ಶಾಲೆಯ ಅಂಗಳದಲ್ಲಿ ಆಹಾರ ಮೇಳ

7

ಶಾಲೆಯ ಅಂಗಳದಲ್ಲಿ ಆಹಾರ ಮೇಳ

Published:
Updated:
Deccan Herald

ಬೆಂಗಳೂರು: ‘ಲಸ್ಸಿ ರುಚಿಯಾಗಿದೆ. ಮಜ್ಜಿಗೆಗೆ ಕೊತ್ತಂಬರಿ, ಶುಂಠಿ, ಕಾಳು ಮೆಣಸು, ಚೂರು ಆರಿಶಿನ ಪುಡಿ, ಕರಿಬೇವಿನ ಸೊಪ್ಪು, ಒಗ್ಗರಣೆ ಹಾಕಿ ಮಾಡಿದ್ದೀವಿ. ಇದನ್ನು ಕುಡಿದರೆ ಆರೋಗ್ಯ ಚೆನ್ನಾಗಿರುತ್ತೆ. ದೇಹದ ಉಷ್ಣತೆ ಕಡಿಮೆಯಾಗುತ್ತದೆ’ ಎಂದು ಏಳನೆ ತರಗತಿ ವಿದ್ಯಾರ್ಥಿನಿ ಹಬೀಯ ಬಾನು ಪಟ ಪಟನೇ ತಾನು ಮಾಡಿದ ಕೈ ರುಚಿ ಸಾದರಪಡಿಸಿದಳು. ಅವಳ ಕೈರುಚಿಗೆ ಪ್ರಥಮ ಬಹುಮಾನ ಸಿಕ್ಕಿತು.

ದಾಸನಪುರ ಹೋಬಳಿ ತೋಟಗೆರೆ ಗ್ರಾಮದಲ್ಲಿರುವ ಬಿಜಿಎಸ್ ಶಾಲೆಯ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಬೇಯಿಸದ ಆಹಾರ ತಯಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

ಭಾಗವಹಿಸಿದ್ದ ವಿದ್ಯಾರ್ಥಿಗಳು. ಕೋಸಂಬರಿ, ಪ್ರುಟ್ ಸಲಾಡ್, ಕೊಲ್ಡ್ ಕಾಫಿ, ಕೇಕ್, ಹಣ್ಣಿನ ರಸ ತಯಾರಿಸಿದರು. ‘ವಿದ್ಯಾರ್ಥಿಗಳಿಗೆ ಅರೋಗ್ಯದಲ್ಲಿ ಆಹಾರದ ಪಾತ್ರ ಮನದಟ್ಟು ಮಾಡಲು ಸ್ಪರ್ಧೆ ಆಯೋಜಿಸಲಾಗಿತ್ತು’ ಎಂದು ಮುಖ್ಯ ಶಿಕ್ಷಕಿ ಪುಷ್ಪಾ ಹೇಳಿದರು. ‘ಬೇಕರಿ ನೋಡಿದರೆ ತಿನ್ನುವ ವ್ಯಾಮೋಹ ಪುಟಿಯುತ್ತದೆ. ಆದರೆ ಆರೋಗ್ಯಕ್ಕೆ ಅದು ಒಳ್ಳೆಯದಲ್ಲ.. ಮೊಳಕೆ ಕಾಳು, ಹಣ್ಣುಗಳು, ಆರೋಗ್ಯ ಕಾಪಾಡುತ್ತವೆ’ ಎಂದು ಪ್ರಾಂಶುಪಾಲ ಆನಂದ್ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !