ಸುರಕ್ಷಿತ ಹೋಳಿ ಆಚರಿಸಿ, ಚರ್ಮ, ಕಣ್ಣು ರಕ್ಷಿಸಿ

ಬುಧವಾರ, ಏಪ್ರಿಲ್ 24, 2019
32 °C

ಸುರಕ್ಷಿತ ಹೋಳಿ ಆಚರಿಸಿ, ಚರ್ಮ, ಕಣ್ಣು ರಕ್ಷಿಸಿ

Published:
Updated:

ಹೋಳಿ ಸಂಭ್ರಮಕ್ಕೆ ರಾಸಾಯನಿಕ ಮುಕ್ತ ಪ್ರಾಕೃತಿಕ ಬಣ್ಣಗಳನ್ನು ಬಳಸುತ್ತಿದ್ದ ಕಾಲವಿತ್ತು. ಆದರೀಗ ಸಿಂಥೆಟಿಕ್ ಬಣ್ಣಗಳದ್ದೇ ಕಾರುಬಾರು. ಮಾರುಕಟ್ಟೆಯಲ್ಲಂತೂ ರಾಸಾಯನಿಕ ಮಿಶ್ರಣದ ಬಣ್ಣಗಳನ್ನು ಮಾರಾಟ ಮಾಡಲಾಗುತ್ತಿದೆ.

‘ಹಸಿರು ಬಣ್ಣಕ್ಕೆ ಕಾಪರ್ ಸಲ್ಫೇಟ್, ಬೆಳ್ಳಿಯ ಬಣ್ಣಕ್ಕೆ ಅಲ್ಯುಮಿನಿಯಂ ಬ್ರೊಮೈಡ್, ಕೆಂಪು ಬಣ್ಣಕ್ಕೆ ಮರ್ಕ್ಯುರಿಕ್ ಸಲ್ಫೇಟ್  ಸೇರಿಸಲಾಗುತ್ತದೆ. ಇವುಗಳಲ್ಲಿ ಕೆಲವು ಕ್ಯಾನ್ಸರ್‌ಕಾರಕ (ಕಾರ್ಸಿನೋಜೆನಿಕ್) ಆಗಿದ್ದು, ಇನ್ನೂ ಕೆಲವು ಚರ್ಮ ಮತ್ತು ಕಣ್ಣುಗಳಿಗೆ ಹಾನಿ, ಅಲರ್ಜಿಯುಂಟು ಮಾಡುವ ಅಂಶಗಳನ್ನೊಳಗೊಂಡಿರುತ್ತದೆ. ಹೆಚ್ಚು ಪ್ರಮಾಣದ ಬಣ್ಣ ಬರಲಿ ಎಂದು ಸಿಲಿಕಾ, ಟಾಲ್ಕ್ ಸೇರಿದಂತೆ ಮತ್ತಿತರ ಅಪಾಯಕಾರಿ ಅಂಶಗಳನ್ನೂ ಬಣ್ಣಗಳಲ್ಲಿ ಸೇರಿಸಲಾಗಿರುತ್ತದೆ’ ಎನ್ನುತ್ತಾರೆ ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ರೀಜನಲ್ ಹೆಡ್ ಮತ್ತು ಮೆಡಿಕಲ್ ಸರ್ವೀಸಸ್ ಡೈರೆಕ್ಟರ್ ಡಾ.ಅಮೋದ್ ನಾಯಕ್.

ಕಣ್ಣಿನ ರಕ್ಷಣೆ:  ಪ್ರೊಟೆಕ್ಟಿವ್ ಗ್ಲಾಸ್ ಹಾಕಿ. ಕಣ್ಣೊಳಗೆ ಬಣ್ಣ ಬಿದ್ದಲ್ಲಿ ಕಣ್ಣುಗಳನ್ನು ಉಜ್ಜಬೇಡಿ. ಶುದ್ಧ ಕುಡಿಯುವ ನೀರಿನಿಂದ ತೊಳೆದುಕೊಳ್ಳಿ.

ವೈದ್ಯಕೀಯ ನೆರವು: ಕಣ್ಣು ಅತಿ ಹೆಚ್ಚು ಕೆಂಪು ಬಣ್ಣಕ್ಕೆ ತಿರುಗಿದ್ದರೆ, ಕಣ್ಣಿನಿಂದ ನೀರು ಬರುತ್ತಿದ್ದರೆ, ತುರಿಕೆ ಅಥವಾ ಅಸ್ವಸ್ಥತೆ, ದೃಷ್ಟಿ ಮಸುಕಾಗಿದ್ದರೆ, ಕಣ್ಣಿನಲ್ಲಿ ಸೀಳು ಕಂಡುಬಂದರೆ ಅಥವಾ ಕಣ್ಣು ಅಥವಾ ಕಣ್ಣಿನ ಸುತ್ತಮುತ್ತಲಿನ ಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದರೆ ತಕ್ಷಣವೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಚರ್ಮದ ರಕ್ಷಣೆ: ಮೈಗೆ ಮಾಯಿಶ್ಚರೈಸರ್ ಲೇಪನ ಮಾಡಿಕೊಳ್ಳಿ. ಕೊಬ್ಬರಿ ಎಣ್ಣೆಯನ್ನೂ ಬಳಸಬಹುದು. ಇದು ಬಣ್ಣ ನೇರವಾಗಿ ಚರ್ಮಕ್ಕೆ ತಾಗದಂತೆ ರಕ್ಷಿಸುತ್ತದೆ. ತುಟಿಗಳಿಗೆ ಲಿಪ್‌ಬಾಮ್‌ ಹಚ್ಚಿಕೊಳ್ಳುವುದನ್ನು ಮರೆಯದಿರಿ.

ಕೂದಲ ರಕ್ಷಣೆ: ಹೋಳಿ ಆಡುವ ಕನಿಷ್ಠ ಅರ್ಧಗಂಟೆ ಮುನ್ನ ಕೂದಲಿಗೆ ಎಣ್ಣೆಹಚ್ಚಿಕೊಳ್ಳಿ.

ಎಣ್ಣೆ ಬಣ್ಣಗಳಲ್ಲಿನ ರಾಸಾಯನಿಕ ಕೂದಲಿಗೆ ಅಂಟದಂತೆ ತಡೆಯುತ್ತದೆ. ಕೂದಲನ್ನು ಕಟ್ಟಿ ತುರುಬು ಹಾಕಿಕೊಳ್ಳುವುದು ಒಳ್ಳೆಯ ಐಡಿಯಾ. ಅಂತೆಯೇ ತಲೆಗೆ ದುಪಟ್ಟಾ ಹೊದ್ದುಕೊಳ್ಳುವುದರಿಂದಲೂ ಬಣ್ಣಗಳಿಂದ ಕೂದಲನ್ನು ರಕ್ಷಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !