‘ಪಪ್ಪಿ ಐಸ್‌ಕ್ರೀಂ’ ಹೊಸ ಟ್ರೆಂಡ್

7

‘ಪಪ್ಪಿ ಐಸ್‌ಕ್ರೀಂ’ ಹೊಸ ಟ್ರೆಂಡ್

Published:
Updated:
Deccan Herald

ತೈಪೆ: ಶ್ವಾನಗಳನ್ನು ಹೋಗಲುವ ಹೊಸ ರೀತಿಯ ‘ಪಪ್ಪಿ ಐಸ್‌ಕ್ರೀಂ’ ಈಗ ಅಂತರ್ಜಾಲದಲ್ಲಿ ಜನಪ್ರಿಯ. ತೈವಾನ್‌ನ ಜೆಸಿ ಕೊ ಆರ್ಟ್ ಕಿಚನ್ ಎಂಬ ರೆಸ್ಟೋರೆಂಟ್ ಇದನ್ನು ಸಿದ್ಧಪಡಿಸಿದೆ. ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ಭಾರಿ ಸದ್ದು ಮಾಡಿವೆ.  

ಪೂರೈಸಲು ಸಾಧ್ಯವಾಗದ ಮಟ್ಟಿಗೆ ಇದರ ಬೇಡಿಕೆ ಹೆಚ್ಚಿದೆ. ದಿನವೊಂದಕ್ಕೆ 100 ಐಸ್‌ಕ್ರೀಂ ತಯಾರಿಸಲಷ್ಟೇ ಸಾಧ್ಯ ಎಂದು ರೆಸ್ಟೋರೆಂಟ್ ಹೇಳಿದೆ. ಇದರ ಬೆಲೆ ₹250ರಿಂದ ₹400. ಲ್ಯಾಬ್ರಡಾರ್, ಶಾರ್‌ ಪೈ ಹಾಗೂ ಪಗ್ ತಳಿಯ ಶ್ವಾನಗಳನ್ನು ಹೋಲುವ ಆಕಾರದಲ್ಲಿ, ವಿವಿಧ ಫ್ಲೇವರ್‌ಗಳಲ್ಲಿ ಇವು ಲಭ್ಯ. ಒಂದು ಐಸ್‌ಕ್ರೀಂ ತಯಾರಿಸಲು ಐದು ಗಂಟೆ ಬೇಕಾಗುತ್ತದೆ ಎಂದು ಬಿಬಿಸಿ ವರದಿ ಮಾಡಿದೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !