ದಿನ ಭವಿಷ್ಯ: ಶಾಂತವಾಗಿ ವರ್ತಿಸಿದಷ್ಟು ಏಳಿಗೆಯಾಗಲಿದೆ
Published 19 ಡಿಸೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಈವರೆಗೂ ಹೆಚ್ಚುವರಿಯಾಗಿ ಮಾಡುತ್ತಿದ್ದ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವ ದಾರಿಯನ್ನು ಹುಡುಕುವಿರಿ. ಶಾಂತವಾಗಿ ವರ್ತಿಸಿದಷ್ಟು ಏಳಿಗೆಯಾಗಲಿದೆ. ಕ್ರೋಧವನ್ನು ಕಡಿಮೆ ಮಾಡಿಕೊಳ್ಳಿ.
ವೃಷಭ
ಖರ್ಚು ವೆಚ್ಚಗಳು ಅಂದಾಜಿನ ಗಡಿ ದಾಟುವವು. ಕುಟುಂಬದ ವ್ಯಕ್ತಿಗಳ ಜೊತೆಯ ಮಾತುಕತೆಗಳು ಹಿತವಾಗುವ ರೀತಿಯಲ್ಲಿ ಇರುವವು. ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಿ.
ಮಿಥುನ
ಜನರೊಂದಿಗೆ ಬೆರೆತು ಮಾತನಾಡುವುದರಿಂದ ವ್ಯವಹಾರಕ್ಕೆ ಹೊಸಾ ಅವಕಾಶಗಳು ದೊರೆಯಲಿವೆ. ವ್ಯಾವಹಾರಿಕ ಚರ್ಚೆ ಅಥವಾ ವೃತ್ತಿ ಸಂದರ್ಶನದಲ್ಲಿ ಶುಭ ಫಲ. ಹೊಸ ಕೆಲಸಗಳ ಆರಂಭವನ್ನು ಮುಂದೂಡಿರಿ.
ಕರ್ಕಾಟಕ
ದೇಹಕ್ಕೆ ಅಗತ್ಯವಾದ ಪೋಷಕಾಂಶ, ವಿಶ್ರಾಂತಿಯನ್ನು ಕೊಡುವ ಮೂಲಕ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಅಸಾಧ್ಯವಾದುದನ್ನೂ ದೇವರ ಪ್ರಾರ್ಥನೆಯಿಂದ ಪಡೆದುಕೊಳ್ಳುವಿರಿ.
ಸಿಂಹ
ಕೆಲಸದಲ್ಲಿ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವಿರಿ. ಜನರಿಗೆ ಆರ್ಥಿಕವಾಗಿ ಸಹಾಯ ಮಾಡುವುದರಲ್ಲಿ ಖುಷಿ ಕಾಣುವಿರಿ. ಮನಸ್ಸಿನ ಮಾತಿಗೆ ಆದ್ಯತೆ ಕೊಡಿ.
ಕನ್ಯಾ
ಮಾಡುವ ಕೆಲಸಕ್ಕೆ ಇಂದೇ ಫಲವನ್ನು ಅಪೇಕ್ಷಿಸಬೇಡಿ. ನಿರುದ್ಯೋಗಿಗಳು ಈ ತಕ್ಷಣದಲ್ಲಿ ನೀವಂದುಕೊಂಡ ರೀತಿಯ ವೃತ್ತಿ ದೊರಕದಿರುವುದರಿಂದ ತಾಳ್ಮೆಯನ್ನು ಕಳೆದುಕೊಳ್ಳದೇ ಕಾಯಿರಿ.
ತುಲಾ
ಅದೃಷ್ಟವು ಕೈ ಹಿಡಿಯುವುದರಿಂದ ಎಲ್ಲಾ ವಿಷಯಗಳಲ್ಲೂ ಏಳಿಗೆಯನ್ನು ಕಾಣುವಿರಿ. ಉತ್ತಮ ಕೆಲಸಗಳಿಗೂ ಶೀಘ್ರ ಫಲವನ್ನು ಕಾಣುವಿರಿ. ವಿವಾಹ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರ ಅಗತ್ಯ.
ವೃಶ್ಚಿಕ
ದೈನಂದಿನ ಬದುಕಿನ ವಿಚಾರಗಳಲ್ಲಿ ನಡೆದಿರುವ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ. ವೃತ್ತಿರಂಗದ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಂಡರೆ ಉತ್ತಮ.
ಧನು
ಸರಿಯಾದ ಪರಿಶೀಲನೆ ಇಲ್ಲದೆ ಯಾವ ಕೆಲಸಗಳಲ್ಲೂ ಹೂಡಿಕೆ ಮಾಡಬೇಡಿ. ವೃತ್ತಿಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಾಯಕನನ್ನು ಜಾಗೃತಗೊಳಿಸಿ.
ಮಕರ
ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದಾಗಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಕುಟುಂಬ ವರ್ಗದಲ್ಲಿ ಸಲಹೆಗಳಿಗೆ ಆದ್ಯತೆ ದೊರೆಯಲಿದೆ.
ಕುಂಭ
ಕೆಲಸದ ಒತ್ತಡದಿಂದ ದೇಹಾಯಾಸ ಎದುರಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಹಾಗೂ ಸಿಹಿ ತಿನಿಸು ಮಾರಾಟಗಾರರಿಗೆ, ವಾಹನದ ವಹಿವಾಟುಗಳನ್ನು ನಡೆಸುವವರಿಗೆ ಲಾಭ.
ಮೀನ
ವಿದ್ಯಾರ್ಥಿ ವರ್ಗಕ್ಕೆ ಬಂದಿರುವ ಜವಾಬ್ದಾರಿಯುಕ್ತ ನಡವಳಿಕೆ ಮತ್ತು ಉತ್ಸಾಹದಿಂದ ಏಳಿಗೆಯ ಸೂಚನೆ ಇರುವುದು. ಹೊಸ ವ್ಯವಹಾರಗಳ ಚಾಲನೆಗೆ ಉತ್ತಮ ಮಾರ್ಗದರ್ಶನವನ್ನು ಹೊಂದುವಿರಿ.