ಭೂ ನೆಲ, ಕಡಲು ಮತ್ತು ಮುಗಿಲು

7

ಭೂ ನೆಲ, ಕಡಲು ಮತ್ತು ಮುಗಿಲು

Published:
Updated:
Prajavani

1. ನಮ್ಮ ಪ್ರಪಂಚದ ನೆಲ ಮತ್ತು ಕಡಲುಗಳನ್ನು ತೋರಿಸುತ್ತಿರುವ ಭೂಪಟ ಚಿತ್ರ-1ರಲ್ಲಿದೆ. ಈ ಪಟ್ಟಿಯಲ್ಲಿರುವ ಭೂ ನಿರ್ಮಿತಿಗಳನ್ನು ಹೆಸರಿಸಬಲ್ಲಿರಾ?

ಅ. ಅತ್ಯಂತ ವಿಸ್ತಾರ ಭೂಖಂಡ
ಬ. ಅತ್ಯಂತ ವಿಸ್ತಾರ ಸಾಗರ
ಕ. ಅತ್ಯಂತ ದೀರ್ಘ ಪರ್ವತ ಪಂಕ್ತಿ
ಡ. ಅತ್ಯಂತ ವಿಸ್ತಾರ ದ್ವೀಪ

2. ಚಿತ್ರ-2ರಲ್ಲಿರುವ ನಿಸರ್ಗ ದೃಶ್ಯವನ್ನು ಗಮನಿಸಿ. ಇದೇನೆಂದು ಗುರುತಿಸಿ:

ಅ. ನದೀ ಕಣಿವೆ
ಬ. ನದೀ ಕೊರಕಲು
ಕ. ಹಿಮನದಿ
ಡ. ಬತ್ತಿದ ಸರೋವರ

3. ಸಾಗರ ತೀರದ ಒಂದು ದೃಶ್ಯ ಚಿತ್ರ-3ರಲ್ಲಿದೆ. ಸಾಗರ ತೀರವನ್ನೇ ಪಡೆದಿಲ್ಲದ ರಾಷ್ಟ್ರಗಳೂ ಹಲವಾರಿವೆ. ಅಂತಹ ದೇಶಗಳು ಈ ಪಟ್ಟಿಯಲ್ಲಿ ಯಾವುವು?

ಅ. ದಕ್ಷಿಣ ಆಫ್ರಿಕ
ಈ. ಮೆಕ್ಸಿಕೋ 
ಬ. ನೇಪಾಳ
ಉ. ಬ್ರೆಜಿಲ್
ಕ. ಜರ್ಮನಿ
ಟ. ಸ್ವಿಟ್ಜರ್ಲೆಂಡ್
ಡ. ಚೀನಾ
ಣ. ಆಫ್ಘಾನಿಸ್ಥಾನ್
ಇ. ಮ್ಯಾನ್ಮಾರ್
ಸ. ಥಾಯ್ಲೆಂಡ್

4. ವಿಶ್ವ ವಿಖ್ಯಾತ ಹಿಮಾಲಯ ಪರ್ವತ ಪಂಕ್ತಿಯ ಒಂದು ನೋಟ ಚಿತ್ರ-4ರಲ್ಲಿದೆ. ಹಿಮಾಲಯದ ಕೆಲ ಸುಪ್ರಸಿದ್ಧ ಉನ್ನತ ಶಿಖರಗಳ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಯಾವ ಎರಡು ಶಿಖರಗಳು ನಮ್ಮ ದೇಶದ ಗಡಿಯೊಳಗೆ ನೆಲೆಗೊಂಡಿವೆ?

ಅ. ಗೌರೀ ಶಂಕರ
ಇ. ಮಕಾಲು
ಬ. ನಂದಾ ದೇವಿ
ಈ. ಧವಳಗಿರಿ
ಕ. ಅನ್ನಪೂರ್ಣ
ಉ. ತ್ರಿಶೂಲ್
ಡ. ನಂಗ ಪರ್ವತ್
ಟ. ಲ್ಹೋಟ್ಸೆ

5. ಅಗ್ನಿ ಪರ್ವತವೊಂದರಿಂದ ಉಕ್ಕಿ ಬರುತ್ತಿರುವ ಲಾವಾ ಪ್ರವಾಹದ ದೃಶ್ಯ ಚಿತ್ರ-5ರಲ್ಲಿದೆ. ಹೀಗೆ ಹರಿದು ಬರುವ ಶಿಲಾ ಪಾಕ ತಣಿದಾಗ ರೂಪುಗೊಳ್ಳುವ ಶಿಲೆಗಳನ್ನು ಈ ಪಟ್ಟಿಯಲ್ಲಿ ಪತ್ತೆ ಮಾಡಬಲ್ಲಿರಾ?

ಅ. ಗ್ರಾನೈಟ್
ಇ. ಅಮೃತ ಶಿಲೆ
ಬ. ಬಸಾಲ್ಟ್
ಈ. ಕಂಗ್ಲಾಮರೇಟ್
ಕ. ಆಬ್ಸೀಡಿಯಾನ್
ಉ. ಆಂಡಿಸೈಟ್
ಡ. ಮರಳು ಶಿಲೆ
ಟ. ರೆಯೋಲೈಟ್

6. ಭೂ ವಾತಾವರಣದ ಅತ್ಯುನ್ನತ ಪದರಗಳಲ್ಲಿ, ಧ್ರುವ ಪ್ರದೇಶಗಳ ಸನಿಹದಲ್ಲಿ ಮೈದಳೆಯುವ ಪರಮ ವಿಸ್ಮಯದ ಬಣ್ಣ-ಬೆಳಕುಗಳ ದೃಶ್ಯ ‘ಧ್ರುವ ಪ್ರಭೆ’ ಯ ಒಂದು ನೋಟ ಚಿತ್ರ-6ರಲ್ಲಿದೆ. ಧ್ರುವ ಪ್ರಭೆಗಳು ರೂಪುಗೊಳ್ಳಲು ಈ ಕೆಳಗಿನ ಯಾವ ಯಾವ ಅಂಶಗಳು ಕಾರಣ?

ಅ. ಬೀಸುವ ಗಾಳಿ
ಬ. ಸೌರ ಮಾರುತ
ಕ. ವಾಯುಮಂಡಲದ ಅನಿಲಗಳು
ಡ. ಭೂ ಕಾಂತ ಕವಚ
ಇ. ದಟ್ಟ ಮೋಡಗಳಲ್ಲಿನ ವಿದ್ಯುತ್ ಸಂಚಯ
ಈ. ಬಾಹ್ಯಾಕಾಶದಿಂದ ಎರಗುವ ಉಲ್ಕೆಗಳು

7. ನಮ್ಮ ಧರೆಯ ಭೂ ಖಂಡವೊಂದರ ಎರಡು ವಿಶಿಷ್ಟ ಲಕ್ಷಣಗಳನ್ನು ತೋರಿಸುತ್ತಿರುವ ದೃಶ್ಯ ಚಿತ್ರ-7ರಲ್ಲಿದೆ:
ಅ. ಇದು ಯಾವ ಭೂ ಖಂಡದ ದೃಶ್ಯ?
ಬ. ಅದನ್ನು ಸ್ಪಷ್ಟಗೊಳಿಸುತ್ತಿರುವ ಎರಡು ಲಕ್ಷಣಗಳು ಯಾವುವು?

8. ಉತ್ತರ ಅಮೆರಿಕ ಖಂಡದಲ್ಲಿರುವ, ವಿಶ್ವ ವಿಖ್ಯಾತವೂ ಆಗಿರುವ ಬೃಹದಾಕಾರದ ಒಂದು ನೈಸರ್ಗಿಕ ಶಿಲಾ ಶಿಲ್ಪ ಚಿತ್ರ-8ರಲ್ಲಿದೆ. ಅದರ ರೂಪಾನ್ವಯ ಹೆಸರನ್ನೇ ಪಡೆದಿರುವ ಈ ಪ್ರಸಿದ್ಧ ನಿರ್ಮಿತಿ ಯಾವುದು?

ಅ. ಗಾಡ್ಸ್ ಫಿಂಗರ್ (ದೇವರ ಬೆರಳು)
ಬ. ತ್ರೀ ಸಿಸ್ಟರ್ಸ್ (ಮೂರು ಸೋದರಿಯರು)
ಕ. ಶಿಪ್ ರಾಕ್ (ಹಡಗು ಬಂಡೆ)
ಡ. ಬ್ರೆಡ್ ನೈಫ್ (ಬ್ರೆಡ್ ಚಾಕು)

9. ವಾಯುಮಂಡಲದಿಂದ ಆವರಿಸಲ್ಪಟ್ಟಿರುವ ನಮ್ಮ ಧರೆಯ ಬಾಹ್ಯ ನೋಟವೊಂದನ್ನು ಚಿತ್ರ-9ರಲ್ಲೂ, ಆಂತರ್ಯದ ಸ್ವರೂಪವನ್ನು ಚಿತ್ರ-10ರಲ್ಲೂ ಗಮನಿಸಿ:

ಅ. ಭೂ ವಾಯುಮಂಡಲದಲ್ಲಿ ಮೋಡಗಳು ಮೈದಳೆಯಲು ಕಾರಣವಾದ ‘ಅನಿಲ’ ಯಾವುದು?
ಬ. ಇಡೀ ಭೂಮಿಯಲ್ಲಿ ಗರಿಷ್ಠ ಪ್ರಮಾಣದಲ್ಲಿರುವ ’ಅನಿಲ ರೂಪದ ಮೂಲ ವಸ್ತು’ ಯಾವುದು?
ಕ. ಧರೆಯಲ್ಲಿ ಗರಿಷ್ಠ ಪ್ರಮಾಣದಲ್ಲಿರುವ ‘ಘನ ರೂಪದ ಮೂಲ ವಸ್ತು’ ಯಾವುದು?
ಡ. ಪೃಥ್ವಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವ ‘ಲೋಹೀಯ ಮೂಲ ವಸ್ತು’ ಯಾವುದು?

10. ವೃಷ್ಟಿವನ ಪ್ರದೇಶದ ಮೂಲಕ ಪ್ರವಹಿಸುತ್ತಿರುವ ನದಿಯೊಂದರ ವಿಹಂಗಮ ದೃಶ್ಯವೊಂದು ಚಿತ್ರ-11ರಲ್ಲಿದೆ. ಕೆಲ ವಿಶ್ವ ಪ್ರಸಿದ್ಧ ನದಿಗಳ ಈ ಕೆಳಗಿನ ಪಟ್ಟಿಯಲ್ಲಿ ಯಾವುವು ವೃಷ್ಟಿವನಗಳ ಮೂಲಕ ಮತ್ತು ಯಾವುವು ಮರುಭೂಮಿಗಳ ಮೂಲಕ ಪ್ರವಹಿಸುತ್ತಿವೆ ಗೊತ್ತೇ?

ಅ. ಅಮೆಜಾನ್
ಡ. ಕಾಲೆರೆಡೋ
ಬ. ಹಳದಿ ನದಿ
ಇ. ಕಾಂಗೋ
ಕ. ನೈಲ್
ಈ. ಮೇಕಾಂಗ್

11. ತನ್ನ ಆಕಾರದಿಂದಲೂ, ಆರೋಹಣಕ್ಕೆ ಅತ್ಯಂತ ಕಠಿಣ ಎನಿಸಿರುವುದರಿಂದಲೂ ವಿಶ್ವಪ್ರಸಿದ್ಧವಾಗಿರುವ ಪರ್ವತ ಶಿಖರ ಮೇಟರ್ ಹಾರ್ನ್ ಚಿತ್ರ-12ರಲ್ಲಿದೆ. ಈ ಶಿಖರ ಯಾವ ಪರ್ವತ ಪಂಕ್ತಿಯಲ್ಲಿದೆ?

ಅ. ಆಲ್ಪ್ಸ್ ಪರ್ವತ
ಬ. ಆಂಡಿಸ್ ಪರ್ವತ
ಕ. ರಾಖೀಸ್ ಪರ್ವತ
ಡ. ಹಿಮಾಲಯ ಪರ್ವತ

12. ಕಡಲಲ್ಲಿ ಕುಸಿವ ಅಗ್ನಿ ಪರ್ವತಗಳನ್ನು ಪರಿವರಿಸಿ ಬೆಳೆವ ಹವಳ ದ್ವೀಪಗಳಾದ ಎಟಾಲ್‌ಗಳು ಗೊತ್ತಲ್ಲ? ಅಂತಹದೊಂದು ಹವಳ ದ್ವೀಪದ ದೃಶ್ಯ ಚಿತ್ರ-13ರಲ್ಲಿದೆ. ಇಲ್ಲಿ ಹೆಸರಿಸಿರುವ ಸುಪ್ರಸಿದ್ಧ ದ್ವೀಪಗಳಲ್ಲಿ ಯಾವುವು ಇಂತಹ ಎಟಾಲ್‌ಗಳಾಗಿವೆ?

ಅ. ಶ್ರೀಲಂಕಾ
ಬ. ಪಲಾವ್
ಕ. ಮಾಲ್ಡೀವ್ಸ್
ಡ. ಟಾಸ್ಮೇನಿಯಾ
ಇ. ಮಾರ್ಷಲ್ ದ್ವೀಪಸ್ತೋಮ
ಈ. ಅಂಡಮಾನ್
ಉ. ಮಡಗಾಸ್ಕರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !