ಕನ್ನಡ ಪ್ರತಿಷ್ಠೆಯ ವಿಷಯವಾಗಲಿ

7
ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್‌ ಸಲಹೆ

ಕನ್ನಡ ಪ್ರತಿಷ್ಠೆಯ ವಿಷಯವಾಗಲಿ

Published:
Updated:
Deccan Herald

ಗುಂಡ್ಲುಪೇಟೆ: ‘ಕನ್ನಡ ಎಂಬುದೇ ನಮಗೆ ಪ್ರತಿಷ್ಠೆಯ ವಿಷಯವಾಗಬೇಕು. ಕೀಳರಿಮೆ ಬಿಟ್ಟು ಕನ್ನಡವನ್ನು ಮಾತನಾಡಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್‌ ಹೇಳಿದರು.

ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದರು.

2011ರಲ್ಲಿ ಕನ್ನಡ ಮಾತನಾಡುವರ ಸಂಖ್ಯೆ ಶೇ 53ರಷ್ಟಿತ್ತು. ಅದು 2018ಕ್ಕೆ ಶೇ 43ಕ್ಕೆ ಕುಸಿದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಸಂಸ್ಕೃತ, ಪಾಲಿ, ಪ್ರಾಕೃತ ಭಾಷೆಗಳ ಸಾಲಿಗೆ ಕನ್ನಡವೂ ಸೇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಸಕ ಸಿ.ಎಸ್.ನಿರಂಜನ್‌ ಕುಮಾರ್ ಮಾತನಾಡಿ, ‘ಭಾಷೆ ಆಧಾರದಲ್ಲಿ ಕನ್ನಡಿಗರನ್ನೆಲ್ಲಾ ಒಗ್ಗೂಡಿಸಲು ಏಕೀಕರಣ ಚಳವಳಿ ನಡೆಸಲಾಯಿತು. ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಪ್ರಾಧಾನ್ಯತೆ ನೀಡಬೇಕು’ ಎಂದರು.

ಲೇಖಕರಾದ ಭಾರ್ಗವ ಕೆಂಪರಾಜು, ಜಿ.ಡಿ.ದೊಡ್ಡಯ್ಯ, ಎಚ್.ಎಂ.ನಾಗಮಲ್ಲಪ್ಪ, ಗು.ಚಿ.ರಮೇಶ್, ಗುಂಪು ದೇವರಾಜು ಅವರನ್ನು ಸನ್ಮಾನಿಸಲಾಯಿತು.

ತಾ.ಪಂ ಅಧ್ಯಕ್ಷ ಕೆ.ಎಸ್.ಜಗದೀಶಮೂರ್ತಿ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ತಹಶೀಲ್ದಾರ್ ಸಿ.ಭಾರತಿ, ಬಿಜೆಪಿ ಮಂಡಲ ಅಧ್ಯಕ್ಷ ಎನ್.ಮಲ್ಲೇಶ್, ಎಚ್.ಎಂ.ಮಹೇಶ್, ಡಾ.ಹಾಲತಿ ಸೋಮಶೇಖರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !