‘ವಂಶಿ’ ವಾರ್ಷಿಕ ಸಂಗೀತೋತ್ಸವ ಪ್ರಶಸ್ತಿ ಪ್ರದಾನ

7

‘ವಂಶಿ’ ವಾರ್ಷಿಕ ಸಂಗೀತೋತ್ಸವ ಪ್ರಶಸ್ತಿ ಪ್ರದಾನ

Published:
Updated:
Deccan Herald

‘ವಂಶಿ ಅಕಾಡೆಮಿ ಆಫ್‌ ಮ್ಯೂಸಿಕ್‌ ಟ್ರಸ್ಟ್‌’ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಎರಡು ದಿನಗಳ ಕಾರ್ತಿಕ ಸಂಗೀತೋತ್ಸವವನ್ನು ಶನಿವಾರ ಮತ್ತು ಭಾನುವಾರ ಆಯೋಜಿಸಿದೆ. ಜಯನಗರ 7ನೇ ಬ್ಲಾಕ್‌ನ 27ನೇ ಕ್ರಾಸ್‌ನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆ 4 ಗಂಟೆಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ. ಬಿ.ಎಸ್‌. ಅಭಿಜಿತ್‌ ಗಾಯನ ಪ್ರಸ್ತುತ ಪಡಿಸಲಿದ್ದಾರೆ.

ಸಂಜೆ 5.15ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ, ಗಾಯಕಿ ಆರ್‌. ಚಂದ್ರಿಕ, ಅಯ್ಯಪ್ಪ ಸ್ವಾಮಿ ದೇವಾಲಯದ ಕಾರ್ಯದರ್ಶಿ ಮನೋಹರ್‌, ವಂಶಿ ಅಕಾಡೆಮಿ ಆಫ್‌ ಮ್ಯೂಸಿಕ್‌ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ಬಿ.ಕೆ. ಅನಂತರಾಮ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ಪ್ರಶಸ್ತಿ ಪ್ರದಾನ: ಗಾಯಕ ಕೆ.ವಿ.ಕೃಷ್ಣಪ್ರಸಾದ್‌, ಪಿಟೀಲು ವಾದಕ ವೆಂಕಟೇಶ್‌ ಜೊಸ್ಯರ್‌, ಸಾಯಿ ದ್ವಾರಕಾಮಯಿ ವೃದ್ಧಾಶ್ರಮದ ಸ್ಥಾಪಕ ಎಚ್‌.ಎಲ್‌.ಗೋಪಾಲಕೃಷ್ಣ, ಕುಣಿಗಲ್‌ನ ಎಂ.ಪಿ.ವೆಂಕಟೇಶ್‌ ಅವರಿಗೆ ‘ವಂಶಿ ವಾರ್ಷಿಕ ಪ್ರಶಸ್ತಿ’ ಪ್ರದಾನ.

ಸಂಜೆ 6ಕ್ಕೆ ರಂಜನಿ ವಾಸುಕಿ ಗಾಯನ. ಜ್ಯೋತ್ಸ್ನಾ ಮಂಜುನಾಥ್‌ (ಪಿಟೀಲು), ರವಿಶಂಕರ್‌ ಶರ್ಮ (ಮೃದಂಗ), ವಿ. ಶ್ರೀಧರಾ (ಖಂಜೀರಾ) ಸಾಥ್‌. ನಂತರ ಕೆ.ವಿ.ಕೃಷ್ಣಪ್ರಸಾದ್‌ ಗಾಯನ; ಅಚ್ಯುತ ರಾವ್‌ (ಪಿಟೀಲು), ಬಿ.ಆರ್‌.ಶ್ರೀನಿವಾಸ್‌ (ಮೃದಂಗ), ಗಣೇಶ್‌ ವಿ. ಮೂರ್ತಿ (ಘಟ) ನೆರವು.

ಭಾನುವಾರದ ಕಾರ್ಯಕ್ರಮ: ಸಂಜೆ 4ಕ್ಕೆ ಸ್ಮೃತಿ ಭಾಸ್ಕರ್‌ (ಗಾಯನ), ಎಂ.ಡಿ. ಅರ್ಜುನ್‌ (ಪಿಟೀಲು), ಟಿ.ಎನ್‌. ರಮೇಶ್‌ (ಮೃದಂಗ); ಸಂಜೆ 5 ಗಂಟೆಗೆ ಅನೀಶ್‌ ಭಟ್‌ (ಗಾಯನ), ವೆಂಕಟೇಶ್‌ ಜೋಸ್ಯರ್‌ (ಪಿಟೀಲು), ನಿಕ್ಷಿತ್‌ ಪುತ್ತೂರ್‌ (ಮೃದಂಗ.

ಸಂಜೆ 6ಕ್ಕೆ ವೇಣು ವಿದ್ವಾನ್‌ ಬಿ.ಕೆ.ಅನಂತರಾಮ್‌ ನಿರ್ದೇಶನದಲ್ಲಿ ‘ವಂಶ ಲಯವಾಹಿನಿ’ ತಂಡದಿಂದ ಕರ್ನಾಟಕ ಸಂಗೀತ ವಾದ್ಯಗೋಷ್ಠಿ. ಬಿ.ಕೆ.ಅನಂತರಾಮ್‌ (ಕೊಳಲು), ವೆಂಕಟೇಶ್‌ ಜೋಸ್ಯರ್‌, ಎಂ.ಡಿ.ಅರ್ಜುನ್‌ (ಪಿಟೀಲು), ಆರ್‌. ರಾಜಕುಮಾರ್‌ (ಥವಿಲ್‌), ಬಿ.ಜೆ.ಕಿರಣ್‌ ಕುಮಾರ್‌ (ಖಂಜೀರಾ), ಚಿದಾನಂದ (ಮೋರ್ಚಿಂಗ್‌), ಟಿ.ಎನ್‌.ರಮೇಶ್‌ (ಘಟ), ಜಿ.ಎಸ್‌.ನಾಗರಾಜ್‌ (ಮೃದಂಗ) ಸಾಥ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !