂದು ಪ್ರಯೋಗ್ ಸ್ಟುಡಿಯೊ, ಬನಶಂಕರಿ, ಸಂಜೆ 4.30 ಮತ್ತು ರಾತ್ರಿ 7.30. ನಾಟಕದ ಅವಧಿ: 1ಗಂಟೆ 15 ನಿಮಿಷ, ಟಿಕೆಟ್ ದರ ₹ 150

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !