ಸೋಮವಾರ, ಮಾರ್ಚ್ 30, 2020
19 °C

ಕುತೂಹಲದ ಘಟ್ಟದಲ್ಲಿ ಮೌನರಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಣ್ಣು ಭ್ರೂಣ ಹತ್ಯೆಯ ಕಥಾಹಂದರ ಹೊಂದಿರುವ ಧಾರಾವಾಹಿ ‘ಮೌನರಾಗ’. ಇದು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದು ಈಗ 80 ಸಂಚಿಕೆಗಳನ್ನು ಪೂರೈಸಿದೆ.

ರಾಗಾಳನ್ನು ತನ್ನ ಮಗಳೆಂದು ಒಪ್ಪದ ತಂದೆ ಸೀನಪ್ಪ, ಅವಳನ್ನು ಮನೆಯಿಂದ ಹೊರಹಾಕುತ್ತಾನೆ. ಮನೆಯ ಹೊರಗೆ ಚಿಕ್ಕ ಗುಡಿಸಲಿನಲ್ಲಿ ಬಾಲ್ಯ ಕಳೆಯುವ ರಾಗಾ, ಶಿಕ್ಷಣ ಪಡೆಯುವ ಅವಕಾಶ ಕಳೆದುಕೊಳ್ಳುತ್ತಾಳೆ. ತನ್ನದೇ ಮನೆಯಲ್ಲಿ ಕೆಲಸದವಳಂತೆ ಜೀವನ ನಡೆಸುತ್ತಾಳೆ. ಆದರೆ, ದೊಡ್ಡವಳಾದ ನಂತರ ತಂದೆ, ತಾಯಿ, ಅಕ್ಕ ಮತ್ತು ತಮ್ಮನನ್ನು ಸಾಕುವ ಜವಾಬ್ದಾರಿ ಹೊರುತ್ತಾಳೆ.

ಹುಟ್ಟಿದಾಗಿನಿಂದ ಕಷ್ಟವನ್ನೇ ಅನುಭವಿಸಿದ ರಾಗಾ, ಈಗ ತನ್ನ ಪ್ರೀತಿಯನ್ನು ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾಳೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಂಕಿತ್, ರಾಗಾಳಿಂದ ದೂರವಾಗುವ ಸನ್ನಿವೇಶ ಎದುರಾಗಿದೆ. ಮಾತು ಬಾರದ ರಾಗಾ ಈ ಆಪತ್ತಿಗೆ ಪರಿಹಾರ ಕಂಡುಕೊಳ್ಳುತ್ತಾಳಾ, ಪ್ರೀತಿಯನ್ನು ಉಳಿಸಿಕೊಳ್ಳುತ್ತಾಳಾ ಎನ್ನುವ ಕುತೂಹಲದ ಘಟ್ಟಕ್ಕೆ ‘ಮೌನರಾಗ’ದ ಕಥೆ ಬಂದು ನಿಂತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು