ಸುಳ್ಳು ಸುದ್ದಿ ಹಂಚಿಕೆಯಲ್ಲಿ ವೃದ್ಧರೇ ಮುಂದು: ಅಧ್ಯಯನ

7
ಫೇಸ್‌ಬುಕ್‌ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಿನಿಮಯ

ಸುಳ್ಳು ಸುದ್ದಿ ಹಂಚಿಕೆಯಲ್ಲಿ ವೃದ್ಧರೇ ಮುಂದು: ಅಧ್ಯಯನ

Published:
Updated:
Prajavani

ನ್ಯೂಯಾರ್ಕ್‌: ವೃದ್ಧರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸುಳ್ಳು ಸುದ್ದಿಯನ್ನು ಫೇಸ್‌ಬುಕ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ ಎನ್ನುವುದನ್ನು ಅಧ್ಯಯನ ವರದಿಯೊಂದು ತಿಳಿಸಿದೆ.

ಅಮೆರಿಕದ ಶೇಕಡ 9ಕ್ಕಿಂತ ಕಡಿಮೆಜನ ಫೇಸ್‌ಬುಕ್‌ ಮೂಲಕ ಸುಳ್ಳು ಸುದ್ದಿಯನ್ನು 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಹಂಚಿಕೊಂಡಿದ್ದರು ಎಂದು ‘ಸೈನ್ಸ್‌ ಅಡ್ವಾನ್ಸಸ್‌’ ಲೇಖನ ಪ್ರಕಟಿಸಿತ್ತು.

ಆದರೆ, ನ್ಯೂಯಾರ್ಕ್‌ ವಿಶ್ವವಿದ್ಯಾಲಯ ಮತ್ತು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 65ಕ್ಕಿಂತ ಹೆಚ್ಚಿನ ವಯೋಮಾನದವರು ಸುಳ್ಳು ಸುದ್ದಿ ಹಂಚಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದು ತಿಳಿದು ಬಂದಿದೆ.

ಅಧ್ಯಯನಕ್ಕಾಗಿ ಕೈಗೊಂಡ ಮಾದರಿಗಳಲ್ಲಿ 18ರಿಂದ 29 ವಯಸ್ಸಿನ ಶೇಕಡ 3ರಷ್ಟು ಯುವಕರು ಮಾತ್ರ ಸುಳ್ಳು ಸುದ್ದಿಗಳ ವೆಬ್‌ಸೈಟ್‌ಗಳಿಂದ ಮಾಹಿತಿಪಡೆದಿದ್ದನ್ನು ವಿನಿಮಯ ಮಾಡಿಕೊಂಡಿದ್ದರು. ಆದರೆ, 65 ವಯಸ್ಸಿನ ಶೇಕಡ 11ರಷ್ಟು ಮಂದಿ ಈ ರೀತಿಯ ಮಾಹಿತಿ ಹಂಚಿಕೊಂಡಿದ್ದರು.

 ‘ಹಿರಿಯ ನಾಗರಿಕರು ಸುಳ್ಳು ಸುದ್ದಿಯನ್ನು ವಿನಿಮಯ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದರೆ ಅದರ ಪರಿಣಾಮಗಳು ಸಹ ವಿಭಿನ್ನವಾಗಿರುತ್ತವೆ. ಹೀಗಾಗಿ, ಒಟ್ಟಾರೆ ಸುಳ್ಳು ಸುದ್ದಿಯನ್ನು ಹಬ್ಬಿಸುವುದನ್ನು ತಡೆಯುವ ಸಾಧನಗಳನ್ನು ರೂಪಿಸುವ ಅಗತ್ಯವಿದೆ’ ಎಂದು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಆ್ಯಂಡ್ರೆವ್‌ ಗೆಸ್ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !