ದಿನ ಭವಿಷ್ಯ: ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ದೊರೆಯುತ್ತವೆ
Published 20 ಡಿಸೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ವಯಂಕೃತ ಅಪರಾಧದಿಂದ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಬರಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಬರುವುದು. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ದೊರೆಯುತ್ತವೆ.
ವೃಷಭ
ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ. ಏಕೆಂದರೆ ಅದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅವಿವಾಹಿತರು ಅಸ್ಪಷ್ಟ ನಿಲುವನ್ನು ಹೋಗಲಾಡಿಸಿದಲ್ಲಿ ಕಂಕಣಬಲದ ಸಾಧ್ಯತೆಯಿದೆ.
ಮಿಥುನ
ದುಃಖಗಳನ್ನೆಲ್ಲವನ್ನೂ ಮೀರಿ ಮುಖದಲ್ಲಿ ಮಂದಹಾಸ ಇರಲಿ.ಸಮಾಜದಲ್ಲಿ ಗೌರವಯುತ ಸ್ಥಾನಮಾನಗಳು ನಿಮಗೆ ದೊರಕುತ್ತವೆ. ಮೇಧಾವಿಗಳೊಂದಿಗಿನ ಸಂಪರ್ಕದಿಂದ ನಿಮ್ಮ ಅರಿವು ಹೆಚ್ಚಾಗಲಿದೆ.
ಕರ್ಕಾಟಕ
ಅಧಿಕಾರಿ ವರ್ಗದವರ ಉತ್ತೇಜನದಿಂದಾಗಿ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಜಯ ಲಭಿಸುವ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕಯಿಂದಿದ್ದರೆ ಎಲ್ಲವನ್ನೂ ಸುಲಭವಾಗಿ ನಿಭಾಯಿಸಬಹುದು.
ಸಿಂಹ
ನಿಮ್ಮಲ್ಲಿನ ಏಕಾಗ್ರತೆಯಿಂದಾಗಿ ಹೆಚ್ಚಿನ ಜವಾಬ್ದಾರಿಯ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಬಹುದು. ನಿಯಮ, ನಿಷ್ಠೆಗಳಿಂದ ಸಂಘದ ಅಧಿಕಾರದಲ್ಲಿ ಪದೋನ್ನತಿ ಪಡೆಯಬಹುದು.
ಕನ್ಯಾ
ವಾಹನಗಳ ಅಥವಾ ದೊಡ್ಡ ದೊಡ್ಡ ಯಂತ್ರಗಳಲ್ಲಿ ಕೆಲಸ ಮಾಡುವವರಿಗೆ ಜಾಗ್ರತೆ ಅಗತ್ಯ. ಉದ್ಯಮಿಗಳು ತಮ್ಮ ಕಾರ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಸಫಲರಾಗುವಿರಿ.
ತುಲಾ
ಕೆಲವು ಪ್ರಮುಖ ಕಾರ್ಯಗಳನ್ನು ಮಾಡುವಾಗ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು, ಅವನ್ನು ಲೆಕ್ಕಿಸದೆ ಗುರಿ ಸಾಧನೆಯ ಬಗ್ಗೆ ಯೋಚಿಸಿರಿ. ಖಾಸಗಿ ಗುಮಾಸ್ತ ಕೆಲಸದಲ್ಲಿದ್ದವರಿಗೆ ಪೂರ್ಣ ವಿರಾಮ ಸಿಗುವ ಸಾಧ್ಯತೆ ಇದೆ.
ವೃಶ್ಚಿಕ
ಈ ದಿನ ಸಿಗುವ ಅನಿರೀಕ್ಷಿತ ಅವಕಾಶಗಳನ್ನು ಮುಜುಗರವಿಲ್ಲದೆ ಬಳಸಿಕೊಳ್ಳದ್ದಿದ್ದರೆ ನಿಮ್ಮ ದಡ್ಡತನ ಪ್ರದರ್ಶಿಸಿದಂತಾಗುವುದು. ಇಂದು ಸಂದರ್ಶನ ನಡೆಸುವಲ್ಲಿ, ಯೋಗ್ಯತೆಯನ್ನು ಪರೀಕ್ಷಿಸುವಲ್ಲಿ ಕಷ್ಟಪಡುವಿರಿ.
ಧನು
ಕೆಲಸ ತಿರಸ್ಕರಿಸಿದವರು ಪುನಃ ಹಿಂದಿನ ಕಂಪನಿಯನ್ನೇ ಆಶ್ರಯಿಸುವ ಬಗ್ಗೆ ಯೋಚಿಸಿ. ಅಧಿಕಾರಿ ವರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಜನಸಾಮಾನ್ಯರಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ದೊರಕುತ್ತದೆ.
ಮಕರ
ಶೈಕ್ಷಣಿಕ ರಂಗದಲ್ಲಿನ ನಿಮ್ಮ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಗಳಿಸಿಕೊಳ್ಳಬಹುದು. ನಿಮ್ಮಲ್ಲಿದ್ದ ಪ್ರತಿಭೆಯನ್ನು ಇತರರು ಗಮನಿಸುವರು. ಆಸ್ತಿ ಕೊಳ್ಳುವ ನಿರ್ಧಾರದಲ್ಲಿ ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳಿ.
ಕುಂಭ
ವಿದೇಶ ಪ್ರಯಾಣದ ನಿಮ್ಮ ಹಲವು ವರ್ಷದ ಕನಸು ನೆರವೇರುವ ಅವಕಾಶ ಸಿಗುವುದು. ಕಾರ್ಮಿಕರ ಸಮಸ್ಯೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿ ಅವರ ಮನಸ್ಸಿನಲ್ಲಿ ಉತ್ತಮ ಸ್ಥಾನವನ್ನು ಸಂಪಾದಿಸಿಕೊಳ್ಳುವಂತೆ ಆಗಲಿದೆ.
ಮೀನ
ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವ ಸೂಚನೆ ಕಾಣುತ್ತದೆ. ಅವಶ್ಯಕತೆ ಇರುವ ಜಾಗದಲ್ಲಿ ಅತ್ಯಂತ ಜಿಪುಣತನವನ್ನು ತೋರಿಸಿ ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುವಂತಾಗಬಹುದು ಎಚ್ಚರ.