ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | ಶಾಕಿಂಗ್ ಎಲಿಮಿನೇಷನ್‌: ಬಿಗ್‌ಬಾಸ್‌ ಮನೆಯಿಂದ ತನಿಶಾ ಔಟ್‌?

Published 18 ಜನವರಿ 2024, 7:19 IST
Last Updated 18 ಜನವರಿ 2024, 7:19 IST
ಅಕ್ಷರ ಗಾತ್ರ

ಬಿಗ್‌ಬಾಸ್‌ ಸೂಚಿಸಿದ ಸದಸ್ಯರು ಈ ಕೂಡಲೇ ಮುಖ್ಯದ್ವಾರದಿಂದ ಹೊರಬರಬೇಕು.... ಹೀಗೆ ಬಿಗ್‌ಬಾಸ್ ಧ್ವನಿ ಮನೆಯೊಳಗೆ ಮೊಳಗುತ್ತಿದ್ದಂತೆ ಸ್ಪರ್ಧಿಗಳ ಮುಖದಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ಹೌದು, ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್‌ವೊಂದು ನಡೆದಿರುವ ಹಾಗಿದೆ. ಕಳೆದ ವಾರ ಹೋಲ್ಡ್‌ನಲ್ಲಿ ಇರಿಸಿದ್ದ ಎಲಿಮಿನೇಷನ್‌ ಪ್ರಕ್ರಿಯೆಗೆ ಈಗ ಇದ್ದಕ್ಕಿದ್ದಂತೆಯೇ ಬಿಗ್‌ಬಾಸ್‌ ಚಾಲನೆ ಕೊಟ್ಟಿದೆ. ಇಂದು ಬಿಡುಗಡೆ ಮಾಡಿದ ಪ್ರೊಮೊದಲ್ಲಿ ತನಿಶಾ ಅವರನ್ನು ಎಲಿಮಿನೇಶನ್ ಮಾಡಿರುವುನ್ನು ಕಾಣಬಹುದಾಗಿದೆ.

‘ತನಿಶಾ... ಈ ಮನೆಯಲ್ಲಿ ನಿಮ್ಮ ಪಯಣ ಇಲ್ಲಿಗೆ ಮುಕ್ತಾಯವಾಗುತ್ತಿದೆ’ ಎಂಬ ಬಿಗ್‌ಬಾಸ್‌ ಧ್ವನಿ ಕೇಳಿ ತನಿಶಾ ಗಳಗಳನೇ ಅತ್ತಿದ್ದಾರೆ.

‘ನಾನು ಹೊರ ಹೋಗಲಿ ಎಂದು ನೀವೆಲ್ಲ ತುಂಬಾ ಆಸೆಪಟ್ಟಿದ್ದಿರಿ ಅಲ್ವಾ. ಈಗ ಹೊರಹೋಗುತ್ತಿದ್ದೀನಿ. ನನ್ನ ಧ್ವನಿ ನಿಮಗೆಲ್ಲ ಕಿರಿಕಿರಿ ಅನಿಸುತ್ತಿತ್ತು. ಇನ್ನು ಮುಂದೆ ಹಾಗೆಲ್ಲ ಆಗುವುದಿಲ್ಲ. ಯಾಕೆ ಬಿಗ್‌ಬಾಸ್‌ ಹೀಗೆ ಮಾಡಿದ್ರಿ’ ಎಂದು ಹೇಳಿ ತನಿಶಾ ಕಣ್ಣೀರು ಹಾಕಿದ್ದಾರೆ.

ಹಾಗಾದರೆ ನಿಜವಾಗ್ಲೂ ತನಿಶಾ ಹೊರ ಹೋಗುತ್ತಾರಾ ಅಥವಾ ಸ್ಪರ್ಧಿಗಳ ಮನಸ್ಥಿತಿ ತಿಳಿದುಕೊಳ್ಳಲು ಬಿಗ್‌ಬಾಸ್‌ ಆಡಿದ ನಾಟಕವೇ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT