ದಿನ ಭವಿಷ್ಯ: ಈ ರಾಶಿಯ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಲಭಿಸಲಿವೆ..
Published 1 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿರಿಯರೊಡನೆ ಮಾಡಿದ ಅನವಶ್ಯಕ ತರ್ಕ, ವಿವಾದಗಳಿಂದ ಅಧಿಕಪ್ರಸಂಗಿ ಎನ್ನುವ ಪಟ್ಟವನ್ನು ಹೊಂದುವಿರಿ. ಬಟ್ಟೆ ವ್ಯಾಪಾರಿಗಳಿಗೆ ಇಂದು ಉತ್ತಮ ಮಾರಾಟ ಹಾಗೂ ಲಾಭವಾಗುವುದು.
01 ಅಕ್ಟೋಬರ್ 2024, 23:30 IST
ವೃಷಭ
ಸಂಸಾರದಲ್ಲಿ ಬದಲಾವಣೆಗಳನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಬರುವುದು. ಅಧಿಕ ರೀತಿಯ ಖರ್ಚು-ವೆಚ್ಚಗಳು ಬಂದರೂ ಉಳಿತಾಯಕ್ಕೆ ಕೊರತೆ ಇಲ್ಲ. ಕ್ರೀಡೆ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚಲಿದೆ.
01 ಅಕ್ಟೋಬರ್ 2024, 23:30 IST
ಮಿಥುನ
ನಿರ್ಲಿಪ್ತತೆಯಿಂದಾಗಿ ಸದ್ಯದ ಸಮಸ್ಯೆಗಳು ಪರಿಹಾರ ಕಾಣಲಿವೆ. ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ಲಭಿಸಲಿವೆ. ಗೆಳೆತನವನ್ನು ಬೆಳೆಸಿಕೊಳ್ಳುವ ನಡವಳಿಕೆ ರೂಢಿಸಿಕೊಳ್ಳಿರಿ.
01 ಅಕ್ಟೋಬರ್ 2024, 23:30 IST
ಕರ್ಕಾಟಕ
ಕಾರ್ಯಕ್ಷೇತ್ರದಲ್ಲಿ ಸ್ವಯಂ ಪರೀಕ್ಷೆಯ ಆರಂಭ. ಹಾಗಾಗಿಯೇ ಎರಡೆರಡು ಬಾರಿ ಪರಿಶೀಲನೆ ಮಾಡುವುದು ಅಗತ್ಯ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು. ಆತ್ಮಾಭಿಮಾನ ವೃದ್ಧಿ.
01 ಅಕ್ಟೋಬರ್ 2024, 23:30 IST
ಸಿಂಹ
ಮಿತ್ರರ ಸಹಕಾರದಿಂದ ಮತ್ತು ಅವರ ಚಾಣಾಕ್ಷತನ, ಮಾತುಗಾರಿಕೆಯನ್ನು ನೋಡಿ ಕಲಿಯುವುದರಿಂದ ವ್ಯಾಪಾರದಲ್ಲಿ ಪ್ರಗತಿ ಇರುವುದು. ಅತಿ ಆಲಸ್ಯತನ ಸರ್ವತೋಮುಖ ಏಳಿಗೆಗೆ ಹಾನಿಯನ್ನು ಉಂಟುಮಾಡಲಿದೆ.
01 ಅಕ್ಟೋಬರ್ 2024, 23:30 IST
ಕನ್ಯಾ
ಹೆಂಡತಿ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯದ ಕಡೆ ನಿಮ್ಮ ಹೆಚ್ಚಿನ ಗಮನವಿರುವುದು. ಹತ್ತಾರು ವಿಷಯದಲ್ಲಿ ಗಮನಹರಿಸುವುದಕ್ಕಿಂತ ನಿರ್ದಿಷ್ಟ ಗುರಿ ತಲುಪವಂಥ ಪ್ರಯತ್ನವನ್ನು ಮಾಡಿ.
01 ಅಕ್ಟೋಬರ್ 2024, 23:30 IST
ತುಲಾ
ನೇರ ನಡೆ-ನುಡಿ ನಿಮ್ಮ ಗೆಳೆತನಕ್ಕೆ ಹುಳಿ ಹಿಂಡಿದಂತಾಗಬಹದು. ತಂದೆ ಹೇಳುವ ವಿಚಾರಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೇ ಅಪಾರ್ಥವಾಗಿ ಅರ್ಥೈಸಿಕೊಳ್ಳುವುದರಿಂದ ಘರ್ಷಣೆಗಳಾಗಬಹುದು.
01 ಅಕ್ಟೋಬರ್ 2024, 23:30 IST
ವೃಶ್ಚಿಕ
ಮಡದಿಯಿಂದ ಬರುವ ಸಲಹೆ ಸೂಚನೆಗಳಿಗೆ ಗಮನ ನೀಡಿ ಸ್ವ ಪ್ರಯತ್ನದಿಂದ ಕೆಲಸದಲ್ಲಿ ಮುನ್ನುಗ್ಗಿ. ಮಹಿಳೆಯರಿಗೆ ಆಫೀಸಿನ ಕೆಲಸದ ಒತ್ತಡದಿಂದಾಗಿ ಮನೆಯ ಮುಖ್ಯ ಕೆಲಸಗಳತ್ತ ಗಮನ ಕಡಿಮೆಯಾಗುವುದು.
01 ಅಕ್ಟೋಬರ್ 2024, 23:30 IST
ಧನು
ಸಂಶೋಧಕರಿಗೆ ದೊಡ್ಡ ಮಟ್ಟದಲ್ಲಿ ವಸ್ತು ನಷ್ಟ ಆಗಬಹುದು ಅಥವಾ ಸಂಶೋಧನೆಯಲ್ಲಿ ಹಿನ್ನಡೆಯಾಗುತ್ತದೆ. ದುಃಖವು ಎಲ್ಲರ ಜೀವನದಲ್ಲೂ ಇರುವುದು, ಅದಕ್ಕಾಗಿ ಹೆದರುವ ಅವಶ್ಯಕತೆ ಇಲ್ಲ.
01 ಅಕ್ಟೋಬರ್ 2024, 23:30 IST
ಮಕರ
ಹೊಸತನ್ನು ಸಾಧಿಸುವಂಥ ಪ್ರಚೋದನೆ ಮತ್ತು ವಿಭಿನ್ನ ವಿಷಯಗಳು ಗಮನ ಸೆಳೆಯಲಿವೆ. ಕಾರ್ಯರಂಗದಲ್ಲಿ ಹೊಸತನಕ್ಕೆ ಯೋಜನೆಯನ್ನು ರೂಪಿಸಬಹುದು. ತಿಂಡಿ ತಿನಿಸುಗಳ ವ್ಯಾಪಾರದವರಿಗೆ ಲಾಭವಾಗುವುದು.
01 ಅಕ್ಟೋಬರ್ 2024, 23:30 IST
ಕುಂಭ
ಕಾರ್ಯದಲ್ಲಿ ಕ್ರಿಯಾಶೀಲರಾಗಿ ಮತ್ತು ಮೇಲಧಿಕಾರಿಗಳಲ್ಲಿ ನಡೆನುಡಿ ಉತ್ತಮವಾಗಿದ್ದರೆ ಪ್ರತಿಫಲ ಆಕರ್ಷಕವಾಗಿವುದು. ಯಾವುದೇ ಕೆಲಸ ಮಾಡುವ ಮುನ್ನ ಸಂಪೂರ್ಣವಾಗಿ ವಾಸ್ತವಾಂಶ ಅರಿತುಕೊಳ್ಳಿರಿ.
01 ಅಕ್ಟೋಬರ್ 2024, 23:30 IST
ಮೀನ
ಕಣ್ಣಿನ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಅನಾಹುತಕ್ಕೆ ನಾಂದಿ ಮಾಡಿದಂತಾಗುವುದು. ಕಾರ್ಯಸಾಧನೆಗಾಗಿ ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಿ.
01 ಅಕ್ಟೋಬರ್ 2024, 23:30 IST