ಕೆರೆ ಸ್ವಚ್ಛತೆಗೆ ರೋಬೊ ನೆರವು

ಗುರುವಾರ , ಏಪ್ರಿಲ್ 25, 2019
29 °C

ಕೆರೆ ಸ್ವಚ್ಛತೆಗೆ ರೋಬೊ ನೆರವು

Published:
Updated:

ಮಾಲಿನ್ಯದ ಸಮಸ್ಯೆ ಎದುರಿಸುತ್ತಿರುವ ಕೆರೆ, ಹಳ್ಳ, ಸರೋವರಗಳನ್ನು ಸ್ವಚ್ಛಗೊಳಿಸಲು ಬೆಂಗಳೂರು ಎಂವಿಜೆ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ‘ಅಕ್ವಾ ರೋಬೊಟ್‌’ ಕೆರೆಗಳನ್ನು ಶುದ್ಧಗೊಳಿಸುತ್ತದೆ. ಮೊಬೈಲ್‌ ಆ್ಯಪ್ ಮೂಲಕ ನಿಯಂತ್ರಿಸಲಾಗುವ ರೋಬೊಗೆ ದೂರನಿಯಂತ್ರಿತ ಮೋಟಾರು ಯಂತ್ರ ಅಳವಡಿಸಲಾಗಿದೆ.

ಮೊಬೈಲ್ ಆ್ಯಪ್‌ ಮೂಲಕ ನಿಯಂತ್ರಿಸಬಹುದಾದ ರೋಬೊಗೆ ದೊಡ್ಡ ಜಾಳಿಗೆ (ನೆಟ್‌) ಅಳವಡಿಸಲಾಗಿದೆ. ರೋಬೊವನ್ನು ಕೆರೆಗಳಲ್ಲಿ ಇಳಿಸಿದರೆ ಪ್ಲಾಸ್ಟಿಕ್‌ ಬಾಟಲ್‌, ಪೆಟ್‌ ಬಾಟಲ್‌, ಪ್ಲಾಸ್ಟಿಕ್‌ ಚೀಲಗಳಂತಹ ಹಗುರವಾದ ತ್ಯಾಜ್ಯಗಳನ್ನು ಸಂಗ್ರಹಿಸುತ್ತದೆ. ಮೊಬೈಲ್‌ ಆ್ಯಪ್‌ ಮೂಲಕ ಅದರ ಚಲನವಲನಗಳನ್ನು ನಿಯಂತ್ರಿಸಬಹುದಾಗಿದೆ. 

ಎಂವಿಜೆ ಕಾಲೇಜಿನಲ್ಲಿ ಈಚೆಗೆ ನಡೆದ ರೋಟೆಕ್ಸ್‌ 9.0 ಅಂತರರಾಷ್ಟ್ರೀಯ ತಂತ್ರಜ್ಞಾನ ಮೇಳದಲ್ಲಿ ಈ ರೋಬಾಟ್ ಪ್ರದರ್ಶಿಸಲಾಯಿತು. ನಾನಾ ರಾಜ್ಯಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮೇಳ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.   

‘ಇದೊಂದು ಬಹು ಉದ್ದೇಶಿತ ರೋಬೊ ಆಗಿದ್ದು, ಬೇರೆ ಉದ್ದೇಶಗಳಿಗೂ ಬಳಸಬಹುದಾಗಿದೆ. ರೋಬಾಟ್‌ನಲ್ಲಿ ಅಳವಡಿಸಲಾದ ಶಬ್ದ ಸಂವೇದಕಗಳ ನೆರವಿನಿಂದ ನೀರಿನಲ್ಲಿ ಕಳೆದ ಹೋದ ವಸ್ತುಗಳನ್ನು ಪತ್ತೆ ಹಚ್ಚಬಹುದು. ‘ಅಕ್ವಾ ಸಾಕರ್‌’ ನೆರವಿನಿಂದ ನೀರಿನಲ್ಲಿ ಫುಟ್‌ಬಾಲ್‌ ಕೂಡ ಆಡಬಹುದು’ ಎನ್ನುತ್ತಾರೆ ರೋಬೊ ಅಭಿವೃದ್ಧಿಪಡಿಸಿದ ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳಾದ ಸೂರಜ್‌ ಸಿಂಗ್‌ ಮತ್ತು ವಿಷ್ಣು ಮಹೇಶ್ವರ್‌. ‌

ಈ ರೋಬೊ ರಿಮೋಟ್ ಕಾರನ್ನು ಹೋಲುತ್ತದೆ. ನೀರಿನಲ್ಲಿ ಚಲಿಸಲು ಅನುಕೂಲವಾಗು ವಂತೆ ಚಕ್ರಗಳ ಬದಲು ಪೆಡಲ್‌ ಅಳವಡಿಸಲಾಗಿದೆ. ರೋಬೊ ಪುಟ್ಟದಾಗಿರುವ ಕಾರಣ ಹೆಚ್ಚಿನ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲು ಆಗುವುದಿಲ್ಲ. 

ಮನೆಗೆಲಸಕ್ಕೆ ರೋಬೊ

ಮತ್ತೊಂದು ವಿದ್ಯಾರ್ಥಿಗಳ ತಂಡ ವಿನ್ಯಾಸ ಗೊಳಿಸಿದ ಧ್ವನಿ ನಿಯಂತ್ರಿತ ರೋಬೊಟ್‌ ಕೂಡ ಎಲ್ಲರ ಗಮನ ಸೆಳೆಯಿತು. ನಾವು ನೀಡುವ ಆಜ್ಞೆಗಳನ್ನು ಈ ರೋಬೊ ನಿರ್ವಹಿಸುತ್ತದೆ. 

ಸ್ವಂತ ಕೋಡ್‌ ಅಭಿವೃದ್ಧಿಪಡಿಸಿ ಧ್ವನಿ ಗುರುತಿಸುವಿಕೆ ಮತ್ತು ನೇವಿಗೇಷನ್‌ ಅಪ್ಲಿಕೇಶನ್‌ ರೂಪಿಸಲಾಗಿದೆ. ಧ್ವನಿ ತರಂಗಗಳನ್ನು ಗುರುತಿಸಿ ಈ ರೋಬೊ ಕಾರ್ಯನಿರ್ವಹಿಸುತ್ತದೆ. 

ಬ್ಲೂಟೂತ್‌ಗೆ ನೇವಿಗೇಷನ್‌ ಅಪ್ಲಿಕೇಶನ್‌ ಸಂಪರ್ಕ ಕಲ್ಪಿಸಲಾಗಿದೆ. ರೋಬಾಟ್‌ ಮೋಟರ್‌ಗೆ ಬ್ಲೂಟೂತ್‌ ಜೋಡಿಸಲಾಗಿದೆ. ನಿಜಾವಧಿಯ ಧ್ವನಿ ಸಂವೇದಿ ರೋಬಾಟಗಳಿಗಿಂತ ಇದು ಹೆಚ್ಚು ಕಾರ್ಯಕ್ಷಮತೆ ಹೊಂದಿದೆ ಎನ್ನುತ್ತಾರೆ ರೋಬಾಟ್‌ ರೂಪಿಸಿದ ತಂಡದ ಸದಸ್ಯ ಶಕ್ತಿವೇಲ್‌. ಇಂತಹ ರೋಬಾಟ್‌ಗಳಿಂದ ಮನೆ, ಕಚೇರಿಗಳಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಸಿಕೊಳ್ಳಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !