ಗುರುವಾರ , ಸೆಪ್ಟೆಂಬರ್ 19, 2019
26 °C

ತಂದೆ ಸಾವು: ಆತ್ಮಹತ್ಯೆಗೆ ಯತ್ನಿಸಿದ ಪುತ್ರ

Published:
Updated:
ಆತ್ಮಹತ್ಯೆ ಯತ್ನ

ಚಿತ್ರದುರ್ಗ: ಅಪ್ಪನ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಲಂಬಾಣಿಹಟ್ಟಿಯಲ್ಲಿ‌ ಬುಧವಾರ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ವೆಂಕಟೇಶ್(22) ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಲಬಾಧೆಯಿಂದ ಬಳಲಿದ್ದ ಯುವಕನ ತಂದೆ ರೈತ ರಾಮನಾಯ್ಕ(60) ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)