ಇಥಿಯೋಪಿಯಾ ವಿಮಾನ ಪತನ

ಬುಧವಾರ, ಮಾರ್ಚ್ 27, 2019
26 °C
ನಾಲ್ವರು ಭಾರತೀಯರು ಸೇರಿ 157 ಮಂದಿ ದುರ್ಮರಣ

ಇಥಿಯೋಪಿಯಾ ವಿಮಾನ ಪತನ

Published:
Updated:
Prajavani

ನೈರೋಬಿ: ಇಥಿಯೋಪಿಯಾದ ಆಡಿಸ್ ಅಬಬಾದಿಂದ ಕೀನ್ಯಾದ ನೈರೋಬಿಗೆ ಹೊರಟಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ ಬೋಯಿಂಗ್–737 ವಿಮಾನ ಭಾನುವಾರ ಬೆಳಿಗ್ಗೆ ಪತನಗೊಂಡಿದೆ. ಅದರಲ್ಲಿದ್ದ 157 ಮಂದಿಯೂ ಮೃತಪಟ್ಟಿದ್ದಾರೆ ಎಂದು ‌‌‌ಇಥಿಯೋಪಿಯನ್ ಮಾಧ್ಯಮಗಳು ವರದಿ ಮಾಡಿವೆ. 

ಇದರಲ್ಲಿ 149 ಮಂದಿ ಪ್ರಯಾಣಿಕರು ಮತ್ತು 8 ಮಂದಿ ವಿಮಾನದ ಸಿಬ್ಬಂದಿ ಇದ್ದರು ಎಂದು ಇಥಿಯೋಪಿಯನ್ ಏರ್‌ಲೈನ್ಸ್‌ ತಿಳಿಸಿದೆ. ವಿಮಾನ ಪತನಕ್ಕೆ ಕಾರಣವನ್ನು ಈವರೆಗೆ ಖಚಿತಪಡಿಸಿಲ್ಲ.

ಬೆಳಿಗ್ಗೆ 8.38ಕ್ಕೆ ಆಡಿಸ್ ಅಬಾಬಾದಿಂದ ಹೊರಟ ವಿಮಾನ 6 ನಿಮಿಷಗಳ ನಂತರ ಸಂಪರ್ಕ ಕಡಿಗೊಂಡಿದೆ. 60 ಕಿ.ಮೀ ದೂರದ ಬಯಲಿನಲ್ಲಿ ಪತನವಾಗಿದೆ ಎಂದು ಏರ್‌ಲೈನ್ಸ್‌ ವಿವರಿಸಿದೆ. ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರು ಘಟನೆಗೆ ಟ್ವಿಟರ್‌ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ನಾಲ್ವರು ಭಾರತೀಯರು: ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರಲ್ಲಿ ನಾಲ್ವರು ಭಾರತೀಯರು ಇದ್ದಾರೆ. 32 ಮಂದಿ ಕೀನ್ಯಾ, 9 ಮಂದಿ ಇಥಿಯೋಪಿಯಾ, ಕೆನಡಾದ 18, ಚೀನಾ, ಅಮೆರಿಕ ಮತ್ತು ಇಟಲಿಯ ತಲಾ 8, ಫ್ರಾನ್ಸ್,  ಬ್ರಿಟನ್‌ನ ತಲಾ 7 ಮತ್ತು ನೆದರ್‌ಲ್ಯಾಂಡ್‌ನ 5 ಮತ್ತು  ಸ್ಲೊವಾಕಿಯಾದ ನಾಲ್ವರು ಮೃತಪಟ್ಟಿರುವುದನ್ನು ಏರ್‌ಲೈನ್‌ ಸಿಇಒ ಮತ್ತು ಕೀನ್ಯಾ ಸಾರಿಗೆ ಸಚಿವರು ದೃಢ ಪಡಿಸಿದ್ದಾರೆ.


ವಿಮಾನ ಪತನವಾದ ಸ್ಥಳದಲ್ಲಿ ಅವಶೇಷಗಳನ್ನು ಹುಡುಕುತ್ತಿರುವ ಸಿಬ್ಬಂದಿ

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !