ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯವಾಗಿರಲು ಹೋಗಿದ್ದೇ ಹಿನ್ನಡೆಯಾಯ್ತು–Bigg Boss ಮನೆಯಿಂದ ಹೊರಬಂದ ಸ್ನೇಹಿತ್‌

Published 11 ಡಿಸೆಂಬರ್ 2023, 8:06 IST
Last Updated 11 ಡಿಸೆಂಬರ್ 2023, 8:06 IST
ಅಕ್ಷರ ಗಾತ್ರ

64 ದಿನಗಳ ಸುಧೀರ್ಘ ಪ್ರಯಾಣ ಮುಗಿಸಿದ ಸ್ನೇಹಿತ್, ಬಿಗ್‌ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಸ್ನೇಹಿತ್‌, ಈ ಸೀಸನ್‌ ಕೊನೆಯ ಕ್ಯಾಪ್ಟನ್ ಕೂಡ ಆಗುವ ಸಾಧ್ಯತೆಯನ್ನು ತೆರೆದಿಟ್ಟೇ ಹೋಗಿದ್ದಾರೆ. ಯಾಕೆಂದರೆ ಅವರೇ ಮನೆಯ ಕ್ಯಾಪ್ಟನ್‌ ರೂಮ್‌ಗೆ ಬೀಗ ಹಾಕಿದ್ದಾರೆ!. ಬಿಗ್‌ ಬಾಸ್‌ ಪಯಣ ಮುಗಿಸಿ ಹೊರಬಂದ ಸ್ನೇಹಿತ್‌ ಜಿಯೊ ಸಿನಿಮಾಗೆ ಸಂದರ್ಶನ ನೀಡಿದ್ದಾರೆ. ಆಟದಲ್ಲಿನ ಛಲ, ನಮ್ರತಾ ಜೊತೆಗಿನ ಸ್ಮರಣೀಯ ಕ್ಷಣಗಳು, ವಿನಯ್‌ ಜೊತೆಗಿನ ಸ್ನೇಹ, ಕ್ಯಾಪ್ಟನ್ ಆದಾಗ ಮಾಡಿದ ತಪ್ಪುಗಳು ಎಲ್ಲದರ ಬಗ್ಗೆಯೂ ಸ್ನೇಹಿತ್ ಮನಬಿಚ್ಚಿ ಮಾತಾಡಿದ್ದಾರೆ.

64 ದಿನ ಬಿಗ್‌ಬಾಸ್ ಮನೆಯಲ್ಲಿದ್ದು ಹೊರಗೆ ಬಂದಿದ್ದೀನಿ. ಒಂದು ಕ್ಷಣವೂ ನನಗೆ ಪಶ್ಚಾತ್ತಾಪ ಕಾಡುತ್ತಿಲ್ಲ. ಪ್ರತಿ ವಾರವನ್ನು ನಾನು ನನ್ನ ಕೊನೆಯ ವಾರ ಎಂದುಕೊಂಡೇ ಆಡಿದ್ದೇನೆ. ಒಂದು ವಾರ ಗೆದ್ದಿರಬಹುದು, ಒಂದು ವಾರ ಸೋತಿರಬಹುದು ಎನ್ನುತ್ತಾರೆ ಸ್ನೇಹಿತ್‌.

ನಿರೀಕ್ಷಿಸಿದ್ದೆ…

ಎಲ್ಲೋ ಒಳಗಡೆ ಫೀಲಿಂಗ್ ಇತ್ತು. ಸಂಜೆ ಮನೆಯೊಳಗೆ ಕೂತಾಗ, ಇವತ್ತು ಹೊರಗೆ ಹೋಗಿ ತಾಜಾ ಗಾಳಿ ಉಸಿರಾಡುತ್ತೇನೆ ಎಂದು ಅನಿಸಿತ್ತು. ನನ್ನ ಇನ್‌ಸ್ಟಿಂಕ್ಟ್‌ ತುಂಬ ಸ್ಟ್ರಾಂಗ್ ಇದೆ. ಆ ಇನ್‌ಸ್ಟಿಂಕ್ಟ್‌ ಇವತ್ತು ಎಲ್ಲೋ ಹೊಡಿತಿತ್ತು, ಇವತ್ತೇ ನನ್ನ ಕೊನೆಯ ದಿನ ಅಂತ..

ತಪ್ಪು ಮಾಡಿದ್ದೇನೆ…

ನನಗೆ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಕೊಟ್ಟಾಗ ಒಂದಿಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳಿಂದ ಒಂದಿಷ್ಟು ಜನ ತೊಂದರೆಯನ್ನೂ ಅನುಭವಿಸಿದ್ದಾರೆ. ಆ ಕೊರಗು ನನಗೆ ಕೊನೆಯತನಕ ಕಾಡುತ್ತದೆ. ಅದೊಂದನ್ನು ಬಿಟ್ಟರೆ, ನನ್ನ ಪ್ರಕಾರ ನನ್ನ ಸ್ನೇಹಿತರ ಜತೆ ಹೇಗಿರ್ತೀನೋ ಹಾಗೇ ಇರ್ತಾ ಇದ್ದೆ. ಅವ್ರಿಗೋಸ್ಕರ ಜೀವಕೊಡಲೂ ಸಿದ್ಧವಾಗ್ತಿದ್ದೆ. ಯಾರು ಆಗಲ್ವೋ ಅವ್ರು ಆಗಲ್ಲ ಅಷ್ಟೆ. ತೀರಾ, ಆಟಕ್ಕೊಸ್ಕರ ರಾಜಿ ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್‌ಗೆ ಕೊನೆ ಕ್ಷಣದ ತನಕವೂ ನಿಷ್ಠನಾಗಿದ್ದೆ. ನಂಗೆ ಯಾರು ಆಗಲ್ವೋ ಅವರನ್ನು ನಿರ್ಲಕ್ಷ ಮಾಡ್ತಿದ್ದೆ.

ಕಳೆದ ವಾರ ಬೆಸ್ಟ್ ವಾರ

ನಾನು ಕಳೆದ ವಾರ ಎಲಿಮಿನೇಷನ್‌ನಲ್ಲಿದ್ದ ಕೊನೆಯ ಇಬ್ಬರು ಸ್ಫರ್ಧಿಗಳಲ್ಲಿ ನಾನೂ ಒಬ್ಬನಾಗಿದ್ದೆ. ನನ್ನ ಪ್ರಕಾರ ಆ ವಾರ ನನ್ನ ಬೆಸ್ಟ್ ವಾರ. ಎಷ್ಟು ಟಾಸ್ಕ್ ಗೆದ್ದಿದೀನಿ ಅಂದ್ರೆ, ಮನೆಯಲ್ಲಿ ಸುಮಾರು ಜನ ಇಷ್ಟು ವಾರಗಳಲ್ಲಿಯೂ ಅಷ್ಟೊಂದು ಟಾಸ್ಕ್ ಗೆದ್ದಿಲ್ಲ. ಆದರೆ ಯಾಕೆ ಬಾಟಮ್‌ ಟು ನಲ್ಲಿದ್ದೆ ಎಂದು ಗೊತ್ತಾಗಿರಲಿಲ್ಲ. ಗೊತ್ತಿಲ್ಲ ನನಗೆ, ನನ್ನ ಭಾಷೆಯೋ ಏನೋ ಒಂದು ಜನರ ಜೊತೆಗೆ ಕನೆಕ್ಟ್ ಆಗಿಲ್ವೇನೋ. ಅದನ್ನು ನಾನು ತಿದ್ದಿಕೊಳ್ಳಲು ಪ್ರಯತ್ನಿಸಿದ್ದೀನಿ. ಆದಷ್ಟೂ ಕನ್ನಡ ಮಾತಾಡಲು ಟ್ರೈ ಮಾಡಿದೀನಿ.

ಇಷ್ಟು ದಿನ ಇದ್ದಿದ್ದೇ ದೊಡ್ಡದು!

ನನ್ನ ಪ್ರಕಾರ ನಾನು ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿದ್ದಿದ್ದೇ ದೊಡ್ಡ ವಿಷಯ. ನನಗೆ ಯಾವುದೇ ರೀತಿಯ ಅಧಿಕಾರಿ ನಿಯಮಗಳನ್ನು ಅನುಸರಿಸುವುದು ತುಂಬ ಕಷ್ಟ. ಅಷ್ಟು ದಿನ ಬಿಗ್‌ಬಾಸ್‌ ಮನೆಯಲ್ಲಿದ್ದು, ಅಲ್ಲಿನ ನಿಯಮಗಳನ್ನು ಅನುಸರಿಸಿ ಇದ್ದಿದ್ದೇ ದೊಡ್ಡ ವಿಷಯ.

ಮತ್ತೆ ಮನೆಯೊಳಗೆ ಹೋದರೆ…?

ಮತ್ತೆ ಬಿಗ್‌ಬಾಸ್ ಮನೆಯೊಳಗೆ ಹೋದರೆ ನಾನು ನನ್ನ ಆಟದಲ್ಲಿ ಏನೂ ಬದಲಾವಣೆ ಮಾಡ್ಕೊಳಲ್ಲ. ಈಗ ಆಡುತ್ತಿದ್ದಷ್ಟೇ ಅಗ್ರೆಸಿವ್ ಆಗಿ ಆಡುತ್ತೇನೆ. ಯಾರ ಜೊತೆಯಲ್ಲಿ ಫ್ರೆಂಡ್ ಆಗಿದ್ನೋ ಅವರ ಜೊತೆಗೇ ಸ್ನೇಹ ಮುಂದುವರಿಸುತ್ತೇನೆ. ಮನೆಯಲ್ಲಿ ಇನ್ನೊಂದಿಷ್ಟು ಜನರ ಜೊತೆ ನನಗೆ ಹೊಂದಿಕೆ ಆಗುವುದಿಲ್ಲ. ಅವ್ರ ಆದ್ಯತೆಗಳೇ ಬೇರೆ, ನನ್ನ ಆದ್ಯತೆಗಳೇ ಬೇರೆ. ಹಾಗಾಗಿ ಈಗ ನನ್ನನ್ನು ಬಿಗ್‌ಬಾಸ್ ಮನೆಯೊಳಗೆ ವಾಪಸ್ ಕಳಿಸಿದರೂ ನಾನು ಹಾಗೆಯೇ ಇರ್ತೀನಿ ಹೊರತು ಬದಲಾಗುವುದಿಲ್ಲ.

ನಮ್ಮ ಸ್ನೇಹ ಪ್ರಾಮಾಣಿಕವಾಗಿತ್ತು

ನಾವು ಇಲ್ಲಿ ಎಲ್ಲವನ್ನೂ ಬಿಟ್ಟು ಹೋಗಿರುತ್ತೇವೆ. ನಮ್ಮ ಅಪ್ಪ-ಅಮ್ಮ, ಫ್ರೆಂಡ್ಸ್ ಎಲ್ಲರನ್ನೂ ಬಿಟ್ಟು ಬಿಗ್‌ಬಾಸ್ ಮನೆಗೆ ಹೋಗಿರುತ್ತೇವೆ ಅಲ್ಲಿ ನಮ್ಮ ಫಿಲಾಸಫಿಗೆ ನಮ್ಮ ಸಿದ್ದಾಂತಗಳಿಗೆ ಹೊಂದಿಕೆಯಾಗುವವರನ್ನು ಹುಡುಕಿಕೊಳ್ಳುತ್ತೀವಿ. ನಾನು, ವಿನಯ್ ಮತ್ತು ನಮ್ರತಾ ಬಂಧನ ಅಷ್ಟೇ ಜೆನ್ಯೂನ್ ಆಗಿತ್ತು. ಅದನ್ನು ನೋಡಿ ಉಳಿದವರು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದರು. ನಮ್ಮ ಮೂರುಜನರಲ್ಲಿ ಯಾರನ್ನೋ ಸೇವ್ ಮಾಡಿ, ಇನ್ಯಾರನ್ನೋ ನಾಮಿನೇಟ್ ಮಾಡಿದರೆ ಅವರು ಬಂದು ಪ್ರಶ್ನೆ ಮಾಡುತ್ತಿರಲಿಲ್ಲ. ಆ ಸ್ನೇಹದ ಬಗ್ಗೆ ನನಗೆ ಹೆಮ್ಮೆ ಇದೆ. ಅದೇ ನನ್ನ ಸಮಸ್ಯೆಯಾಗಿದ್ದರೆ ಇಟ್ಸ್ ಓಕೆ.

ಕ್ಯಾಪ್ಟನ್ ಆದ ಅನುಭವ

ಮೊದಲ ವಾರ ನನಗೆ ಕ್ಯಾಪ್ಟನ್ ಆಗುವ ಆತ್ಮವಿಶ್ವಾಸವೇ ಇರಲಿಲ್ಲ. ಆದರೆ ಆ ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡಿದೆ. ಲೈಫ್‌ನಲ್ಲಿ ರೂಲ್ಸ್ ಫಾಲೊ ಮಾಡಿಯೇ ಗೊತ್ತಿಲ್ಲ ನನಗೆ. ಅಂಥವನು ಮನೆಯ ಕ್ಯಾಪ್ಟನ್ ಆದ್ರೆ ಏನಾಗುತ್ತದೆ ಎಂದು ಜನರು ನೋಡಿರುತ್ತಾರೆ. ಆಗ ಸಮರ್ಥರು-ಅಸಮರ್ಥರು ಎಂದೆಲ್ಲ ಏನೇನೋ ಇಕ್ವೆಷನ್ಸ್ ಇತ್ತು ಮನೆಯಲ್ಲಿ.

ಎರಡನೇ ಕ್ಯಾಪ್ಟನ್ಸಿ ಇನ್ನಷ್ಟು ಕ್ರೇಜಿಯಾಗಿತ್ತು. ಯಾಕಂದ್ರೆ ದುಪ್ಪಟ್ಟು ಅಧಿಕಾರ ಇತ್ತು. ನನ್ನ ಪ್ರಕಾರ ಬಿಗ್‌ಬಾಸ್ ಯಾವುದೇ ಸೀಸನ್‌ನಲ್ಲಿಯೂ ಕ್ಯಾಪ್ಟನ್‌ಗೆ ಅಷ್ಟೊಂದು ಅಧಿಕಾರ ಕೊಟ್ಟಿರಲಿಲ್ಲ. ಅಷ್ಟು ಪವರ್ ನನಗೆ ಕೊಟ್ಟಿತ್ತು. ನಾನು ತುಂಬ ಕಷ್ಟಪಟ್ಟು ಆ ಕ್ಯಾಪ್ಟನ್ ಷಿಪ್‌ ಗೆದ್ದಿದ್ದೆ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಮನೆಯ ಫಸ್ಟ್ ಕ್ಯಾಪ್ಟನ್ ಸ್ನೇಹಿತ್, ಲಾಸ್ಟ್ ಕ್ಯಾಪ್ಟನ್ ಸ್ನೇಹಿತ್ ಮತ್ತು ಮನೆಯ ಕ್ಯಾಪ್ಟನ್ ರೂಮನ್ನು ಬ್ಲಾಕ್ ಮಾಡಿದ್ದೂ ಸ್ನೇಹಿತ್.

ಕ್ಯಾಪ್ಟನ್ಸಿ ಎನ್ನುವುದು ನಮ್ಮ ಸಾಮರ್ಥ್ಯದ ಮೇಲೆ ಆಗಿದ್ದು. ಯಾರೋ ವೋಟ್ ಮಾಡಿ ಆಗಿದ್ದಲ್ಲ. ಹಾಗಾಗಿ ನನಗೆ ಏನು ಸೂಕ್ತ ಅನಿಸುತ್ತದೆಯೋ ಅದನ್ನೇ ಮಾಡಬೇಕು. ನಾನು ಮಾಡಿರವುದೂ ಅದನ್ನೇ. ಎಲ್ಲೋ ಕೊನೆಯಲ್ಲಿ ಫೇರ್ ಆಗಿರಬೇಕು ಎಂದು ಏನೋ ಮಾಡೋಕೆ ಹೋದೆ. ಅದು ಬ್ಯಾಕ್‌ಫೈರ್ ಆಯ್ತು. ನಾನು ಮೊದಲು ಇದ್ದ ಹಾಗೆಯೇ ಇದ್ದಿದ್ದರೆ, ನಮ್ರತಾನೋ, ವಿನಯ್‌ ಕ್ಯಾಪ್ಟನ್ ಆಗಿರ್ತಿದ್ರು. ಅದರ ಬಗ್ಗೆ ಪಶ್ಚಾತ್ತಾಪ ಇದೆ.

ನಮ್ರತಾ ಬಗೆಗಿನ ಆಕರ್ಷಣೆ ಜೆನ್ಯೂನ್!

ನಮ್ರತಾ ಬಗ್ಗೆ ಏನೇನೋ ಹೇಳಿದೇನೋ ಅದೆಲ್ಲವೂ ಜೆನ್ಯೂನ್. ನನಗೆ ಅವರ ಬಗ್ಗೆ ಫೀಲಿಂಗ್ ಇತ್ತು. ಅದನ್ನು ಹೇಳಿಕೊಂಡಿದ್ದೀನಿ. ಅದು ಎಲ್ಲರಿಗೂ ಗೊತ್ತು ಕೂಡ. ಅದನ್ನು ನಾನು ಕ್ಯಾಮೆರಾ ಮೊಮೆಂಟ್‌ಗೊಸ್ಕರ ಹೇಳಿದ್ದು ಅಲ್ಲವೇ ಅಲ್ಲ. ಅದು ಅವರಿಗೂ ಗೊತ್ತು.

ನನ್ನ ಪ್ರಕಾರ ಜೆನ್ಯೂನ್ ಆಗಿರುವುದು ಮೈಕಲ್, ವಿನಯ್, ನಮ್ರತಾ ಅಷ್ಟೆ. ನನ್ನ ಪ್ರಕಾರ ಫೇಕ್ ಆಗಿರುವುದು ಸಂಗೀತಾ,

ಟಾಪ್‌ 5ನಲ್ಲಿ ವರ್ತೂರ್ ಇರ್ತಾರೆ, ಪ್ರತಾಪ್ ಇರ್ತಾರೆ, ವಿನಯ್ ಇರ್ತಾರೆ. ಇನ್ನೊಂದೆರಡು ಜಾಗ ಓಪನ್ ಇದೆ. ತುಕಾಲಿ ಅವರು ಇರಬಹುದು. ಕಾರ್ತಿಕ್-ಸಂಗೀತಾ ಮಧ್ಯದಲ್ಲಿ ಇಬ್ಬರಲ್ಲಿ ಒಬ್ಬರು ಇರಬಹುದು. ಇಲ್ಲ ಇಬ್ಬರೂ ಇರಬಹುದು.

ನನಗೆ ವಿನಯ್ ವಿನ್ ಆಗಬೇಕು ಎಂದಿದೆ. ವರ್ತೂರ್, ಪ್ರತಾಪ್ ಮಧ್ಯದಲ್ಲಿ ಯಾರಾದರೂ ಆಗಲೂಬಹುದು.

ಫನ್ ಫ್ರೈಡೆ ಮಜವೇ ಬೇರೆ

ಫನ್‌ ಫ್ರೈಡೆ ಟಾಸ್ಕ್‌ಗಳನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ಅದರಲ್ಲಿ ಆನೆ ಚಿತ್ರಕ್ಕೆ ಬಾಲ ಬರೆಯುವ ಟಾಸ್ಕ್‌ ಸಖತ್ ಎಂಜಾಯ್ ಮಾಡಿದೆ. ಒಂದು ಸಿಕ್ರೇಟ್ ಏನೆಂದರೆ ನನಗೆ ಕಣ್ಣು ಕಟ್ಟಿದ್ದರೂ ಕೆಳಗಡೆ ಕಾಣುತ್ತಿತ್ತು. ಕಂಡರೂ ಅಷ್ಟು ಕೆಟ್ಟದಾಗಿ ಆನೆ ಬಾಲ ಬರೆದಿದ್ದೆ ಅಂದ್ರೆ, ನನ್ನ ಚಿತ್ರಕಲೆ ಎಷ್ಟು ಚೆನ್ನಾಗಿದೆ ನೀವೇ ಊಹಿಸಿಕೊಳ್ಳಿ!

ಮಿಸ್‌ ಮಾಡಿಕೊಳ್ಳುವುದು

ಎಲ್ಲ ಲೈಟ್ಸ್ ಆಫ್ ಆದಮೇಲೆ ನಾನು ನಮ್ರತಾ, ವಿನಯ್ ಕೂತುಕೊಂಡು ಮಾತಾಡ್ತಿದ್ವಿ. ಅದು ನಮ್ಮ ‘ಮೀ ಟೈಮ್’. ನಾವು ಒಟ್ಟಿಗೇ ಒಂದಿಷ್ಟು ಹೊತ್ತು ಕಾಲ ಕಳೆಯುತ್ತಿದ್ದೆವು. ಫಸ್ಟ್‌ ಕ್ಯಾಪ್ಟನ್ಸಿ ಗೆದ್ದು ನನ್ನಮ್ಮಂಗೆ ಡೆಡಿಕೇಟ್ ಆಗಿದ್ದನ್ನು ಯಾವತ್ತೂ ಮರೆಯಲ್ಲ. ಅದು ನನ್ನಮ್ಮಂಗೂ ಮೆಮರಬಲ್ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT