ಶುಕ್ರವಾರ, ನವೆಂಬರ್ 22, 2019
26 °C

ಅಂಗವಿಕಲ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ

Published:
Updated:
Prajavani

ಕೆ.ಆರ್.ಪುರ: ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮಾರುತಿನಗರ ವಾರ್ಡ್‌ ವತಿಯಿಂದ ಲಿಂಗರಾಜಪುರದ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ ಸೆಂಟರ್‌ನಲ್ಲಿ ಅಂಗವಿಕಲ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಟಿಫಿನ್ ಕ್ಯಾರಿಯರ್ ವಿತರಿಸಲಾಯಿತು.

ಈ ವೇಳೆ ಬಿಜೆಪಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಘಟಕದ ಅಧ್ಯಕ್ಷ ಎಂ.ಸಿ.ಶ್ರೀನಿವಾಸ್‌ ಮಾತನಾಡಿ, ‘ದೇಶದ ಅಭಿವೃದ್ಧಿ ಬಗ್ಗೆ ಮೋದಿ ಅವರು ವಿಶೇಷ ಚಿಂತನೆ ಹೊಂದಿದ್ದಾರೆ. ತಳಮಟ್ಟದಿಂದ ಯೋಜನೆ ರೂಪಿಸಿ ಭಯೋತ್ಪಾದನೆ ದೂರ‌ ಮಾಡಿದ್ದಾರೆ’ ಎಂದರು.

ಮಾರುತಿ ಸೇವಾನಗರ ವಾರ್ಡ್ ಅಧ್ಯಕ್ಷ ಎಂ. ಶ್ರೀನಿವಾಸ್, ಕೇಂದ್ರದ 300 ಮಕ್ಕಳಿಗೆ ಪ್ಲಾಸ್ಟಿಕ್ ರಹಿತ ಸ್ಟಿಲ್ ಟಿಫಿನ್ ಕ್ಯಾರಿಯರ್, ಹಣ್ಣುಹಂಪಲು, ಕೇಕ್ ವಿತರಿಸಿದ್ದೇವೆ’ ಎಂದರು. ಈ ಸಂದರ್ಭದಲ್ಲಿ ಸುಮಾಶ್ರೀನಿವಾಸ್, ಬಿಜೆಪಿ ನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ್ ಇದ್ದರು.

ಪ್ರತಿಕ್ರಿಯಿಸಿ (+)