ಜ್ಯೂಸ್‌ ಮಾರಿದ ‘ಡಾಲಿ’

7

ಜ್ಯೂಸ್‌ ಮಾರಿದ ‘ಡಾಲಿ’

Published:
Updated:
Deccan Herald

ಕಳೆದ ವಾರ ಉದಯ ವಾಹಿನಿಯ ‘ಸದಾ ನಿಮ್ಮೊಂದಿಗೆ’ ಸಂಚಿಕೆಯಲ್ಲಿ ವಿದ್ಯುತ್‌ ಸ್ಪರ್ಶದಿಂದ ತನ್ನ ಎರಡು ಕೈಗಳು ಹಾಗೂ ಒಂದು ಕಾಲು ಕಳೆದುಕೊಂಡಿದ್ದ ನಾಗೇಶ್‍ ಅವರಿಗಾಗಿ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್ ಬೇಲ್‍ಪೂರಿ, ಪಾನಿಪೂರಿ, ಮಸಾಲೆ ಪೂರಿ ಮಾರಾಟ ಮಾಡಿ ಆಸರೆಯಾಗಿದ್ದರು.

ಈ ವಾರದ ಸಂಚಿಕೆ ಕುತೂಹಲಕಾರಿಯಾಗಿದೆ. ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಮನೆಯ ಯಜಮಾನ ರವಿ ಅವರು ಪಾರ್ಶ್ವವಾಯುವಿನಿಂದ ಬಲಗೈ ಸ್ವಾಧೀನ ಕಳೆದುಕೊಂಡಿದ್ದಾರೆ. ಇದರಿಂದ ಕುಟುಂಬದ ನಿರ್ವಹಣೆ ಅವರಿಗೆ ಕಷ್ಟವಾಗಿದೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಈ ಇಬ್ಬರು ತಂದೆಯ ಹಾಗೆಯೇ ಬೆಳಗಿನ ಜಾವ ಐದು ಗಂಟೆಗೆ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿದು ಮಾರಿ ಅದರಿಂದ ಬಂದ ಹಣದಿಂದ ತಂದೆಯ ಚಿಕಿತ್ಸೆ ಮತ್ತು ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಅದರ ಜೊತೆಗೆ ವಿದ್ಯಾಭ್ಯಾಸವನ್ನು ಬಿಡದೆ ಸಂಸಾರವನ್ನೂ ನಡೆಸುತ್ತಾ ಬಂದಿದ್ದಾರೆ.

ಕುಟುಂಬದ ನಿರ್ವಹಣೆಯ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಲು ಈ ಇಬ್ಬರಿಗೂ ಹಲವು ಸಮಸ್ಯೆಗಳು ಎದುರಾಗಿವೆ. ಈ ಕುಟುಂಬಕ್ಕೆ ಸಹಾಯಹಸ್ತ ನೀಡಲು ಈ ವಾರದ ‘ಸದಾ ನಿಮ್ಮೊಂದಿಗೆ’ ಸಂಚಿಕೆಯಲ್ಲಿ ‘ಟಗರು’ ಚಿತ್ರದ ಖ್ಯಾತಿಯ ‘ಡಾಲಿ’ ಧನಂಜಯ್ ಜನಸಾಮಾನ್ಯರಂತೆ ಕೆಲಸ ಮಾಡಿ ಸಂಕಷ್ಟದಲ್ಲಿರುವ ರವಿ ಕುಟುಂಬಕ್ಕೆ ಕೈಜೋಡಿಸಿದ್ದಾರೆ.

ಎನ್.ಆರ್. ಕಾಲೊನಿಯ ಬಸ್‌ನಿಲ್ದಾಣದ ಬಳಿಯಲ್ಲಿ ಮೂಸಂಬಿ ಜ್ಯೂಸ್ ಮಾರುತ್ತಾ ಆರೋಗ್ಯದ ಬಗ್ಗೆ ಸಲಹೆ ಕೊಡುತ್ತಾ ಧನಂಜಯ್ ಹಣ ಸಂಗ್ರಹಿಸಿ ರವಿ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಲಿದ್ದಾರೆ. ಧನಂಜಯ್ ಅವರು ಸಂಗ್ರಹಿಸಿ ರವಿ ಕುಟುಂಬಕ್ಕೆ ಕೊಟ್ಟ ಹಣ ಎಷ್ಟು? ಎಂಬುದು ಇದೇ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಪ್ರಸಾರವಾಗಲಿದೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !