ನಾವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಇರುವ ಅಂಗಾಂಗವೇ ನಮ್ಮ ‘ಕರುಳು’ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಸುಮಾರು ಒಂಬತ್ತು ಮೀಟರಿನಷ್ಟು ಉದ್ದವಿರುವ ಮನುಷ್ಯನ ಕರುಳಿನೊಳಗೆ ವಿವಿಧ ಬಗೆಯ ಸೂಕ್ಷ್ಮಾಣುಜೀವಿಗಳು ವಾಸಿಸುತ್ತವೆ. ಕರುಳಿನೊಳಗೆ ಮನೆಮಾಡಿರುವ ಕೋಟಿ ಕೋಟಿ ಸಂಖ್ಯೆಯ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ಗಳು ವಿವಿಧ ಪದಾರ್ಥಗಳನ್ನು ಉತ್ಪಾದಿಸುತ್ತವೆ. ನಮ್ಮ ಕರುಳಿನೊಳಗೆ ವಾಸಿಸುತ್ತಿರುವ ಈ ಸೂಕ್ಷ್ಮಾಣುಜೀವಿಗಳು ನಮ್ಮ ಆರೋಗ್ಯವನ್ನು ವಿವಿಧ ರೀತಿಯಲ್ಲಿ ನಿಯಂತ್ರಿಸುತ್ತವೆ. ಕರುಳಿನೊಳಗೆ ಕೂಡ ನಮ್ಮ ಮಿದುಳಿನಲ್ಲಿ ಇರುವ ರೀತಿಯ ನರಮಂಡಲವೂ ಇದೆ. ಮನುಷ್ಯರ ಕರುಳು ಮತ್ತು ಮಿದುಳಿನ ನಡುವೆ ಇರುವ ಸಂಪರ್ಕವನ್ನು ನಾವು ‘ಗಟ್ ಬ್ರೈನ್ ಆ್ಯಕ್ಸಿಸ್’ ಎಂದು ಕರೆಯುತ್ತೇವೆ. ಕರುಳು ಉತ್ಪಾದಿಸುವ ವಿವಿಧ ಹಾರ್ಮೋನುಗಳು, ನರಪ್ರೇಕ್ಷಕಗಳು (Neurotransmitters) ಮತ್ತು ಕೊಬ್ಬಿನ ಆಮ್ಲಗಳು ಮಿದುಳಿನ ಮೇಲೆ ಪರಿಣಾಮ ಬೀರುತ್ತವೆ. ಈ ಪರಿಣಾಮಗಳು ನಮ್ಮ ಮಾನಸಿಕ ಸಂತೋಷ, ಹಸಿವು, ನೆನಪಿನ ಶಕ್ತಿ, ರೋಗನಿರೋಧಕ ಶಕ್ತಿಗಳನ್ನು ನಿಯಂತ್ರಿಸುತ್ತವೆ.

ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ಕರುಳಿನ ಒಳಗಡೆ ವಾಸಿಸುವ ಜೀವಿಗಳು ಮನುಷ್ಯನ ಆರೋಗ್ಯದ ಮೇಲೆ ಬೀರುವ ಪ್ರಭಾವದ ಕುರಿತು ಬಹಳಷ್ಟು ಸಂಶೋಧನೆಗಳು ನಡೆದಿವೆ. ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ನಮ್ಮ ಕರುಳಿಲ್ಲಿರುವ ಸೂಕ್ಷ್ಮಾಣುಜೀವಿಗಳ ಸ್ಥಿತಿ ಚೆನ್ಗಾಗಿರಬೇಕಾಗುತ್ತದೆ. ನಾವು ಸೇವಿಸುವ ಆಹಾರ ನಮ್ಮ ಶರೀರದಲ್ಲಿರುವ ಸೂಕ್ಷ್ಮಾಣುಜೀವಿಗಳ ಆರೋಗ್ಯದ ಮೇಲೆ ಮತ್ತು ಅವರು ಉತ್ಪಾದಿಸುವ ಪದಾರ್ಥಗಳ ಮೇಲೆ ಪರಿಣಾಮವನ್ನು ಬೀರುತ್ತದೆ.

ಶಿಶುವೊಂದು ಭೂಮಿಯ ಮೇಲೆ ಬಂದಾಗ ಅದರ ಕರುಳಿನಲ್ಲಿ ಸೂಕ್ಷ್ಮಾಣುಜೀವಿಗಳು ಇರುವುದಿಲ್ಲ. ಅನಂತರದಲ್ಲಿ ನವಜಾತ ಶಿಶುವಿನ ಕರುಳಿನಲ್ಲಿ ವಿವಿಧ ಸೂಕ್ಷ್ಮಾಣುಜೀವಿಗಳು ನಿಧಾನವಾಗಿ ಮನೆಮಾಡುತ್ತಾ ಹೋಗುತ್ತವೆ. ನಮ್ಮ ದೇಹಕ್ಕೆ ಬೇಕಾಗುವ ವಿವಿಧ ಬಗೆಯ ವಿಟಮಿನ್ಗಳನ್ನು ನಾವು ಆಹಾರದ ಮೂಲಕ ಪಡೆಯುತ್ತೇವೆ. ಆದರೆ ನಮ್ಮ ರಕ್ತದ ಹೆಪ್ಪುಗಟ್ಟುವಿಕೆಯ ಮೇಲೆ ಪರಿಣಾಮ ಬೀರುವ ವಿಟಮಿನ್–ಕೆ ನಮಗೆ ಆಹಾರದಿಂದ ಸಿಗುವುದಿಲ್ಲ. ಅದನ್ನು ನಮ್ಮ ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಉತ್ಪಾದಿಸುತ್ತವೆ. ನವಜಾತಶಿಶುಗಳ ಕರುಳಿನೊಳಗೆ ಸೂಕ್ಷ್ಮಾಣುಜೀವಿಗಳು ಇಲ್ಲದಿರುವ ಕಾರಣ ಅವರಿಗೆ ವಿಟಮಿನ್–ಕೆನ ಕೊರತೆ ಉಂಟಾಗಿ ರಕ್ತಸ್ರಾವವಾಗುವ ಅಪಾಯವಿರುತ್ತದೆ. ಇದೇ ಕಾರಣಕ್ಕೆ ಹುಟ್ಟಿದ ತಕ್ಷಣ ಪ್ರತಿಯೊಂದು ನವಜಾತಶಿಶುವಿಗೂ ವಿಟಮಿನ್–ಕೆಯನ್ನು ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ.

ನಾವು ತೀವ್ರ ರೀತಿಯ ಸೋಂಕಿಗೆ ತುತ್ತಾದಾಗ ನಮಗೆ ಪ್ರತಿಜೀವಕಗಳನ್ನು (Antibiotics) ತೆಗೆದುಕೊಳ್ಳಬೇಕಾದ ಅಗತ್ಯ ಬರುತ್ತದೆ. ಈ ಪ್ರತಿಜೀವಕಗಳು ನಮ್ಮ ದೇಹದೊಳಗೆ ಸೋಂಕನ್ನು ಉಂಟುಮಾಡಿದ ಸೂಕ್ಷ್ಮಜೀವಿಯನ್ನು ನಾಶಪಡಿಸುವ ಜೊತೆಗೆ, ನಮ್ಮ ಕರುಳಿನಲ್ಲಿರುವ, ನಮಗೆ ಅಗತ್ಯವಾಗಿ ಬೇಕಾಗಿರುವ ಇತರ ಸೂಕ್ಷ್ಮಾಣುಜೀವಿಗಳನ್ನೂ ನಾಶಪಡಿಸುತ್ತವೆ. ಹೀಗೆ ನಾಶವಾದ ಒಳ್ಳೆಯ ಸೂಕ್ಷ್ಮಾಣುಜೀವಿಗಳು ಮತ್ತೆ ಸರಿಯಾದ ಪ್ರಮಾಣದಲ್ಲಿ ತುಂಬಿಕೊಳ್ಳಲು ಸಮಯ ಹಿಡಿಯುತ್ತದೆ. ಪ್ರತಿಜೀವಕಗಳನ್ನು ತೆಗದು ಕೊಳ್ಳುವ ಸಮಯದಲ್ಲಿ ನಮ್ಮಲ್ಲಿ ನಿತ್ರಾಣ ಮತ್ತು ನಿರುತ್ಸಾಹಗಳು ಕಂಡುಬರುತ್ತದೆಯಲ್ಲವೆ? ಕರುಳಿನಲ್ಲಿ ವಿವಿಧ ಪದಾರ್ಥಗಳನ್ನು ಉತ್ಪಾದಿಸುವ ಮೂಲಕ ನಮಗೆ ಚೈತನ್ಯವನ್ನು ನೀಡುವ ಸೂಕ್ಷ್ಮಾಣುಜೀವಿಗಳು ಪ್ರತಿಜೀವಕಗಳಿಂದ ಈಗ ನಾಶವಾಗಿರುವುದೇ ಈ ಲಕ್ಷಣಗಳಿಗೆ ಕಾರಣ. ನಾವು ಪ್ರತಿಜೀವಿಕಗಳನ್ನು ತೆಗೆದುಕೊಂಡಿರುವ ಸಮಯದಲ್ಲಿ ಮೊಸರನ್ನವನ್ನೂ ತರಕಾರಿಗಳನ್ನೂ ಹೆಚ್ಚು ಸೇವಿಸುವುದು ಒಳ್ಳೆಯದು.

ನಾವು ಹೆಚ್ಚು ಹಸಿರು ತರಕಾರಿಗಳನ್ನು ಮತ್ತು ಹಣ್ಣು–ಹಂಪಲುಗಳನ್ನು ಬಳಸುವುದು ನಮ್ಮ ಕರುಳಿನ ಸೂಕ್ಷ್ಮಾಣುಜೀವಿಗಳ ಆರೋಗ್ಯಕ್ಕೆ ಒಳ್ಳೆಯದು. ಹುಳಿ ಬರಿಸಿದ ಆಹಾರಗಳಾದ ಮೊಸರನ್ನ, ಇಡ್ಲಿ ಮುಂತಾದ ಆಹಾರಗಳು ನಿಮ್ಮ ಕರುಳಿನೊಳಗೆ ಆರೋಗ್ಯವಂತ ಸೂಕ್ಷ್ಮಾಣುಜೀವಿಗಳು ತುಂಬಿಕೊಳ್ಳುವಂತೆ ಮಾಡುತ್ತವೆ. ನಮ್ಮಲ್ಲಿ ಪಾರಂಪರಿಕವಾಗಿ ತಯಾರಿಸಿದ ಉಪ್ಪಿನಕಾಯಿ ಕೂಡ ಕರುಳಿನ ಆರೋಗ್ಯಕ್ಕೆ ಅತ್ಯುತ್ತಮವಾದ ಆಹಾರವಾಗಿದೆ. ಶರಾಬು ಮತ್ತು ಸಕ್ಕರೆಯ ಪದಾರ್ಥಗಳು ನಿಮ್ಮ ಕರುಳಿನ ಅರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ನಿಮ್ಮ ಕರುಳಿನೊಳಗೆ ಸಕ್ಕರೆಯ ಅಂಶಕ್ಕಾಗಿ ಸದಾ ಕಾಯುವ ಸೂಕ್ಷ್ಮಾಣುಜೀವಿಗಳು ತುಂಬಿಕೊಳ್ಳುವಂತೆ ಮಾಡುವುದರಿಂದ ಅವು ಬೊಜ್ಜು ಮುಂತಾದ ಆರೋಗ್ಯದ ಸಮಸ್ಯೆಗಳನ್ನು ತರಬಹುದು. ಮಾಂಸಾಹಾರಿಗಳ ಮತ್ತು ಸಸ್ಯಾಹಾರಿಗಳ ಕರುಳಿನಲ್ಲಿ ಇರುವ ಸೂಕ್ಷ್ಮಾಣುಜೀವಿಗಳು ವಿಭಿನ್ನವಾಗಿರುವುದರಿಂದ ಸಸ್ಯಾಹಾರವು ಕರುಳಿನ ಅರೋಗ್ಯಕ್ಕೆ ಉತ್ತಮವೆಂಬ ಅಭಿಪ್ರಾಯವು ವಿಜ್ಞಾನಿಗಳಲ್ಲಿ ಇದೆ.

ನಮ್ಮ ಆರೋಗ್ಯದ ಗುಟ್ಟು ನಮ್ಮ ಆಹಾರದಲ್ಲಿದೆ ಎಂದು ನಾವುಗಳು ಇಲ್ಲಿಯ ತನಕ ನಂಬಿದ್ದೆವು. ಈಗ ಬಹುಶಃ ನಮ್ಮ ಆರೋಗ್ಯದ ನಿಜವಾದ ಗುಟ್ಟು ನಾವು ನಮ್ಮ ಕರುಳಿನೊಳಗೆ ಜೀವಿಸುವ ಸೂಕ್ಷ್ಮಾಣುಜೀವಿಗಳಿಗೆ ನಾವು ಕೊಡುವ ಆಹಾರದಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಕರುಳು ನಮ್ಮ ಮಿದುಳಿನ ಜೊತೆಗೆ ಮಾತನಾಡುತ್ತದೆ; ಮತ್ತು ಮಿದುಳು ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ಕರುಳು ತನ್ನ ಪ್ರಭಾವವನ್ನೂ ಬೀರುತ್ತದೆ. ನಮ್ಮ ಮನಃಸ್ಥಿತಿ, ಹಸಿವು, ನಿದ್ದೆ ಮತ್ತು ಜ್ಞಾಪಕಶಕ್ತಿಯನ್ನು ಉತ್ತಮವಾಗಿಡುವಲ್ಲಿ ಮಿದುಳಿನ ಜೊತೆಗೆ ಕೆಲಸ ಮಾಡುವ ನಮ್ಮ ಕರುಳಿನ ಸೂಕ್ಷ್ಮಾಣುಜೀವಿಗಳ ಅರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುವುದು ಅತ್ಯಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.