ರಷ್ಯಾದ ಚಳಿಗಾಲದ ಕ್ಯಾಂಪ್‌ಗೆ ಬೆಂಗಳೂರಿನ ಪ್ರಥಮ್‌

7
ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್ ಆಯೋಜಿಸಿದ್ದ ಟೆಕ್‌ಫೆಸ್ಟ್‌ನಲ್ಲಿ ಆಯ್ಕೆ

ರಷ್ಯಾದ ಚಳಿಗಾಲದ ಕ್ಯಾಂಪ್‌ಗೆ ಬೆಂಗಳೂರಿನ ಪ್ರಥಮ್‌

Published:
Updated:
Prajavani

ಬಾಂಬೆ ಐಐಟಿಯಲ್ಲಿ ಎಸ್ಒಎಫ್ (ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್) ಆಯೋಜಿಸಿದ್ದ ಟೆಕ್‌ಫೆಸ್ಟ್ ನಲ್ಲಿ ಭಾಗವಹಿಸಿದ್ದ ಎಲೆಕ್ಟ್ರಾನಿಕ್ ಸಿಟಿ ವಿಬ್‌ಗಯಾರ್ ಹೈಸ್ಕೂಲ್‌ನ 10 ನೇ ತರಗತಿ ವಿದ್ಯಾರ್ಥಿ ಪ್ರಥಮ್ ಸಾಹು, ಇನ್ನೊವೇಷನ್ ಚಾಲೆಂಜ್‌ನಲ್ಲಿ  8ನೇ ಸ್ಥಾನ ಗೆದ್ದುಕೊಂಡಿದ್ದಾನೆ. ಇದೇ 3 ರಿಂದ 11ರವರೆಗೆ ರಷ್ಯಾದಲ್ಲಿ ರೋಸ್ಟಮ್ ಆಯೋಜಿಸಿರುವ ಚಳಿಗಾಲದ ಕ್ಯಾಂಪ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾನೆ.

ನೀರಿನ ಸಂರಕ್ಷಣಾ ಯೋಜನೆಯ ತಾಂತ್ರಿಕ ಕಾರ್ಯಾ ಚರಣೆಯ ಬಗ್ಗೆ ಮಾತನಾಡಿದ ಪ್ರಥಮ್,  ‘ಕೃಷಿಗೆ ಬಳಸಿದ ನಂತರ ವ್ಯರ್ಥವಾಗಿ ಹೋಗುವ ನೀರನ್ನು ಮರುಬಳಕೆ ಮಾಡಲು ತಂತ್ರಜ್ಞಾನವನ್ನು ಬಳಸಬಹುದು’ ಎನ್ನುತ್ತಾನೆ.

‘ನೀರಿನ ಕಾಲುವೆಗಳನ್ನು ಇಳಿಜಾರು ರೂಪದಲ್ಲಿ ಅ- ಆಕಾರದಲ್ಲಿ ಸುರಂಗಗಳ ರೂಪದಲ್ಲಿ ಅಗೆದು ಹಾಕಬಹುದು. ಅದರ ಮೂಲಕ ನಾವು ಕಳೆದುಕೊಳ್ಳುವ ನೀರಿನ ಸಂಗ್ರಹವನ್ನು ಮತ್ತೆ ಪಡೆಯಬಹುದು. ಈ ಸುರಂಗಗಳನ್ನು ಬೇರುಗಳ ಮಟ್ಟಕ್ಕಿಂತಲೂ ಕೆಳಗೆ ಮತ್ತು ನೈಸರ್ಗಿಕ ಅಂತರ್ಜಲ ಮಟ್ಟಕ್ಕಿಂತಲೂ ಮೇಲೆ ನಿರ್ಮಿಸಬಹುದು. ಇದರಿಂದಾಗಿ ನೈಸರ್ಗಿಕ ಪ್ರಕ್ರಿಯೆಗೆ ಯಾವುದೇ ಅಡ್ಡಿಯುಂಟಾಗುವುದಿಲ್ಲ. ನೀರಿನ ಹರಿವಿನ ಸಂದರ್ಭದಲ್ಲಿ ನಡುವೆ ಅಡ್ಡಲಾಗಿ ಪೈಪ್‌ಗಳನ್ನು ಅಳವಡಿಸುವುದರಿಂದ ನಿಯತಕಾಲಿಕವಾಗಿ ಅಂತರ್ಜಲವನ್ನು ಮರುಪೂರಣ ಮಾಡಬಹುದು. ಅಂತರ್ಜಲ ಮಟ್ಟಕ್ಕೆ ಅನುಸಾರವಾಗಿ ಬಾಲ್ ವಾಲ್‌ಗಳನ್ನು ಅಳವಡಿಸಿದರೆ, ಇದರಿಂದ ಕುಸಿಯುತ್ತಿರುವ ನೀರಿನ ಮಟ್ಟವನ್ನು ಪತ್ತೆ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಅಂತರ್ಜಲ ಮಟ್ಟ ಹೆಚ್ಚಾಗಲು ಅವಕಾಶ ನೀಡುತ್ತದೆ.

ನಂತರ, ಸುರಂಗಗಳಲ್ಲಿನ ನೀರನ್ನು ಸುರಂಗದ ಕೊನೆಯಲ್ಲಿರುವ ಸೋಲಾರ್ ಚಾಲಿತ ವಾಟರ್ ಪಂಪ್‌ಗಳನ್ನು ಬಳಸಿಕೊಂಡು ಜಮೀನುಗಳಿಗೆ ಪಂಪ್ ಮಾಡಬಹುದು ಮತ್ತು ಈ ನೀರನ್ನು ಬಳಸಿಕೊಂಡು ಮತ್ತೆ ನೀರಾವರಿ ಮಾಡಬಹುದು. ಈ ವಿಧಾನದಲ್ಲಿ ನೀರಿನ ಮರು ಬಳಕೆ ಮಾಡುವುದರಿಂದ, ಜಮೀನಿನಿಂದ ನೀರಿನ ಹರಿವಿನ ಜೊತೆಗೆ ಹೋದ ಪೋಷಕಾಂಶಗಳು ಮತ್ತೆ ಜಮೀನಿಗೆ ಬರುತ್ತವೆ. ಹಾಗಾಗಿ ಈ ವಿಧಾನವು ಜಮೀನು ಫಲವತ್ತತೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ’ ಎಂಬುದು ಪ್ರಾಜೆಕ್ಟ್ ಆಗಿದೆ.

‘ಇಡೀ ವಿಬ್‌ಗಯಾರ್ ಕುಟುಂಬವು ಪ್ರಥಮ್ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಿದೆ. ಆರಂಭದಿಂದಲೂ ಪ್ರಥಮ್ ವಿಜ್ಞಾನ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದ. ಆತ ಈಗ ಮಾಡಿರುವ ಸಾಧನೆಗೆ ಆತನಲ್ಲಿ ಇರುವ ನೈಸರ್ಗಿಕದತ್ತವಾದ ಜಾಣತನವೇ ಕಾರಣವಾಗಿದೆ’ ಎಂದು ಪ್ರಾಂಶುಪಾಲರಾದ ಅಶ್ವನಿ ಕೆ. ಸಕ್ಸೇನಾ ಮೆಚ್ಚುಗೆಯ ಮಾತನ್ನಾಡಿದ್ದಾರೆ. 

ಟೆಕ್‌ಫೆಸ್ಟ್ ಇನ್ನೋವೇಶನ್ ಚಾಲೆಂಜ್ ಎಂಬುದು ಭಾರತೀಯ ವಿದ್ಯಾರ್ಥಿಗಳ ನಡುವೆ ಸೃಜನಾತ್ಮಕ ಮತ್ತು ನವೀನ ಚಿಂತನೆಯನ್ನು ಉತ್ತೇಜಿಸುವ ಏಕೈಕ ಧ್ಯೇಯ ವಾಕ್ಯದೊಂದಿಗೆ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಮತ್ತು ಟೆಕ್‌ಫೆಸ್ಟ್‌, ಬಾಂಬೆ ಐಐಟಿ ಜಂಟಿಯಾಗಿ ರೂಪಿಸಿರುವ ಕಾರ್ಯಕ್ರಮವಾಗಿದೆ. ನ್ಯಾಷನಲ್ ಸೈನ್ಸ್ ಒಲಂಪಿಯಾಡ್‌ಗಾಗಿ ನೋಂದಾಯಿಸಿರುವ, 8 ನೇ, 9 ನೇ ಮತ್ತು 10 ನೇ ತರಗತಿಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗಾಗಿ ಎಸ್ಒಎಫ್ ಪ್ಯಾನ್-ಇಂಡಿಯಾ ಇನೋವೇಷನ್ ಚಾಲೆಂಜ್ ಅನ್ನು ಆಯೋಜಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !