ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ
Published 30 ಡಿಸೆಂಬರ್ 2025, 12:35 IST
ಎಲ್.ವಿವೇಕಾನಂದ ಆಚಾರ್ಯ
ಜ್ಯೋತಿಷ್ಯ ಮನೆತನದ ಇವರು ಐದು ದಶಕಗಳಿಂದ ಜ್ಯೋತಿಷ್ಯ ಶಾಸ್ತ್ರ ಅಧ್ಯಯನದಲ್ಲಿ ತೊಡಗಿದ್ದು, 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಆ ಬಳಿಕ ಐಡಲ್‌ಬರ್ಗ್ ಸಿಮೆಂಟ್ ಕಂಪನಿಯಲ್ಲಿ ಸುಮಾರು 24 ವರ್ಷಗಳ ಕಾಲ ಮಾರಾಟ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಸದ್ಯ ಪೂರ್ಣ ಪ್ರಮಾಣದಲ್ಲಿ ಜ್ಯೋತಿಷ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಪರ್ಕ ಸಂಖ್ಯೆ: 9480916387
ಮೇಷ
ಮೇಷ ರಾಶಿಯವರಿಗೆ 2026ರಲ್ಲಿ ಮಿಶ್ರ ಫಲಿತಾಂಶಗಳು ದೊರೆಯಲಿದೆ. ಅಡೆತಡೆ ಮತ್ತು ಸ್ಪರ್ಧೆಯ ಹೊರತಾಗಿಯೂ ನೀವು ತಾಳ್ಮೆಯಿಂದ ಮುನ್ನೆಡೆದರೆ, ವರ್ಷದ ಕೊನೆಯಲ್ಲಿ ಸ್ಥಿರತೆ ಸಾಧ್ಯವಾಗುತ್ತದೆ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು. ಆರೋಗ್ಯ ಹಾಗೂ ರಕ್ತದೊತ್ತಡ ಸಮಸ್ಯೆಗಳ ಬಗ್ಗೆ ಗಮನವಿರಲಿ. ಈ ವರ್ಷ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸರಾಸರಿ ಫಲಿತಾಂಶಗಳನ್ನು ಪಡೆಯಲಿದ್ದಾರೆ. ವ್ಯಾಪಾರ, ವ್ಯವಹಾರದಲ್ಲಿ ಸ್ಪರ್ಧೆ ಇರಲಿದೆ. ಪ್ರಯತ್ನಗಳು ಕ್ರಮೇಣ ಫಲ ನೀಡುತ್ತವೆ.
ವೃಷಭ
ಈ ವರ್ಷದ ಆರಂಭದಲ್ಲಿ ಕೆಲಸಗಳು ಸ್ವಲ್ಪ ನಿಧಾನವಾಗಿದ್ದರೂ, ಮಧ್ಯಮ ಅವಧಿಯಲ್ಲಿ ಅನುಕೂಲಕರ ಪರಿಸ್ಥಿತಿಗಳು ಒದಗಿ ಬರಲಿದೆ. ಉದ್ಯೋಗದಲ್ಲಿ ಸ್ಥಿರತೆ ಹೆಚ್ಚಾಗುತ್ತದೆ ಮತ್ತು ಹೊಸ ಅವಕಾಶಗಳ ಜೊತೆಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸ್ಪರ್ಧೆಯ ಹೊರತಾಗಿಯೂ ವ್ಯಾಪಾರ ಮಾಡುವವರು ಲಾಭ ಗಳಿಸುವ ಸೂಚನೆಗಳಿವೆ. ಆರ್ಥಿಕ ಪರಿಸ್ಥಿತಿ ನಿರೀಕ್ಷೆಯಂತೆ ಇರುತ್ತದೆ. ಅನಗತ್ಯ ವೆಚ್ಚಗಳು ಕಡಿಮೆ ಮಾಡಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಸಮಸ್ಯೆಗಳಿರುವುದಿಲ್ಲ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹೆಚ್ಚಿನ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ವರ್ಷದ ಅಂತ್ಯದಲ್ಲಿ ನಿಮ್ಮ ಹೆಸರು, ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುತ್ತದೆ. ಗ್ರಹಬಲದ ಸುಧಾರಣೆಯಿಂದ ಕ್ರಮೇಣ ಸ್ಥಿರತೆ ಮತ್ತು ಸಂಪತ್ತು ಲಭಿಸಲಿದೆ.
ಮಿಥುನ
ಈ ವರ್ಷ ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ಫಲಿತಾಂಶ ದೊರೆಯುತ್ತವೆ. ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆ ಇರುತ್ತದೆ. ಕೆಲಸದಲ್ಲಿ ಸ್ವಲ್ಪ ಒತ್ತಡವಿರಬಹುದು, ಅದನ್ನು ತಾಳ್ಮೆಯಿಂದ ಎದುರಿಸಿ ಮುಂದುವರೆಯುವುದು ಉತ್ತಮ. ಕುಟುಂಬ ಸದಸ್ಯರಿಂದ ಯಾವಾಗಲೂ ಬೆಂಬಲ ಇರುತ್ತದೆ. ಆತ್ಮೀಯರೊಂದಿಗಿನ ಸಂಬಂಧ ಸುಧಾರಣೆಯಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸಲಿದ್ದಾರೆ. ಖರ್ಚಿನ ನಿಯಂತ್ರ ಒಳ್ಳೆಯದು. ಆರೋಗ್ಯ ವಿಷಯಗಳಲ್ಲಿ ಸ್ವಲ್ಪ ಕಾಳಜಿ ಅಗತ್ಯ.
ಕರ್ಕಾಟಕ
ವರ್ಷದ ಆರಂಭದಲ್ಲಿ ಕೆಲಸ ಕಾರ್ಯಗಳಲ್ಲಿ ವಿಳಂಬ ಮತ್ತು ಆರ್ಥಿಕ ಒತ್ತಡ ಬರುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹಳೆಯ ಸಾಲಗಳು ಒತ್ತಡ ತರಬಹುದು. ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ಆಲೋಚನೆ ಮುಖ್ಯ. ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ಅಗತ್ಯ. ಆತುರದ ಮಾತುಗಳು ಸಮಸ್ಯೆಗಳಿಗೆ ಕಾರಣವಾಗಬಹುದು. ವರ್ಷದ ಮಧ್ಯದಿಂದ ಪರಿಸ್ಥಿತಿಯಲ್ಲಿ ಕ್ರಮೇಣ ಬದಲಾವಣೆ ಕಂಡು ಬರುತ್ತದೆ. ಆದಾಯದಲ್ಲಿ ನಿಧಾನ ಗತಿಯ ಹೆಚ್ಚಳದ ಸೂಚನೆಗಳಿವೆ. ಸ್ಥಗಿತಗೊಂಡ ಕೆಲಸ ಆರಂಭವಾಗಲಿವೆ.
ಸಿಂಹ
ಸಿಂಹ ರಾಶಿಯವರಿಗೆ ಈ ವರ್ಷ ಮಿಶ್ರ ಫಲಿತಾಂಶ ನೀಡಲಿದೆ. ವರ್ಷದ ಆರಂಭದಲ್ಲಿ ಕೆಲಸಗಳು ವಿಳಂಬವಾಗಲಿವೆ. ಆತ್ಮವಿಶ್ವಾಸ ಅಗತ್ಯ. ಉದ್ಯೋಗದಲ್ಲಿ ವೃತ್ತಿಪರ ಜವಾಬ್ದಾರಿಗಳು ಹೆಚ್ಚಾಗಲಿವೆ. ಹೊಸ ಜವಾಬ್ದಾರಿ ಅಥವಾ ಸ್ಥಾನ ಬದಲಾವಣೆಯ ಸೂಚನೆಗಳಿವೆ. ಉದ್ಯಮಿಗಳು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವರ್ಷದ ದ್ವಿತೀಯಾರ್ದದಲ್ಲಿ ಲಾಭವಾಗಲಿದೆ. ಆರ್ಥಿಕವಾಗಿ ಆದಾಯ ಮತ್ತು ಖರ್ಚು ಸಮಾನವಾಗಿರುತ್ತದೆ. ಅನಗತ್ಯ ಕರ್ಚುಗಳನ್ನು ನಿಯಂತ್ರಿಸಿದರೆ ಆದಾಯ ಹೆಚ್ಚಾಗುತ್ತದೆ.
ಕನ್ಯಾ
ಈ ವರ್ಷ ಉದ್ಯೋಗದಲ್ಲಿರುವವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ. ಹೆಚ್ಚಿನ ಪರಿಶ್ರಮ ಹೆಚ್ಚಿನ ಅವಕಾಶಗಳನ್ನು ಸಿಗಲಿವೆ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಕಲಹ ಸಾಧ್ಯತೆ ಇದ್ದರೂ, ತಾಳ್ಮೆ ಅಗತ್ಯ. ಆಯಾಸ ಮತ್ತು ನಿದ್ರಾಹೀನತೆ ಹಾಗೂ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ. ವರ್ಷದ ಅಂತ್ಯದ ವೇಳೆಗೆ ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ದೊರೆಯುತ್ತದೆ.
ತುಲಾ
ಈ ವರ್ಷ ಶತ್ರುಗಳ ಕಾಟ, ಸಾಲಬಾಧೆ ಮತ್ತು ಆರೋಗ್ಯದ ಸಮಸ್ಯೆ ಕಾಡಲಿದೆ. ಕೆಲಸಗಳು ವಿಳಂಬವಾದರೂ ಅಡೆತಡೆಗಳು ಕ್ರಮೇಣ ದೂರವಾಗುತ್ತವೆ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗುತ್ತವೆ. ಹೂಡಿಕೆಗಳಲ್ಲಿ ಎಚ್ಚರಿಕೆ ಅಗತ್ಯ. ಖರ್ಚು, ವೆಚ್ಚ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರಗಳು ದೊರಕಲಿದೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅನುಕೂಲವಾಗಲಿದೆ.
ವೃಶ್ಚಿಕ
ಗೃಹ ವ್ಯವಹಾರ ನಿಧಾನಗತಿಯಿಂದ ಕೂಡಿರುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು. ಉದ್ಯೋಗ ಕ್ಷೇತ್ರಗಳಲ್ಲಿ ಬಡ್ತಿ ದೊರೆಯಲಿದೆ. ಹೊಸ ಹೂಡಿಕೆಗಳ ಮೇಲೆ ಗಮನ ಅಗತ್ಯ. ಕುಟುಂಬದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಸಹ ಅವು ವರ್ಷದ ಅಂತ್ಯದ ವೇಳೆಗೆ ಬಗೆಹರಿಯುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಧನು
2026ರವರ್ಷ ಈ ರಾಶಿಯವರಿಗೆ ಎಲ್ಲಾ ರೀತಿಯಿಂದಲೂ ಒಳ್ಳೆಯ ಪರಿಣಾಮ ಬೀರಲಿದೆ. ವೃತ್ತಿಪರ ಮತ್ತು ವ್ಯವಹಾರಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ನೋಡಬಹುದು. ಆರ್ಥಿಕವಾಗಿ ಉತ್ತಮ ವರ್ಷವಾಗಿರುತ್ತದೆ. ಹೊಸ ಯೋಜನೆಗಳೊಂದಿಗೆ ಯಶಸ್ಸನ್ನು ಸಾಧಿಸುತ್ತೀರಿ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ನಿರ್ಧಾರಗಳ ಬಗ್ಗೆ ಎಚ್ಚರವಿರಲಿ. ಮಕ್ಕಳು ಪ್ರಗತಿ ಸಾಧಿಸುತ್ತಾರೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಉಂಟಾಗಲಿವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ.
ಮಕರ
ಈ ವರ್ಷ ಹೊಸ ಅವಕಾಶಗಳು ದೊರೆಯುತ್ತವೆ. ಆರ್ಥಿಕ ಸ್ಥಿರತೆ ಕಾಣಲಿದ್ದೀರಿ. ಹೂಡಿಕೆ ಮಾಡುವವರಿಗೆ ವರ್ಷದ ಮಧ್ಯದಲ್ಲಿ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಸಮಸ್ಯೆಗಳು ಕಂಡುಬರುವುದಿಲ್ಲ. ಕುಟುಂಬದಲ್ಲಿ ಶಾಂತಿ ಮತ್ತು ಸಮತೋಲನ ಹೆಚ್ಚಾಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹೊಸದನ್ನು ಮಾಡ ಬಯಸುವವರಿಗೆ ವರ್ಷದ ದ್ವಿತೀಯಾರ್ಧವು ಅನುಕೂಲಕರವಾಗಿರುತ್ತದೆ.
ಕುಂಭ
ಈ ವರ್ಷ ಕುಂಭ ರಾಶಿಗೆ ಮಿಶ್ರ ಫಲಿತಾಂಶಗಳು ಕಂಡು ಬರುತ್ತವೆ. ಆರ್ಥಿಕ ಸ್ಥಿರತೆ ಕಾಣುವ ಸಾಧ್ಯತೆಗಳಿವೆ. ಜೀವನದಲ್ಲಿ ಸ್ಥಿರತೆ ಮತ್ತು ಜವಾಬ್ದಾರಿ ಹೆಚ್ಚಾಗುತ್ತವೆ. ಕಠಿಣ ಪರಿಶ್ರಮ ಹಾಗೂ ಮೇಲಾಧಿಕಾರಿಗಳ ಬೆಂಬಲದೊಂದಿಗೆ ಬಡ್ತಿ ಪಡೆಯುತ್ತೀರಿ. ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಅಥವಾ ಹೊಸ ಜವಾಬ್ದಾರಿ ಪಡೆಯಲು ಸೂಕ್ತ ಸಮಯವಾಗಿದೆ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಲು ತೊಂದರೆಯಾಗಬಹುದು. ದೂರದ ಪ್ರಯಾಣದ ಸಾಧ್ಯತೆ ಇದೆ.
ಮೀನ
ಕಠಿಣ ಪರಿಶ್ರಮ, ತಾಳ್ಮೆ ಮತ್ತು ಆತ್ಮಾವಲೋಕನದ ವರ್ಷವಾಗಿದೆ. ಶನಿಯ ಲಗ್ನದ ಪ್ರಭಾವದಿಂದ ಕೆಲಸದಲ್ಲಿ ವಿಳಂಬ ಮತ್ತು ದೈಹಿಕ ಆಯಾಸ ಉಂಟಾಗಲಿದೆ. ಆದರೆ ಕ್ರಮೇಣ ಸ್ಥಿರತೆ ಕಾಣಲಿದ್ದೀರಿ. ಗುರುವಿನ ಬಲ ಹೆಚ್ಚಾಗುವುದರಿಂದ ಧೈರ್ಯ ಹೆಚ್ಚಾಗುತ್ತದೆ. ಹೊಸ ಆಲೋಚನೆಗಳು ರೂಪಗೊಳ್ಳುತ್ತವೆ. ಶತ್ರುಗಳು ದುರ್ಬಲಗೊಳ್ಳುತ್ತಾರೆ. ವಿವಾದಗಳು ಬಗೆಹರಿಯುತ್ತದೆ. ಸಾಲಗಳಿಂದ ಮುಕ್ತಿ ಪಡೆಯುತ್ತೀರಿ.