ಪೀಣ್ಯದಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆ

7

ಪೀಣ್ಯದಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆ

Published:
Updated:
Deccan Herald

ಬೆಂಗಳೂರು: ಪೀಣ್ಯದಾಸರಹಳ್ಳಿಯ 1ನೇ ಹಂತದಲ್ಲಿ ಧಾರ್ಮಿಕ ಚೇತನ ಜನಪರ ಸೇವಾ ಟ್ರಸ್ಟ್ ವತಿಯಿಂದ ಹಾಗೂ ಲಯನ್ಸ್ ಕ್ಲಬ್ ಜಯನಗರ, ಹೆಲ್ಪೇಜ್‌ ಇಂಡಿಯಾ ಬೆಂಗಳೂರು ಕೇಂದ್ರದ ಆಶ್ರಯದಲ್ಲಿ ಸ್ಥಾಪಿಸಿದ ಆರೋಗ್ಯ ಕೇಂದ್ರವನ್ನು ಶಾಸಕ ಮುನಿರತ್ನ ಉದ್ಘಾಟಿಸಿದರು.

'ಈ  ಕೇಂದ್ರದಲ್ಲಿ ನಾಗರಿಕರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಣ್ಣಿನ ಪರೀಕ್ಷೆ ಹಾಗೂ ಸಲಹೆಯನ್ನು ಉಚಿತವಾಗಿ ನೀಡಲಿದ್ದೇವೆ. 40 ವರ್ಷದ ಮೇಲ್ಪಟ್ಟ ಮಹಿಳೆಯರಿಗೆ ಸ್ತನಕ್ಯಾನ್ಸರ್ ಪರೀಕ್ಷೆ ಹಾಗೂ ಸಲಹೆಯನ್ನು ನೀಡಿ ಉಚಿತ ಔಷಧ ನೀಡಲಾಗುತ್ತದೆ’ ಎಂದು ಟ್ರಸ್ಟ್‌ ಅಧ್ಯಕ್ಷ ನರಸಿಂಹಯ್ಯ ಹೇಳಿದರು.

ಸಮಾರಂಭದಲ್ಲಿ ಲಯನ್ಸ್ ಕ್ಲಬ್‌ನ ಶ್ಯಾಂಸುಂದರ್, ಖಚಾಂಚಿ ಕುಪ್ಪಸ್ವಾಮಿ, ಉಪಾಧ್ಯಕ್ಷ ಹರಿಪ್ರಸಾದ್, ಗೌರವಾಧ್ಯಕ್ಷ ಪಿ.ವಿ.ರೇವಣ್ಣ, ಕಾರ್ಯದರ್ಶಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಹನೀಫ್, ಸದಸ್ಯೆ ಶಾರದಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !