ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಮಾಲಿನ್ಯದಿಂದ ಸೊಳ್ಳೆಗಳು ಕಚ್ಚುವ ಅವಧಿ ವಿಸ್ತರಣೆ: ಅಧ್ಯಯನ

Last Updated 11 ಏಪ್ರಿಲ್ 2023, 15:56 IST
ಅಕ್ಷರ ಗಾತ್ರ

ನವದೆಹಲಿ: ನಗರ ಪ್ರದೇಶಗಳಲ್ಲಿ ಕಂಡುಬರುವ ‘ಬೆಳಕಿನ ಮಾಲಿನ್ಯ’ಕ್ಕೂ, ಸೊಳ್ಳೆಗಳು ಮನುಷ್ಯ ಮತ್ತು ಪ್ರಾಣಿಗಳಿಗೆ ಕಚ್ಚುವ ಅವಧಿ ವಿಸ್ತರಣೆಯಾಗುವುದಕ್ಕೂ ಸಂಬಂಧ ಇರುವುದು ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಈ ಕುರಿತು ಅಮೆರಿಕದ ಓಹಿಯೊ ಸ್ಟೇಟ್‌ ವಿಶ್ವವಿದ್ಯಾಲಯ ಸಂಶೋಧಕರು ಅಧ್ಯಯನ ನಡೆಸಿದ್ದು, ‘ಇನ್‌ಸೆಕ್ಟ್ಸ್’ ಎಂಬ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ನಗರಗಳಲ್ಲಿ ರಾತ್ರಿ ವೇಳೆಯೂ ವಿದ್ಯುತ್‌ದೀಪಗಳು ಬೆಳಗುತ್ತವೆ. ಚಳಿಗಾಲ ಆರಂಭಗೊಂಡ ನಂತರ ಪರಿಸರದಲ್ಲಿ ಆಗುವ ಬದಲಾವಣೆಗಳ ಮೇಲೆ ಈ ಕೃತಕ ಬೆಳಕು ಪರಿಣಾಮ ಬೀರುತ್ತದೆ.

ಇನ್ನೊಂದೆಡೆ, ಈ ಕೃತಕ ಬೆಳಕು ಚಳಿಗಾಲದ ವೇಳೆ ಸೊಳ್ಳೆಗಳು ವಿಕಾಸ ಹೊಂದುವ ಪ್ರಕ್ರಿಯೆ ಕುಂಠಿತಗೊಳ್ಳುವಂತೆ ಮಾಡುತ್ತದೆ. ಸೊಳ್ಳೆಗಳ ವಿಕಾಸ ಕುಂಠಿತಗೊಂಡಿದೆ ಎಂದರೆ, ಅವುಗಳು ಕಚ್ಚುವ ಅವಧಿಯೂ ವಿಸ್ತರಣೆಗೊಂಡಿದೆ ಎಂದರ್ಥ. ಈ ಕಾರಣಗಳಿಂದಾಗಿ, ಸೊಳ್ಳೆಗಳು ಮನುಷ್ಯರು ಹಾಗೂ ಪ್ರಾಣಿಗಳಿಗೆ ಹೆಚ್ಚು ಕಾಲದವರೆಗೆ ಕಚ್ಚುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಸೊಳ್ಳೆಗಳು ಕಚ್ಚುವುದನ್ನು ಮುಂದುವರಿಸಿವೆ ಎಂದರೆ, ಅವುಗಳು ‘ವೆಸ್ಟ್‌ ನೈಲ್’ ಎಂಬ ವೈರಸ್‌ ಸೋಂಕಿಗೆ ಒಳಗಾಗಿವೆ ಎಂಬುದನ್ನೂ ತೋರಿಸುತ್ತದೆ. ಈ ಸೋಂಕಿತ ಸೊಳ್ಳೆಗಳು ಜನರಿಗೆ ಕಚ್ಚುವ ಅಪಾಯವೂ ಹೆಚ್ಚು ಎಂದು ಅಧ್ಯಯನ ತಂಡದಲ್ಲಿದ್ದ ಸಂಶೋಧಕ ಮೇಗನ್ ಮೆವುಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT