ಗುರುವಾರ, 3 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವಿರಿ
Published 1 ಜುಲೈ 2025, 0:06 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಕೆಲಸದತ್ತ ಗಮನ ಹರಿಸುವಿರಿ. 6ನೇ ಇಂದ್ರಿಯದ ಮಾತಿಗೆ ಬೆಲೆ ಕೊಡುವುದು ಯಶಸ್ಸಿಗೆ ಮುಖ್ಯ
ವೃಷಭ
ಶ್ರೇಯಸ್ಸು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗಲಿದೆ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಇದು ಸಕಾಲ. ತಮಾಷೆಯ ನಡವಳಿಕೆಯನ್ನು ಕೊಂಚ ಹಿಡಿತದಲ್ಲಿಟ್ಟುಕೊಂಡರೆ ಸಂದಿಗ್ಧ ಪರಿಸ್ಥಿತಿ ಬಾರದು
ಮಿಥುನ
ಅಪರಿಚಿತ ವ್ಯಕ್ತಿಯೊಬ್ಬರು ಉತ್ತಮ ಉಪಾಯಗಳನ್ನು ಮತ್ತು ಅನುಭವಗಳನ್ನು ನೀಡುವುದಾಗಿ ಹೇಳಿ ಗುರಿಯನ್ನು ತಪ್ಪಿಸುವ ಸಾಧ್ಯತೆ ಇದೆ. ಜಾಗ್ರತರಾಗಿರಿ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವಿರಿ.
ಕರ್ಕಾಟಕ
ಹರಿದು ಬರುವ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ವಿದೇಶಿ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದ ಮಾಡಿಕೊಳ್ಳುವುದು ಬಹಳ ಸಮಂಜಸ.
ಸಿಂಹ
ಗುರಿಯನ್ನು ಮುಟ್ಟುವತ್ತ ಹಾದಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡಲ್ಲಿ ಯೋಜನೆಗಳು ಆಲೋಚಿಸಿದಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿರುವುದು. ಸತ್ಯದ ಹಾದಿಗೆ ಅಡೆತಡೆಗಳಿರುತ್ತವೆ ಎಂಬುದನ್ನು ಮರೆಯದಿರಿ.
ಕನ್ಯಾ
ನಡವಳಿಕೆ ಎಲ್ಲರ ಕೇಂದ್ರ ಬಿಂದುವಾಗಲಿದೆ. ಕಂಪನಿಯಲ್ಲಿ ಸಿಗುವ ಗೌರವ ಉಳಿಸಿಕೊಳ್ಳುವತ್ತ ಗಮನ ಹರಿಸುವುದು ಉತ್ತಮ. ಬಡಗಿ ಕೆಲಸ ಮಾಡುವವರಿಗೆ ಸುಯೋಗ.
ತುಲಾ
ಜಮೀನು ಖರೀದಿ ಅಥವಾ ನಿವೇಶನಗಳ ಖರೀದಿ ವ್ಯವಹಾರಗಳಿಂದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಭಾವನೆಗಳಿಗೆ ಆದ್ಯತೆಯನ್ನು ನೀಡುವುದು ಅನಿವಾರ್ಯವಾಗುತ್ತದೆ.
ವೃಶ್ಚಿಕ
ಸುಪ್ತ ಮನಸ್ಸು ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸುತ್ತಿದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡಿ. ದಾಂಪತ್ಯದಲ್ಲಿ ಬಿರುಕು ಬರದಂತೆ ನೋಡಿಕೊಳ್ಳಿ.
ಧನು
ಯೋಜನೆಗಳು ಅರ್ಧದಲ್ಲಿಯೇ ನಿಂತಿರುವುದರಿಂದ ಆಗಿದ್ದ ನಿರಾಸೆಯು ಆತ್ಮವಿಶ್ವಾಸದಿಂದ ಸಕಾರಾತ್ಮಕ ತಿರುವು ಪಡೆದುಕೊಳ್ಳಲಿದೆ. ಹೆಚ್ಚಿನ ಉತ್ಸಾಹ ಕಾಣಿಸುತ್ತಿದ್ದು ಹೊಸದೊಂದು ಹಾದಿಯಲ್ಲಿ ನಡೆಯಲಿದ್ದೀರಿ.
ಮಕರ
ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ಹೆಜ್ಜೆ ಇಡಿ. ಕಠಿಣ ಪರಿಶ್ರಮದಿಂದ ಮೇಲಧಿಕಾರಿಗಳ ಮನ ಗೆಲ್ಲಲು ಪ್ರಯತ್ನಿಸಿ. ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದರಿಂದ ಅಧಿಕಾರಿಗಳ ಮನ ಗೆಲ್ಲಬಹುದು.
ಕುಂಭ
ಬದುಕನ್ನು ವಿಲಾಸಿಯಾಗಿ ಕಳೆಯುವ ಹೊರತಾಗಿ ಅನೇಕ ಜವಾಬ್ದಾರಿಗಳಿವೆ ಎಂಬುದನ್ನು ಮರೆಯದಿರಿ. ಕ್ಷಣಿಕ ಸುಖಗಳಿಗೆ ಗಮನ ನೀಡದೆ, ಮುಖ್ಯ ವಿಷಯಗಳ ಬಗ್ಗೆ ಗಂಭೀರವಾಗಿ ಆಲೋಚಿಸಿ.
ಮೀನ
ಸರಿಯಾದ ಹಾದಿಯಲ್ಲಿಯೇ ನಡೆಯುವಿರಿ. ವಸ್ತ್ರಾಭರಣ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಿಕ್ಕಿ ದೂರ ಪ್ರಯಾಣ ಮಾಡಬೇಕಾಗುವುದು. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಲಿದೆ.
ADVERTISEMENT
ADVERTISEMENT