ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ಆ ಮೂರು ದಿನಗಳು

Last Updated 14 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಋತುಸ್ರಾವ ಎಂದು ಕರೆಯಲಾಗುವ ಈ ಮೂರು ದಿನಗಳು ಹೆಣ್ಣಿನ ಮಹತ್ವದ ದೈಹಿಕ ಸಹಜ ಪ್ರಕ್ರಿಯೆಯ ಅಂಶ. ಹೆರಿಗೆಯ ಸಮಸ್ಯೆ 10 ತಿಂಗಳು ಮಾತ್ರ; ಆದರೆ ಈ ಸಮಸ್ಯೆ ಪ್ರಾರಂಭಗೊಂಡ ಮೊದಲ ದಿನದಿಂದ ಮೆನೋಪಾಸ್ ಹಂತದವರೆಗೆ ಹೆಣ್ಣಿನೊಂದಿಗೆ ಮುಂದುವರೆಯುತ್ತದೆ. ಒಬ್ಬ ಹೆಣ್ಣಿನ ಬಲ ಹಾಗೂ ದೌರ್ಬಲ್ಯಗಳೆರಡೂ ಈ ಮೂರು ದಿನಗಳು ಮಾತ್ರ.

ಋತುಸ್ರಾವಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿಲ್ಲದ ಮಹಿಳೆಯರು ಇರಲು ಸಾಧ್ಯವೇ ಇಲ್ಲ. ಒಬ್ಬೊಬ್ಬ ಹೆಣ್ಣಿನ ದೇಹಸ್ಥಿತಿ, ಜೀವನವಿಧಾನ, ಸೇವಿಸುವ ಆಹಾರ ಹಾಗೂ ಇದಕ್ಕೆ ತಕ್ಕಂತೆ ಸಮಸ್ಯೆಗಳು ಬದಲಾಗಿರುತ್ತವೆಯಷ್ಟೆ.

ಋತುಚಕ್ರದ ತೊಂದರೆಗೆ ಕಾರಣಗಳು
* ದೈಹಿಕ ಸಮಸ್ಯೆ
* ಅತಿಯಾದ ಮಾನಸಿಕ ಒತ್ತಡಗಳು
* ಅತಿಯಾದ ಕೋಪ
* ಮಾನಸಿಕ ಅಸ್ಥಿರತೆ
* ದೇಹಕ್ಕೆ ವ್ಯಾಯಾಮ ಇಲ್ಲದಿರುವುದು
* ಸಮಯಕ್ಕೆ ಸರಿಯಾಗಿ ನಿದ್ರಿಸದಿರುವುದು
* ಜಂಕ್ ಫುಡ್‌, ಬೇಕರಿಯ ಪದಾರ್ಥ, ಕರಿದ ಪದಾರ್ಥ, ಉಪ್ಪು–ಖಾರ, ಮಸಾಲ ಪದಾರ್ಥಗಳ ಹೆಚ್ಚು ಸೇವನೆ
* ಅತಿಯಾದ ಮೊಬೈಲ್ ಬಳಕೆ
* ಬಿಗಿಯಾದ ಉಡುಪುಗಳನ್ನು ಧರಿಸುವುದು
* ಗರ್ಭನಿರೋಧಕ ಮಾತ್ರೆಗಳ ಸೇವನೆ
* ಥೈರಾಯಿಡ್, ಪಿಟ್ಯುಟರಿ ಗ್ರಂಥಿಗಳ ತೊಂದರೆ
* ತಡವಾಗಿ ಮದುವೆ ಆಗುವುದು

ಋತುಚಕ್ರದ ತೊಂದರೆಯಿಂದ ಏನೆಲ್ಲ ಸಮಸ್ಯೆಗಳು ಆಗಬಹುದು
*
ಬಂಜೆತನ
* ದೇಹದ ತೂಕ ಹೆಚ್ಚಾಗುವುದು/ ಕಡಿಮೆಯಾಗುವುದು
*ವಿಶೇಷವಾಗಿ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ
* ಖಿನ್ನತೆ, ಮನೋರೋಗಕ್ಕೆ ತುತ್ತಾಗಬಹುದು
* ಮೊಡವೆಗಳು
* ಕೂದಲು ಉದುರುವುದು
* ಮುಖದ ಮೇಲೆ ಶರೀರದ ಮೇಲೆ ಅಧಿಕವಾಗಿ ಕೂದಲು ಕಾಣಿಸಿಕೊಳ್ಳುವುದು

ಪರಿಹಾರಗಳು
ಯೋಗಚಿಕಿತ್ಸೆ:
ಬದ್ಧಕೋನಾಸನ, ಮಂಡೂಕಾಸನ, ಉಪವಿಷ್ಠಕೋನಾಸನ,
ಪ್ರಾಣಾಯಾಮ: ನಾಭಿಚಕ್ರ ಪ್ರಾಣಾಯಾಮ, ಶವಾಸನದಲ್ಲಿ ಅನುಲೋಮ–ವಿಲೋಮ ಪ್ರಾಣಾಯಾಮ
ಪ್ರಕೃತಿ ಚಿಕಿತ್ಸೆ: ಕಟಿಸ್ನಾನ, ಹೊಟ್ಟೆಯ ಮೇಲೆ ಮಡ್ ಪ್ಯಾಕ್

ಆಹಾರಕ್ರಮಗಳು
*
ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು; ಅಂದರೆ ಬೆಳಗ್ಗೆ 9 ಗಂಟೆಯ ಒಳಗೆ ತಿಂಡಿ, ಮಧ್ಯಾಹ್ನ 2ರ ಒಳಗೆ ಊಟ, ರಾತ್ರಿ 7 ಗಂಟೆಯ ಒಳಗೆ ಊಟ; ಪ್ರತಿ ಊಟ ತಿಂಡಿಯ ನಂತರ ಕನಿಷ್ಠ 5 ನಿಮಿಷ ವಾಕಿಂಗ್ ಮಾಡಬೇಕು.
* ಹಸಿತರಕಾರಿ, ಸೊಪ್ಪು, ಮೊಳಕೆಕಾಳುಗಳನ್ನು ಹೆಚ್ಚಾಗಿ ಉಪಯೋಗಿಸಬೇಕು.
* ಸಿಹಿ, ಜಂಕ್ ಫುಡ್, ಮಸಾಲ ಪದಾರ್ಥಗಳನ್ನು ಹೆಚ್ಚು ಸೇವಿಸದಿರುವುದು.
*ಗೋಧಿ, ಮೆಕ್ಕೆಜೋಳ, ನವಣೆ, ರಾಗಿ, ನಾರುಯುಕ್ತ ಆಹಾರವನ್ನು ಸೇವಿಸುವುದು.
*ಕುರುಕಲು ತಿಂಡಿಗಳಿಂದ ದೂರವಿರಬೇಕು.
*ಮಾನಸಿಕ ಒತ್ತಡಗಳಿಂದ ದೂರ ಇರಬೇಕು.
* ಬಿಗಿ ಉಡುಪುಗಳಿಗೆ ಬದಲಾಗಿ ಸರಿ ಅಳತೆಯ ಬಟ್ಟೆಗಳನ್ನು ಧರಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT