ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಅನಿಶ್ಚಿತತೆ ದೂರಾಗುವುದು..
Published 3 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಮುಂದುವರಿಸಿಕೊಳ್ಳುವುದು ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತದೆ. ಆತ್ಮವಂಚನೆ ಮಾಡಿಕೊಳ್ಳಬೇಡಿ.
ವೃಷಭ
ದುರಾಚಾರ, ದುರ್ಬುದ್ಧಿ ಹೊಂದಿರುವ ಜನರಿಂದ ದೂರವಿರುವ ಬಗ್ಗೆ ಪ್ರಯತ್ನವಿರಲಿ. ಬದುಕನ್ನು ಪಾರಮಾರ್ಥಿಕವಾಗಿ ನಡೆಸುವ ಬಗ್ಗೆ ನಿಮ್ಮ ಯೋಚನೆಗಳಿರಲಿ. ಅನುಭವದಿಂದ ಆತ್ಮಾಭಿಮಾನ ವೃದ್ಧಿಯಾಗಲಿದೆ.
ಮಿಥುನ
ಬೆಳೆದ ವಸ್ತುಗಳ ಮಾರಾಟದಿಂದ ಆರ್ಥಿಕ ಅನುಕೂಲವಾಗಿ ನಿಮ್ಮ ಮೇಲಿದ್ದ ಸಾಲದ ಹೊರೆಯು ಕಡಿಮೆಯಾಗಲಿದೆ. ಅನಾಥ ಹುಡುಗನೊಬ್ಬನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಯೋಚನೆಯನ್ನು ಮಾಡುವಿರಿ.
ಕರ್ಕಾಟಕ
ವಿರೋಧಿಗಳು ರಾಜಿಯಾಗಲು ಬರುವಂತಹ ಸನ್ನಿವೇಶಗಳು ನಡೆಯಬಹುದು. ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರವಿರುವುದು, ಕೆಲಸಗಾರರ ಸಹಕಾರ ಸಿಗುವುದು. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.
ಸಿಂಹ
ಆಶ್ಚರ್ಯಕರ ಮತ್ತು ಸಂಭ್ರಮಿಸುವಂತಹ ಘಟನೆ ನಿಮ್ಮ ಬದುಕಲ್ಲಿ ಈ ದಿನ ನಡೆಯುವುದು. ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ವಿಚಲಿತಗೊಳ್ಳದೆ ಕೆಲಸವನ್ನು ನೆರವೇರಿಸಿ. ಪತ್ನಿಯ ಆರೋಗ್ಯವು ಸುಧಾರಿಸುವುದು.
ಕನ್ಯಾ
ನಿಮ್ಮ ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ದಿನವಿಡೀ ಚರ್ಚಿಸಿದರೂ ತೀರ್ಮಾನಕ್ಕೆ ಬರುವುದು ಕಷ್ಟಕರ. ಮನೋಲ್ಲಾಸಕ್ಕಾಗಿ ದೂರದ ಪ್ರಯಾಣದ ಸಾಧ್ಯತೆಗಳು ಹೆಚ್ಚಿರುವುದು.
ತುಲಾ
ಸಮೀಪವರ್ತಿಗಳ ಸಲಹೆ ಸಹಕಾರದಿಂದ ವ್ಯಾಪಾರ ವಹಿವಾಟುಗಳಲ್ಲಿನ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಎಲ್ಲರೊಂದಿಗೆ ವಿಷಯ ವಿನಿಮಯದಿಂದ ನಿಮ್ಮ ಎಲ್ಲಾ ಗೊಂದಲಗಳಿಗೆ ಉತ್ತರ ಸಿಗಲಿದೆ.
ವೃಶ್ಚಿಕ
ಇಂದು ಮೇಲಧಿಕಾರಿಯಿಂದಲೋ, ಗುರು-ಹಿರಿಯರಿಂದಲೋ ಉತ್ತಮವಾದ ಪ್ರಶಂಸೆಯ ಮಾತುಗಳು ಕೇಳಿಬರಲಿದೆ. ಶ್ರೀ ಮಹಾವಿಷ್ಣುವನ್ನು ಸ್ತುತಿಸಿದಲ್ಲಿ ಮನೆಯಲ್ಲಿ ಆರೋಗ್ಯ, ಐಶ್ವರ್ಯಗಳ ವೃದ್ಧಿಯಾಗುವುದು.
ಧನು
ಸೋದರರೊಡನೆ ಅಥವಾ ದಾಯಾದಿಗಳೊಡನೆ ಇದ್ದ ಕಲಹಗಳು ಈ ದಿನಾಂತ್ಯದಲ್ಲಿ ನಿರ್ಮೂಲವಾಗಲಿದೆ. ನಿಮ್ಮ ಅತಿಯಾದ ಖರ್ಚು ವೆಚ್ಚಗಳು ಈ ದಿನ ತಗ್ಗುವುದು. ಮಕ್ಕಳ ತುಂಟತನದ ಬಗ್ಗೆ ಗಮನವಿರಲಿ.
ಮಕರ
ನೀವು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದನ್ನು ಜನ ಬಳಕೆ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಬ್ಯಾಂಕ್ ಅಧಿಕಾರಿಗಳಿಗೆ ಉದ್ಯೋಗದಲ್ಲಿ ಬದಲಾವಣೆಯಾಗುವಂತಹ ಸಂಭವವಿರುವುದು.
ಕುಂಭ
ಕೊಡುವ ಹಣ ಕೊಡುವ ಬಗ್ಗೆ, ತೆಗೆದುಕೊಳ್ಳುವ ಹಣ ತೆಗೆದುಕೊಳ್ಳುವ ಬಗ್ಗೆ ಲೆಕ್ಕಾಚಾರ ಸರಿಯಾಗಿ ಇಟ್ಟುಕೊಳ್ಳಿರಿ. ಆಲಸ್ಯದಿಂದಾಗಿ ಯಾವುದೇ ಕೆಲಸಗಳನ್ನು ಸಹ ಮುಂದೂಡದೆ ಪೂರ್ಣಗೊಳಿಸಲು ಪ್ರಯತ್ನಿಸಿ.
ಮೀನ
ನೆರೆಹೊರೆಯವರೊಂದಿಗೆ ಮತ್ತು ಸಹೋದರಿಯರೊಂದಿಗೆ ಸೌಹಾರ್ದದಿಂದ ವರ್ತಿಸಿ. ಬಹಳ ದಿನಗಳಿಂದ ಇದ್ದ ಆಸ್ಪತ್ರೆ ಅಲೆದಾಟಗಳು ಕೊನೆಗೊಳ್ಳುವುದು. ಉದ್ಯೋಗದಲ್ಲಿ ಅನಿಶ್ಚಿತತೆ ದೂರಾಗುವುದು.
ADVERTISEMENT
ADVERTISEMENT