ದರಾಶ ತರಬೇತಿ ನಿರ್ಬಂಧಕ್ಕೆ ತಡೆ

7

ದರಾಶ ತರಬೇತಿ ನಿರ್ಬಂಧಕ್ಕೆ ತಡೆ

Published:
Updated:

ಬೆಂಗಳೂರು: ‘ಕುದುರೆ ತರಬೇತುದಾರ ನೀಲ್ ದರಾಶ ಅವರು ರೇಸಿಂಗ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು’ ಎಂದು ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ವಿಧಿಸಿದ್ದ ನಿರ್ಬಂಧಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ನೀಲ್‌ ದರಾಶ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಆಕ್ಷೇಪ ಏನು?: ‘ನಾನೊಬ್ಬ ಅತ್ಯುತ್ತಮ ದರ್ಜೆಯ ವೃತ್ತಿಪರ ಕುದುರೆ ತರಬೇತುದಾರ ಹಾಗೂ ಕ್ರಿಕೆಟಿಗ. 16 ವರ್ಷಗಳಿಂದ ಕುದುರೆಗೆ ತರಬೇತಿ ನೀಡುತ್ತಿದ್ದೇನೆ. ನಾನು ತರಬೇತಿ ನೀಡಿದ ಕುದುರೆಗಳು 400ಕ್ಕೂ ಹೆಚ್ಚು ರೇಸ್‌ಗಳಲ್ಲಿ ಜಯಗಳಿಸಿವೆ. ನನ್ನ ವಿರುದ್ಧ ಯಾರೋ ಕೆಲವರು ಆಗದವರು ಮಾಡಿದ ಆರೋಪವನ್ನು ಪರಿಗಣಿಸಿ ಬಿಟಿಸಿ ತರಬೇತಿ ನೀಡುವುದಕ್ಕೆ ನಿರ್ಬಂಧ ವಿಧಿಸಿದೆ. ಇದು ಸರಿಯಲ್ಲ. ಆದ್ದರಿಂದ ನನ್ನ ಕುದುರೆ ತರಬೇತಿ ವಿಷಯದಲ್ಲಿ ಬಿಟಿಸಿ ಮಧ್ಯಪ್ರವೇಶಿಸದಂತೆ ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !