ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಒಣದ್ರಾಕ್ಷಿ ಪೇಯಗಳು

Last Updated 6 ಮೇ 2022, 22:45 IST
ಅಕ್ಷರ ಗಾತ್ರ

ಶರಬತ್ತು

ಬೇಕಾಗುವ ಸಾಮಗ್ರಿಗಳು: ನೆನೆಸಿಟ್ಟ ಕಪ್ಪು ಒಣದ್ರಾಕ್ಷಿ 15 ರಿಂದ 20, ಬೆಲ್ಲದ ಪುಡಿ – 1/2 ಕಪ್, ನಿಂಬೆರಸ – ಅರ್ಧ ಚಮಚ, ಏಲಕ್ಕಿ ಪುಡಿ, ಉಪ್ಪು– ಚಿಟಿಕೆ

ತಯಾರಿಸುವ ವಿಧಾನ: ನೆನೆಸಿಟ್ಟ ಕಪ್ಪು ಒಣದ್ರಾಕ್ಷಿಯೊಂದಿಗೆ ಮೇಲೆ ಹೇಳಿರುವ ಪದಾರ್ಥಗಳನ್ನು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಅರೆದುಕೊಳ್ಳಿ. ಈ ದ್ರಾವಣವನ್ನು ಶೋಧಿಸಿಕೊಂಡರೆ ಗಟ್ಟಿ ಶರಬತ್ತು ಸಿದ್ಧ. ಇದಕ್ಕೆ ಅಗತ್ಯ ನೀರು ಬೆರೆಸಿಕೊಂಡು ಕುಡಿಯುವ ಹದಕ್ಕೆ ಪಾನೀಯ ತಯಾರಿಸಿಕೊಳ್ಳಬಹುದು.

ಮಸಾಲಾ ಡ್ರಿಂಕ್

ಬೇಕಾಗುವ ಸಾಮಗ್ರಿಗಳು: ನೆನೆಸಿಟ್ಟ ಕಪ್ಪು ಒಣದ್ರಾಕ್ಷಿ 15 ರಿಂದ 20, ಕಡ್ಡಿಯಿಂದ ಬೇರ್ಪಡಿಸಿದ ಪುದೀನಾ ಸೊಪ್ಪು ಒಂದು ಹಿಡಿ, ಹಸಿ ಶುಂಠಿ ತುರಿ – ಕಾಲು ಚಮಚ, ಸಕ್ಕರೆ – ಕಾಲು ಚಮಚ, ರುಚಿಗೆ ಅನುಗುಣವಾಗಿ ಬ್ಲಾಕ್ ಸಾಲ್ಟ್, ಚಾಟ್ ಮಸಾಲ ಪುಡಿ.

ತಯಾರಿಸುವ ವಿಧಾನ: ನೆನೆಸಿಟ್ಟ ಕಪ್ಪು ಒಣದ್ರಾಕ್ಷಿ, ಪುದೀನ ಸೊಪ್ಪಿನೊಂದಿಗೆ ಒಂದು ಸುತ್ತು ಅರೆದು ನಂತರ ಶುಂಠಿ, ಬ್ಲಾಕ್ ಸಾಲ್ಟ್, ಚಾಟ್ ಮಸಾಲ, ಸಕ್ಕರೆ, ಎರಡು ಲೋಟ ನೀರು ಸೇರಿಸಿ ಅರೆಯಿರಿ. ನಂತರ ಶೋಧಿಸಿದರೆ ಮಸಾಲಾ ಡ್ರಿಂಕ್ ರೆಡಿ. (ಪಾನೀಯದ ಸಾಂದ್ರತೆಗೆ ತಕ್ಕಂತೆ ನೀರು ಬೆರೆಸಿಕೊಳ್ಳಬಹುದು. ಬ್ಲಾಕ್ ಸಾಲ್ಟ್ ಬದಲಿಗೆ ಸಾದಾ ಉಪ್ಪು ಬಳಸಬಹುದು)

ಮಜ್ಜಿಗೆ

ಬೇಕಾಗುವ ಸಾಮಗ್ರಿಗಳು: ನೆನೆಸಿಟ್ಟ ಕಪ್ಪು ಒಣ ದ್ರಾಕ್ಷಿ 8 ರಿಂದ 10, ಕಡೆದ ಮೊಸರು – ಅರ್ಧ ಕಪ್, ಕೊತ್ತಂಬರಿಸೊಪ್ಪು ಸ್ವಲ್ಪ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ತಲಾ – ಕಾಲು ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ನೆನೆಸಿಟ್ಟ ಕಪ್ಪು ಒಣದ್ರಾಕ್ಷಿ, ಕೊತ್ತಂಬರಿ ಸೊಪ್ಪು ಒಂದು ಸುತ್ತು ಅರೆದ ನಂತರ ಕಡೆದ ಮೊಸರು, ಮೆಣಸು, ಜೀರಿಗೆಪುಡಿ, ಉಪ್ಪು, ಒಂದುಲೋಟ ನೀರು ಸೇರಿಸಿ ಚೆನ್ನಾಗಿ ಅರೆದು ಶೋಧಿಸಿಕೊಳ್ಳಿ. ತಂಪಾದ ದ್ರಾಕ್ಷಿ ಮಜ್ಜಿಗೆ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT