ದಿನ ಭವಿಷ್ಯ: ಹಣಕಾಸು ಪರಿಸ್ಥಿತಿ ಸಂಪೂರ್ಣ ಹಿಡಿತದಲ್ಲಿಡಲು ಪ್ರಯತ್ನಿಸಿ
Published 10 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವ ನಿರ್ಧಾರಕ್ಕೆ ಬನ್ನಿ. ಹಣಕಾಸು ಪರಿಸ್ಥಿತಿ ಸಂಪೂರ್ಣ ಹಿಡಿತದಲ್ಲಿಡಲು ಪ್ರಯತ್ನಿಸಿ. ಆಲಸ್ಯತನ ಕುಟುಂಬದ ಅಭಿವೃದ್ಧಿ ಹಾಳು ಮಾಡುತ್ತದೆ.
10 ಫೆಬ್ರುವರಿ 2026, 18:30 IST
ವೃಷಭ
ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸದಲ್ಲಿ ಉತ್ಸಾಹ ವೃದ್ಧಿ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನು. ಬಂಧು-ಮಿತ್ರರ ಒಡನಾಟದಿಂದ ಸಂತೋಷ ತೋರಿಬರಲಿದೆ.
10 ಫೆಬ್ರುವರಿ 2026, 18:30 IST
ಮಿಥುನ
ಧನಾಗಮನಕ್ಕೆ ಹಲವು ದಾರಿಗಳು ಕಂಡರೂ, ಸರಿ ದಾರಿಯನ್ನು ಆರಿಸಿಕೊಳ್ಳಿ. ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿದ್ದು, ನೆಮ್ಮದಿ ಸಿಗಲಿದೆ.
10 ಫೆಬ್ರುವರಿ 2026, 18:30 IST
ಕರ್ಕಾಟಕ
ಬಿಡುವಿಲ್ಲದ ಕೆಲಸಗಳು ಮತ್ತು ಮೇಲಧಿಕಾರಿಗಳ ಒತ್ತಡಗಳಿಂದ ವೈಯಕ್ತಿಕ ವಿಷಯಗಳತ್ತ ಗಮನ ಹರಿಸಲು ಸಮಯವಿಲ್ಲದಂತಾಗುವುದು. ಕೃಷಿ ಕಾರ್ಮಿಕರಿಗೆ ಕೆಲ ಕಾರಣದಿಂದ ಕೆಲಸದ ಒತ್ತಡ ಉಂಟಾಗುವುದು.
10 ಫೆಬ್ರುವರಿ 2026, 18:30 IST
ಸಿಂಹ
ಭರವಸೆಯ ಮಾತುಗಳು ಸಹೋದ್ಯೋಗಿಯೊಬ್ಬರಿಗೆ ಆತ್ಮಸ್ಥೈರ್ಯ ತಂದುಕೊಡಲಿದೆ. ಗಮನಕ್ಕೆ ಬರುವ ತಪ್ಪುಗಳು ಪುನರಾವರ್ತನೆಯಾಗದಂತೆ ಗಮನಿಸಿ. ಹೊಸ ಕೆಲಸದ ಬಗ್ಗೆ ವಿಮರ್ಶಿಸಿ , ಕಾರ್ಯರೂಪಕ್ಕೆ ತನ್ನಿರಿ.
10 ಫೆಬ್ರುವರಿ 2026, 18:30 IST
ಕನ್ಯಾ
ಹೊಣೆಗಾರಿಕೆಯನ್ನು ಹೊರಲು ಸಿದ್ಧರಾಗಿರುವಿರಿ ಮತ್ತು ಶಕ್ತರಾಗಿರುವಿರಿ. ಮನಸ್ಸು ಬೇಡದ ದಿಕ್ಕಿನಲ್ಲಿ ಹರಿಯುವುದನ್ನು ತಡೆಗಟ್ಟುವ ಬಗ್ಗೆ ಅಭ್ಯಾಸ ಮಾಡಿಕೊಳ್ಳಿ. ಪ್ರಮುಖ ಸ್ಥಾನ ಪಡೆಯಲು ತಯಾರಿ ನಡೆಸುವಿರಿ.
10 ಫೆಬ್ರುವರಿ 2026, 18:30 IST
ತುಲಾ
ಮೊಬೈಲ್ ಫೋನ್‌ಗಳ ಮಾರಾಟಗಾರರಿಗೆ ಅಥವಾ ರಿಪೇರಿ ಮಾಡುವವರಿಗೆ ಆದಾಯ ಇರುವುದು. ಇಂದಿನ ಸಂಧಾನ ಅಥವಾ ಕರಾರು ಒಪ್ಪಂದಗಳು ಅನುಕೂಲಕರ ಎನಿಸಲಿವೆ. ಸದಾ ತಾಳ್ಮೆಯಿಂದ ವ್ಯವಹರಿಸಿ.
10 ಫೆಬ್ರುವರಿ 2026, 18:30 IST
ವೃಶ್ಚಿಕ
ಬಂಧು ಮಿತ್ರರ ಸಹಾಯಗಳನ್ನು ಬಯಸದೆ ಕಾರ್ಯಗಳನ್ನು ಮಾಡಿಕೊಳ್ಳಲು ಅಭ್ಯಾಸ ಮಾಡಿ. ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಬೇಗ ಮುಗಿಸಿಕೊಳ್ಳುವಂಥ ಪ್ರಯತ್ನಗಳು ನಡೆಯಲಿವೆ.
10 ಫೆಬ್ರುವರಿ 2026, 18:30 IST
ಧನು
ದೈವಾನುಕೂಲದಿಂದ ನಡೆಯಬೇಕಾದ ಶುಭ ಕಾರ್ಯಗಳನ್ನು ಹಿರಿಯರೊಂದಿಗೆ ಕುಳಿತು ನಿಶ್ಚಯ ಮಾಡಬಹುದು. ನೌಕರಿಯಲ್ಲಿ ಬಡ್ತಿ ಹೊಂದುವ ಬಗ್ಗೆ ಪ್ರಯತ್ನ ಇರಲಿ. ಪ್ರಯತ್ನಗಳು ನಿಷ್ಫಲವೆನಿಸುವುದಿಲ್ಲ.
10 ಫೆಬ್ರುವರಿ 2026, 18:30 IST
ಮಕರ
ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಇತರರೆಲ್ಲರಿಗಿಂತ ಭಿನ್ನ ಹಾಗೂ ಧನಾತ್ಮಕ ನಿರ್ಧಾರಗಳನ್ನು ತಗೆದುಕೊಳ್ಳುವಿರಿ.
10 ಫೆಬ್ರುವರಿ 2026, 18:30 IST
ಕುಂಭ
ದುರಾಲೋಚನೆಗಳನ್ನು ಬದಲಿಸಿಕೊಳ್ಳುವ ಸಮಯವಾಗಿದೆ. ಅನುಯಾಯಿಗಳಿಗೆ ನೀವಾಡುವ ಮಾತುಗಳಿಂದ ಬಹಳ ಸಂತಸ ಉಂಟಾಗುವುದು. ನಿಶ್ಚಿತ ರೂಪದಲ್ಲಿ ಕೆಲಸಗಳು ಜರುಗಲಿವೆ.
10 ಫೆಬ್ರುವರಿ 2026, 18:30 IST
ಮೀನ
ಕೋರ್ಟ್ ವ್ಯವಹಾರಗಳು ಬಗೆಹರಿಯಬಹುದೆಂಬ ಆಲೋಚನೆ ದುರ್ಬುದ್ಧಿಯಿಂದ ವ್ಯತ್ಯಾಸಗಳಾಗುತ್ತದೆ. ಹೆಂಡತಿಯ ಆರೋಗ್ಯ ಸುಧಾರಿಸುತ್ತದೆ. ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುವುದು.
10 ಫೆಬ್ರುವರಿ 2026, 18:30 IST