ಪಾಕಿಸ್ತಾನಿ ಸೇನಾ ಉದ್ಯೋಗಿಗಳ ಫೇಸ್‌ಬುಕ್‌ ಖಾತೆ ರದ್ದು

ಮಂಗಳವಾರ, ಏಪ್ರಿಲ್ 23, 2019
33 °C

ಪಾಕಿಸ್ತಾನಿ ಸೇನಾ ಉದ್ಯೋಗಿಗಳ ಫೇಸ್‌ಬುಕ್‌ ಖಾತೆ ರದ್ದು

Published:
Updated:
Prajavani

ಇಸ್ಲಾಮಾಬಾದ್: ಪಾಕಿಸ್ತಾನಿ ಮಿಲಿಟರಿ ಸಾರ್ವಜನಿಕ ಸಂಪರ್ಕ ವಿಭಾಗದ ಉದ್ಯೋಗಿಗಳಿಗೆ ಸೇರಿದ ಒಟ್ಟು 103 ಪುಟಗಳು, ಗುಂಪುಗಳು ಮತ್ತು ಖಾತೆಗಳನ್ನು ಫೇಸ್‌ಬುಕ್‌ ಸೋಮವಾರ ತೆಗೆದುಹಾಕಿದೆ.

24 ಪುಟಗಳು, 57 ಖಾತೆಗಳು ಮತ್ತು 7 ಗುಂಪುಗಳನ್ನು ಫೇಸ್‌ಬುಕ್‌ ತೆಗೆದುಹಾಕಿದೆ. ಇವುಗಳಿಗೆ 28 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಜತೆಗೆ 15 ಇನ್‌ಸ್ಟಾಗ್ರಾಂ ಖಾತೆಗಳನ್ನು ಸಹ ತೆಗೆದುಹಾಕಲಾಗಿದೆ.

ಪಾಕಿಸ್ತಾನದ ಪ್ರಸ್ತುತ ರಾಜಕೀಯ, ರಾಜಕೀಯ ಮುಖಂಡರ ಕುರಿತು ಮತ್ತು ಭಾರತ ಸರ್ಕಾರ ಹಾಗೂ ಪಾಕಿಸ್ತಾನಿ ಮಿಲಿಟರಿ ಕುರಿತು ಮಾಹಿತಿ ಪ್ರಸಾರ ಮಾಡುತ್ತಿರುವ ಪುಟಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್‌ ತಿಳಿಸಿದೆ.

’ಅಸಮರ್ಪಕ ನಡವಳಿಕೆ ಕಾರಣ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನ ಖಾತೆಗಳನ್ನು ತೆಗೆದು ಹಾಕಲಾಗಿದೆ’ ಎಂದು ಫೇಸ್‌ಬುಕ್‌ ಸೈಬರ್‌ಸೆಕ್ಯೂರಿಟಿ ಮುಖ್ಯಸ್ಥ ನಾಥನೀಲ್‌ ಗ್ಲೀಷೆರ್‌ ತಿಳಿಸಿದ್ದಾರೆ.

’ಈ ಎಲ್ಲ ಚಟುವಟಿಕೆಗಳನ್ನು ನಡೆಸುತ್ತಿರುವವರು ತಮ್ಮ ಗುರುತನ್ನು ರಹಸ್ಯವಾಗಿಡುವ ಪ್ರಯತ್ನ ಮಾಡಿದ್ದರು. ಆದರೆ, ನಮ್ಮ ತನಿಖಾ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಈ ಖಾತೆಗಳು ಅಂತರ–ಸೇವಾ ಸಾರ್ವಜನಿಕ ಸಂಪರ್ಕ (ಐಎಸ್‌ಪಿಆರ್‌) ವಿಭಾಗದ ಉದ್ಯೋಗಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಪತ್ತೆ ಮಾಡಿದೆ’ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನವನ್ನು ಬೆಂಬಲಿಸುವ ಮತ್ತು ಭಾರತವನ್ನು ವಿರೋಧಿಸುವ ಸಂದೇಶಗಳನ್ನು ಬಿತ್ತರಿಸಲಾಗುತ್ತಿತ್ತು ಎನ್ನುವುದು ಈ ಪುಟಗಳು ಮತ್ತು ಖಾತೆಗಳನ್ನು ವಿಶ್ಲೇಷಣೆ ನಡೆಸಿದಾಗ ತಿಳಿದು ಬಂದಿದೆ.

ಐಎಸ್‌ಪಿಆರ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಸೇನಾ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ಪದೇ ಪದೇ ‘ಐದನೇ ಪೀಳಿಗೆಯ ಯುದ್ಧ’ ಎನ್ನುವ ಪದ ಪ್ರಯೋಗ ಮಾಡಿದ್ದಾರೆ. ಇದು ಅಸಂಪ್ರದಾಯಿಕ ಯುದ್ಧವಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಪ್ರಸಾರ ಮಾಡುವುದು ಮತ್ತು ಯಾವುದೇ ಮಾಹಿತಿಗೆ ಪ್ರತೀಕಾರದ ರೀತಿಯಲ್ಲಿ ಉತ್ತರ ನೀಡುವುದು ಹೊಸ ಪೀಳಿಗೆಯ ಯುದ್ಧ ಶೈಲಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ರಾಜಕೀಯ ಪಕ್ಷಗಳ ಜತೆ ಸಂಪರ್ಕ ಮತ್ತು ಗುರುತಿಸಿಕೊಂಡಿರುವ ಸಂಘಟನೆಗಳು ನಕಲಿ ಖಾತೆಗಳನ್ನು ಸೃಷ್ಟಿಸಿ ಫೇಸ್‌ಬುಕ್‌ ಬಳಕೆ ಮಾಡುತ್ತಿರುವ ಬಗ್ಗೆ ಜಗತ್ತಿನಾದ್ಯಂತ ಆಕ್ಷೇಪ ವ್ಯಕ್ತವಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !