ಹಲಸಿನ ಹಣ್ಣಿನ ರುಚಿಕರ ಅಡುಗೆ

7
ಹಲಸಿನ ಹೊಸ ನಮೂನೆಯ ಖಾದ್ಯ ತಯಾರಿಸಲು ಇದು ಸಕಾಲ; ಮಕ್ಕಳಿಗೆ ಇಷ್ಟವಾಗುವ ಹೊಸ ಹೊಸ ಅಡುಗೆ

ಹಲಸಿನ ಹಣ್ಣಿನ ರುಚಿಕರ ಅಡುಗೆ

Published:
Updated:
ಹಲಸಿನ ಹಣ್ಣಿನ ಚಾಕಲೇಟ್

ಹಲಸಿನ ಹಣ್ಣಿನ ಚಾಕಲೇಟ್

ಬೇಕಾಗುವ ವಸ್ತುಗಳು : 1 ಕಪ್ ಹಲಸಿನ ಹಣ್ಣಿನ ಸೊಳೆ, 1 ಕಪ್ ಸಕ್ಕರೆ, ¼ ಕಪ್ ತೆಂಗಿನ ತುರಿ, ¼ ಕಪ್ ಗೋಧಿ ಪುಡಿ, ½ ಚಮಚ ಶುಂಠಿ ಪುಡಿ, ¼ ಚಮಚ ಕಾಳುಮೆಣಸಿನ ಪುಡಿ, 1 ಚಮಚ ತುಪ್ಪ, ಅಲಂಕರಿಸಲು ಸ್ವಲ್ಪ ಗೋಡಂಬಿ.

ಮಾಡುವ ವಿಧಾನ: ಹಲಸಿನ ಹಣ್ಣಿಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ರುಬ್ಬಿದ ಹಣ್ಣಿನ ಮಿಶ್ರಣ ಹಾಕಿ. ಹಣ್ಣಿನ ಮಿಶ್ರಣ ಬೇಯುವವರೆಗೆ ತೊಳಸಿ. ನಂತರ ತೆಂಗಿನತುರಿ, ಸಕ್ಕರೆ ಹಾಕಿ ತೊಳಸಿ. ಸಕ್ಕರೆ ಕರಗಿ ನೀರಾದ ಮೇಲೆ ಗೋಧಿ ಪುಡಿ ಹಾಕಿ ಸರಿಯಾಗಿ ತೊಳಸಿ ಮಿಶ್ರಣ ಗಟ್ಟಿಯಾಗುವ ವರೆಗೆ ತೊಳಸಿ.

ನಂತರ ಶುಂಠಿ ಪುಡಿ ಕಾಳುಮೆಣಸಿನ ಪುಡಿ ಹಾಕಿ ತೊಳಸಿ. ಬಾಣಲೆಯಿಂದ ತಳ ಬಿಡುವ ತನಕ ಕಾಯಿಸಿ. ನಂತರ ಒಲೆಯಿಂದ ಕೆಳಗಿಸಿ. ಕೈಗೆ ತುಪ್ಪದ ಪಸೆ ಮಾಡಿ ಸಣ್ಣ ಸಣ್ಣ ಚಾಕಲೇಟ್ ಹದಕ್ಕೆ ಅಥವಾ ಸ್ವಲ್ಪ ಚಪ್ಪಟೆ ಮಾಡಿ ತಟ್ಟೆಯಲ್ಲಿ ಹಾಕಿ. ಆರಿದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿಡಿ.

**

ಹಲಸಿನ ಹಣ್ಣಿನ ಐಸ್ ಕ್ರೀಂ

ಬೇಕಾಗುವ ವಸ್ತುಗಳು: 1 ಕಪ್ ಹಲಸಿನ ಹಣ್ಣು, 2 ಕಪ್ ಹಾಲು, 2 ಚಮಚ ಕೂವ ಹಿಟ್ಟು, 1 ಕಪ್ ಸಕ್ಕರೆ.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಕೂವ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ತಣ್ಣಗಾದ ನಂತರ ½ ಕಪ್ ಹಾಲಲ್ಲಿ ಹಾಕಿ ಗಂಟಾಗದಂತೆ ತೊಳಸಿ. ನಂತರ ದಪ್ಪ ತಳದ ಬಾಣಲೆಗೆ ಹಾಲು ಹಾಕಿ ಕುದಿಸಿ. ಚೆನ್ನಾಗಿ ಕುಡಿಯುವಾಗ ಸಕ್ಕರೆ ಮತ್ತು ಕೂವೆ ಮಿಶ್ರಣ ಹಾಕಿ ಕುದಿಸಿ. ತಳ ಹಿಡಿಯದಂತ ತೊಳಸುತ್ತಾ ಇರಿ.

ಮಿಶ್ರಣ ಕುದಿದು ದಪ್ಪವಾದಾಗ ಕೆಳಗಿಳಿಸಿ. ಹಲಸಿನ ಹಣ್ಣನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಹಾಲಿನ ಮಿಶ್ರಣಕ್ಕೆ ಇದನ್ನು ಸೇರಿಸಿ ಚೆನ್ನಾಗಿ ಬೆರೆಸಿ ತಣ್ಣಗಾಗಲು ಬಿಡಿ. ಚೆನ್ನಾಗಿ ಆರಿದ ನಂತರ ಒಂದು ಪಾತ್ರೆಗೆ ಹಾಕಿ ಫ್ರಿಝರ್ ನಲ್ಲಿಡಿ. 1 ಗಂಟೆಯ ನಂತರ ಐಸ್ಕ್ರೀಂ ಗಟ್ಟಿಯಾಗುತ್ತದೆ. ಆಗ ಸೌಟಿನಿಂದ ಒಮ್ಮೆ ಚೆನ್ನಾಗಿ ಬೀಟ್ ಮಾಡಿ ಮತ್ತೆ ಫ್ರೀಝರ್ ನಲ್ಲಿ ಇಡಿ. 2-3 ಗಂಟೆಯ ನಂತರ ಹೊರ ತೆಗೆದರೆ ರುಚಿಯಾದ ಐಸ್‌ ಕ್ರೀಂ ತಿನ್ನಲು ಸಿದ್ಧ.

**

ಹಲಸಿನ ಹಣ್ಣಿನ ದೋಸೆ

ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, ¾ ಕಪ್ ಹಲಸಿನ ಹಣ್ಣಿನ ಸೊಳೆ, 2 ಚಮಚ ತೆಂಗಿನತುರಿ, ಉಪ್ಪು ರುಚಿಗೆ ತಕ್ಕಷ್ಟು, 3-4 ಚಮಚ ಎಣ್ಣೆ.

ಮಾಡುವ ವಿಧಾನ: ಅಕ್ಕಿಯನ್ನು 2-3 ಗಂಟೆ ನೆನೆಸಿ. ನಂತರ ತೊಳೆದ ನೀರು ಬಸಿದು ಹಲಸಿನ ಹಣ್ಣಿನ ಸೊಳೆ, ಕಾಯಿತುರಿ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿಯೇ ನುಣ್ಣಗೆ ರುಬ್ಬಿ. ತವಾ ಒಲೆಯ ಮೇಲಿಟ್ಟು ಬಿಸಿಯಾದಾಗ ಸ್ವಲ್ಪ ಎಣ್ಣೆ ಪಸೆ ಮಾಡಿ ದೋಸೆ ಹೊಯಿದು ಮುಚ್ಚಿಡಿ ಅಲ್ಲಲ್ಲಿ ಕಂದು ಬಣ್ಣ ಬಂದಾಗ ಸ್ವಲ್ಪ ಎಣ್ಣೆ ಹಾಕಿ ಮುಗುಚಿ ಹಾಕಿ 2 ಬದಿ ನಸು ಕಂದು ಬಣ್ಣ ಬರುವ ತನಕ ಬೇಯಿಸಿ. ಖಾರದ ಚಟ್ನಿಯೊಂದಿಗೆ ಸವಿಯಲು ರುಚಿ.

**

ಪೇಡಾ

ಸಾಮಗ್ರಿಗಳು: 1 ಕಪ್ ನುಣ್ಣಗೆ ರುಬ್ಬಿದ ಹಲಸಿನ ಹಣ್ಣಿನ ಪೇಸ್ಟ್, 1 ಕಪ್ ಸಕ್ಕರೆ, ½ ಕಪ್ ಸಕ್ಕರೆ ಪುಡಿ. 

ಮಾಡುವ ವಿಧಾನ: ದಪ್ಪ ತಳದ ಬಾಣಲೆಯನ್ನು ಒಲೆ ಮೇಲಿಡಿ. ಹಲಸಿನ ಹಣ್ಣಿನ ಮಿಶ್ರಣಕ್ಕೆ ಸಕ್ಕರೆ ಬೆರೆಸಿ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿ ಹಿಟ್ಟನ್ನು ಸೌಟಿನಿಂದ ಕಲಸುತ್ತೀರಿ. ಹಿಟ್ಟು ಬೆಂದು ಮುದ್ದೆಯಾಗಿ ತಳ ಬಿಡುತ್ತಾ ಬಂದಾಗ ಒಲೆಯಿಂದ ಇಳಿಸಿ. ಉಂಡೆಗಳನ್ನು ಮಾಡಿ ಸಕ್ಕರೆ ಪುಡಿಯಲ್ಲಿ ಹೊರಳಿಸಿ ಇಡಿ. ರುಚಿ ನೋಡಿ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !