ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ. ನ್ಯೂ ಇಯರ್ ಪಾರ್ಟಿಗಾಗಿ ಮಾಡಲು ಹೆಚ್ಚು ಸಮಯ ಬೇಡದ, ಅತಿ ಕಡಿಮೆ ಸಾಮಗ್ರಿಗಳನ್ನು ಬಳಸಿ ಫಟಾಫಟ್ ಎಂದು ಮಾಡಬಹುದಾದ ಸಮುದ್ರಾಹಾರದ ಕೆಳಕಂಡ ರೆಸಿಪಿಗಳನ್ನು ಎಲಿಜಬೆತ್ ಹೆನ್ರಿ ನೀಡಿದ್ದಾರೆ.

ಗ್ರೀನ್ ಫಿಶ್ ಫ್ರೈ

ಶೀಲಾ, ಕಾಟ್ಲಾ, ಬಂಗುಡೆ ಈ ಮೂರು ಬಗೆಯ ಮೀನುಗಳಲ್ಲಿ ಯಾವುದಾದರೂ ಸರಿ.

ಬೇಕಾಗುವ ಸಾಮಗ್ರಿ: ಒಂದು ಕೆ.ಜಿ. ಮೀನು (ಮೀನಿನ ಮಧ್ಯಭಾಗ ಮಾತ್ರ ಬಳಸಿ), ಒಂದು ಹಿಡಿಯಷ್ಟು ದನಿಯಾ, ಒಂದು ಹಿಡಿಯಷ್ಟು ಪುದೀನಾ ಸೊಪ್ಪು, ಆರು ಹಸಿಮೆಣಸಿನಕಾಯಿ, ಒಂದು ಚಮಚದಷ್ಟು ಶುಂಠಿ– ಬೆಳ್ಳುಳ್ಳಿ ಪೇಸ್ಟ್ , ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಈ ಮೇಲೆ ತಿಳಿಸಿದ ಅಷ್ಟೂ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ, ಈ ಮಸಾಲೆಯನ್ನು, ಕತ್ತರಿಸಿದ ಮೀನಿನ ಮಧ್ಯಭಾಗಕ್ಕೆ ಹಾಕಿ ಮ್ಯಾರಿನೇಟ್ ಮಾಡಬೇಕು. ಹತ್ತು ನಿಮಿಷ ಬಿಟ್ಟು ತವಾ ಮೇಲಿಟ್ಟು, ಫ್ರೈ ಮಾಡಬೇಕು. ಫ್ರೈಗೆ ಕೊಬ್ಬರಿ ಎಣ್ಣೆ ಬಳಸಿದರೆ ರುಚಿಕಟ್ಟಾಗಿರುತ್ತದೆ.

ರೆಡ್ಹಾಟ್ ಮಸಾಲ ಫಿಶ್

ಬೇಕಾಗುವ ಸಾಮಗ್ರಿ: ಎರಡೂವರೆ ಚಮಚ ಕೆಂಪುಮೆಣಸಿನಪುಡಿ, ಅರಸಿನ ಅರ್ಧ ಚಮಚ, ಒಂದು ಚಮಚ ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು.

ಮಾಡುವ ವಿಧಾನ: ಮೇಲೆ ತಿಳಿಸಿದ ಅಷ್ಟೂ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಮೀನಿನ ಮಧ್ಯ ಭಾಗಕ್ಕೆ ಈ ಮಸಾಲೆಯನ್ನು ಹಾಕಿ ಮ್ಯಾರಿನೇಟ್ ಮಾಡಿ, ಅರ್ಧ ಗಂಟೆ ಬಿಟ್ಟು ತವಾದಲ್ಲಿ ಫ್ರೈ ಮಾಡಬೇಕು.

ಸಿಗಡಿ ಕರಿಲೀವ್ಸ್

ಬೇಕಾಗುವ ಸಾಮಗ್ರಿ: ಅರ್ಧ ಕೆ.ಜಿ. ಸಿಗಡಿ, ಒಂದು ಚಮಚ ದನಿಯಾ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಕಾಳಮೆಣಸು, ಒಂದು ಹಿಡಿಯಷ್ಟು ಕರಿಬೇವಿನ ಸೊಪ್ಪು, ಚಿಕ್ಕ ನೆಲ್ಲಿಕಾಯಿ ಗಾತ್ರದ ಅರ್ಧದಷ್ಟು ಹುಣಿಸೆಹಣ್ಣು, ಎರಡು ಬ್ಯಾಡಗಿ ಮೆಣಸಿನಕಾಯಿ, ಎರಡು ಹಸಿಮೆಣಸಿನಕಾಯಿ. ಇವಿಷ್ಟನ್ನೂ ಮಿಕ್ಸಿಗೆ ಹಾಕಿ, ನೀರು ಹಾಕದೆ ಚೆನ್ನಾಗಿ ಪುಡಿ ಮಾಡಿಕೊಳ್ಳಿ.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಚೆನ್ನಾಗಿ ತೊಳೆದಿಟ್ಟುಕೊಂಡ ಸಿಗಡಿ ಮತ್ತು ಕರಿಬೇವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ಆಮೇಲೆ ಮಿಕ್ಸಿಯಲ್ಲಿರುವ ಪುಡಿಯನ್ನು ಹಾಕಿ ಮತ್ತಷ್ಟು ಬೇಯಿಸಿದರೆ ಸಿಗಡಿ ಕರಿಲೀವ್ಸ್ ಸವಿಯಲು ಸಿದ್ಧ.

ಸೀಗಡಿ ಘೀ ರೋಸ್ಟ್

ಬೇಕಾಗುವ ಸಾಮಗ್ರಿ: ಅರ್ಧ ಕೆ.ಜಿ. ಸೀಗಡಿ, ಎಂಟು ಬ್ಯಾಡಗಿ ಮೆಣಸಿನಕಾಯಿ, ಚಿಕ್ಕ ನೆಲ್ಲಿಕಾಯಿ ಗಾತ್ರದಷ್ಟು ಹುಣಿಸೆಹಣ್ಣು, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಉಪ್ಪು,ನಾಲ್ಕು ಕಾಳು ದನಿಯಾ, ನಾಲ್ಕೈದು ಬೆಳ್ಳುಳ್ಳಿ ಎಸಳು. ಇಷ್ಟನ್ನೂ ಬಿಸಿನೀರಿನಲ್ಲಿ ನೆನೆಸಿಡಬೇಕು. ಆಮೇಲೆ ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

ಮಾಡುವ ವಿಧಾನ: ಚೆನ್ನಾಗಿ ತೊಳೆದಿಟ್ಟ ಸೀಗಡಿಗೆ ಅರಸಿನ ಹಾಗೂ ಉಪ್ಪು ಹಾಕಿ ನೆನೆಸಿಡಬೇಕು. ಆಮೇಲೆ ಸೀಗಡಿಯಲ್ಲಿರುವ ನೀರನ್ನು ಸಂಪೂರ್ಣವಾಗಿ ಸೋಸಿಕೊಳ್ಳಬೇಕು. ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ, ಅದರ ಜತೆಗೆ ಸೀಗಡಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ, ಬೇಯಲು ಬಿಡಬೇಕು. ಚೆನ್ನಾಗಿ ಬೆಂದಾದ ಮೇಲೆ ಪಾತ್ರೆಯನ್ನು ಇಳಿಸುವಾಗ ಅರ್ಧ ಚಮಚ ಸಕ್ಕರೆ ಹಾಕಬೇಕು. ಸಕ್ಕರೆ ಸೇರಿಸುವುದರಿಂದ ಸೀಗಡಿ ರುಚಿ ದುಪ್ಪಟ್ಟಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.