`ಗಂಡನ ಹೆಸರೇನಮ್ಮಾ' ಎಂದೆ ಎದುರುಗಡೆ ಕುಳಿತವಳಿಗೆ.
`ನನ್ನ ಗಂಡಂದಾ?' ಎಂದಳು. `ಇಲ್ಲಾ, ಪಕ್ಕದ ಮನೆಯವರ ಹೆಸರನ್ನಾ ಕೇಳ್ತೀವಿ ನಾವು' ಎಂದು ಕೇಳಬೇಕು ಎನಿಸಿತು.

ಇವೆಲ್ಲ ವೈದ್ಯರು ಮತ್ತು ರೋಗಿಗಳ ನಡುವೆ ಸಾಮಾನ್ಯವಾಗಿ ನಡೆಯುವಂತಹ ಮಾತುಕತೆ. ಆದರೆ ನಮ್ಮಲ್ಲಿ ಹಾಸ್ಯಪ್ರಜ್ಞೆ ಇದ್ದರೆ ಸಾಕು ಎಲ್ಲದರಲ್ಲೂ ಹಾಸ್ಯ ಕಾಣಿಸುತ್ತದೆ.

ಕ್ಲಿನಿಕ್ಗೆ ಬರುವ ಕೆಲವರು ಹೇಳುತ್ತಾರೆ, `ಡಾಕ್ಟ್ರೆ ನೀವು ಹೋದ ವರ್ಷ ಜ್ವರಕ್ಕೆ ಒಂದು ಇಂಜೆಕ್ಷನ್ ಹಾಕಿದ್ರಿ ನೋಡಿ, ಈವರೆಗೂ ತಿರುಗಾ ಜ್ವರ ಬಂದಿಲ್ಲ' ಎನ್ನುತ್ತಾರೆ. ಆ ಬಗೆಯ ಇಂಜೆಕ್ಷನ್ ಇರಲು ಸಾಧ್ಯವಾ... ನೀವೇ ಹೇಳಿ.

ಒಂದು ದಿನ ಗಂಡ ಹೆಂಡತಿ ಬಂದಿದ್ರು. ಗಂಡನಿಗೆ ತುಂಬಾ ಗೊರಕೆಯ ತೊಂದರೆ. ಸಾರಿ... ವಿಷಯ ಅದಲ್ಲ. ಗಂಡ ಹಾಗೆ ಗೊರಕೆ ಹೊಡೆಯುವುದರಿಂದ ಹೆಂಡತಿಗೆ ನಿದ್ರೆ ಮಾಡುವುದಕ್ಕೆ ತೊಂದರೆ. ಮಾತಿನ ಮಧ್ಯದಲ್ಲಿ, ಆತನಿಗೆ 25 ವರ್ಷ ಇರುವಾಗಿನಿಂದಲೇ ಸಕ್ಕರೆ ಕಾಯಿಲೆ ಇರುವುದು ತಿಳಿದುಬಂತು.

`ಪಾಪ, ಅಷ್ಟು ಚಿಕ್ಕ ವಯಸ್ಸಿಗೇ ಡಯಾಬಿಟೀಸ್ ಬಂತಾ' ಎಂದೆ. ಅದಕ್ಕೆ ಅವನ ಹೆಂಡತಿ, `ಓ ಬಿಡಿ ಡಾಕ್ಟ್ರೆ ಮದುವೆ ಆಗೋಕೆ ದೊಡ್ಡ ವಯಸ್ಸು, ಕಾಯಿಲೆ ಬರಕ್ಕೆ ಮಾತ್ರ ಚಿಕ್ಕ ವಯಸ್ಸಾ' ಎನ್ನೋದೇ!

ಆಕೆಯ ಹೆಸರು ಸುನಂದ. ಮದುವೆಯಾಗಿ ಮೂರು ವರ್ಷ ಆಗಿದೆ, ಮಗುವಿಲ್ಲ ಎಂದು ಕ್ಲಿನಿಕ್ಗೆ ಬಂದಳು. ಮುಟ್ಟಾದ ಎರಡನೇ ದಿನದಿಂದ ಮಾತ್ರೆಯನ್ನು 5 ದಿನ ತೆಗೆದುಕೊಳ್ಳಬೇಕು, ಆಮೇಲೆ 11ನೇ ದಿನದಿಂದ ಸ್ಕ್ಯಾನ್ ಮಾಡಿಸುತ್ತೇವೆ. ಅದಕ್ಕೆ ಫಾಲಿಕ್ಯುಲಾರ್ ಸ್ಟಡಿ ಎನ್ನಲಾಗುತ್ತದೆ. ಗಂಡ-ಹೆಂಡತಿ ಯಾವಾಗ ಜೊತೆಯಲ್ಲಿರಬೇಕು ಎಂದು ನಿಖರವಾಗಿ ಹೇಳುತ್ತೇವೆ. ಹಾಗೆಯೇ ಸುನಂದಾಳಿಗೂ ಸ್ಕ್ಯಾನ್ ಮಾಡಿಸಿ, ಇಂಜೆಕ್ಷನ್ನೂ ಕೊಟ್ಟಾಯಿತು.

`ನೋಡಮ್ಮಾ ಇವತ್ತಿಂದ ಎರಡು ದಿನ ಗಂಡ ಹೆಂಡತಿ ಜೊತೆಯಲ್ಲಿರಬೇಕು' ಎಂದೆ.
`ಏ... ಅದೆಲ್ಲ ಆಗಲ್ಲ ಡಾಕ್ಟ್ರೆ' ಎಂದಳು. ಆಶ್ಚರ್ಯದಿಂದ `ಯಾಕೆ ಏನಾಯ್ತು?' ಎಂದೆ,
`ನಮ್ಮ ಯಜಮಾನ್ರು ಊರಲ್ಲಿಲ್ಲ. ಬಿಸಿನೆಸ್ ಟ್ರಿಪ್ ಹೋಗಿ 15 ದಿನ ಆಯ್ತು. ಬರೋಕ್ಕೆ ಇನ್ನೂ ಒಂದು ತಿಂಗಳು ಆಗಬಹುದು' ಎಂದಳು.

`ಅಲ್ಲಮ್ಮಾ ಈ ಟೈಂನಲ್ಲಿ ಅವರ್ಯಾಕೆ ಊರಿಗೆ ಹೋದ್ರು, ಮತ್ತೆ ನೀನ್ಯಾಕೆ ಟ್ರೀಟ್ಮೆಂಟ್ ಮಾಡಿಸಿಕೊಂಡೆ' ಎಂದೆ ಸಿಟ್ಟಿನಿಂದ.

`ಟ್ರೀಟ್ಮೆಂಟ್ಗೂ ನನ್ನ ಗಂಡಂಗೂ ಏನು ಸಂಬಂಧ? ಮಗು ಆಗಬೇಕಂದ್ರೆ ನನ್ನ ಗಂಡ ಇರಲೇಬೇಕಾ?' ಎಂದು ಇಷ್ಟಗಲ ಬಾಯಿ ಬಿಟ್ಟುಕೊಂಡು ಕೇಳಿದಾಗ ನನಗೆ ತಲೆ ತಿರುಗಿಬಂತು.

ಅವಳಿಗೆ 20-22 ವರ್ಷ ಇರಬಹುದು. ಅವತ್ತು ಕ್ಲಿನಿಕ್ನಲ್ಲಿ ತುಂಬಾ ರಷ್ ಇತ್ತು. ಬಂದವಳೇ, `ಡಾಕ್ಟ್ರೆ ಪೀರಿಯಡ್ ಮಿಸ್ ಆಗಿದೆ. ಸ್ವಲ್ಪ ಡೌಟ್ ಇದೆ' ಎಂದಳು. ತುಂಬಾ ಬಿಜಿ ಇದ್ದುದರಿಂದ, ಒಳಗೆ ಹೋಗಿ ಮೂತ್ರ ಪರೀಕ್ಷೆ ಮಾಡಿಸುವಂತೆ ಹೇಳಿ, ಬೇರೆ ರೋಗಿಗಳನ್ನು ನೋಡುತ್ತಿದ್ದೆ. ನಮ್ಮ ಕ್ಲಿನಿಕ್ನ ಹುಡುಗಿ ಬಂದು, `ಮೇಡಂ ಪಾಸಿಟಿವ್ ಇದೆ' ಎಂದಳು.

ನಾನು ಖುಷಿಯಿಂದ, `ಓ ಗುಡ್ನ್ಯೂಸ್' ಎಂದೆ. ಪೇಷೆಂಟ್ ನಗಲಿಲ್ಲ. `ಡಾಕ್ಟ್ರೆ, ನನಗಿನ್ನೂ ಮದುವೆ ಆಗಿಲ್ಲ' ಎಂದಳು. ಓ ಹೌದಾ... ಓಕೆ, ನಿನಗೊಂದು ಬ್ಯಾಡ್ನ್ಯೂಸ್, ನೀನೀಗ ಬಸುರಿ' ಎಂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.