ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮಂಗಳವಾರ, 23 ಮೇ 2023
Published 22 ಮೇ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ಒಂದಾದ ಮೇಲೆ ಒಂದರಂತೆ ತೊಂದರೆಗಳೇ ಬರುವ ಕಾರಣ ಕಚೇರಿಯಲ್ಲಿ ಆಯಾಸಗೊಳ್ಳುವಿರಿ. ಮಾನಸಿಕವಾಗಿ ನಿಮ್ಮನ್ನು ಕಾಡುತ್ತಿರುವ ಚಿಂತೆಗೆ ಉತ್ತಮ ಪರಿಹಾರ ಮಗನಿಂದ ಪಡೆಯುವಂತಾಗಲಿದೆ.
ವೃಷಭ
ನೀವು ಒಂದು ಮಾತನಾಡಿದರೆ ಕಡಿಮೆ ಎರಡು ಮಾತನಾಡಿದರೆ ಹೆಚ್ಚು ಎಂಬ ಪರಿಸ್ಥಿತಿ ಉಂಟಾಗುವುದು. ರಾತ್ರಿಯ ವೇಳೆಗೆ ಶುಭ ಸುದ್ದಿಯನ್ನು ಕೇಳುವಿರಿ. ಗಾರ್ಮೆಂಟ್ ಉದ್ಯಮದವರು ಲಾಭ ಹೊಂದಲಿದ್ದೀರಿ.
ಮಿಥುನ
ವಾಸದ ಕನಸು ಹೆಚ್ಚು ಕಡಿಮೆ ನನಸಾಗುವಂತಹ ಲಕ್ಷಣಗಳು ಇವೆ. ನಂಬಿಕಸ್ಥ ಸ್ನೇಹಿತರೊಂದಿಗಷ್ಟೇ ಪ್ರಯಾಣದ ಯೋಜನೆಯನ್ನು ನಿರೂಪಿಸಿ. ಚರ ಆಸ್ತಿಯನ್ನು ಮಾರಾಟ ಮಾಡುವಲ್ಲಿ ನಷ್ಟ ಸಂಭವಿಸುವುದು.
ಕರ್ಕಾಟಕ
ಮಗಳ ಮದುವೆಯ ಜವಾಬ್ದಾರಿಯು ಹೆಂಡತಿಯ ತವರು ಮನೆಯವರ ಸಹಕಾರದಿಂದಾಗಿ ನೀವಂದುಕೊಂಡಷ್ಟು ಕಷ್ಟವಾಗಿ ಪರಿಣಮಿಸದು. ಯಾರ ಮೇಲೂ ಅಗತ್ಯಕ್ಕಿಂತ ಜಾಸ್ತಿ ಕೋಪಿಸಿಕೊಳ್ಳದಿರಿ.
ಸಿಂಹ
ನೂತನ ವಸ್ತ್ರವನ್ನು ಇತರರಿಗೆ ಕೊಡುವಂಥ ದೃಷ್ಟಿಯಿಂದ ಕೊಂಡುಕೊಳ್ಳುವಿರಿ. ಸಣ್ಣ ಕಾರಣಗಳಿಗೆ ಶುರುವಾದ ವಾದ ವಿವಾದ ದೊಡ್ಡ ಮಟ್ಟಕ್ಕೆ ತಲುಪಿ ಸಂಸಾರವನ್ನು ಒಡೆಯುವ ಹಂತಕ್ಕೆ ತಲುಪಲು ಬಿಡದಿರಿ.
ಕನ್ಯಾ
ಕ್ರೀಡಾ ಕ್ಷೇತ್ರದಲ್ಲಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವವರು ವಿದೇಶದಲ್ಲಿ ಹೆಸರುಗಳಿಸುವಿರಿ. ಉತ್ತಮ ಕಾರ್ಯಕ್ಷೇತ್ರಕ್ಕೆ ಪ್ರವೇಶಿಸಿದ ನಿಮ್ಮನ್ನು ಸ್ವಸ್ಥಾನದ ಜನರು ಅತ್ಯಂತವಾಗಿ ಶ್ಲಾಘಿಸುತ್ತಾರೆ.
ತುಲಾ
ನಿಮ್ಮ ಮನೆಯಲ್ಲಿನ ಅತ್ಯಂತ ಮುಖ್ಯವಾದ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದಾಗಿ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯು ದುಃಖಕರವಾಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ.
ವೃಶ್ಚಿಕ
ಸ್ನೇಹಿತನಿಂದಾಗಿ ನಡೆದ ಒಂದು ಘಟನೆಯು ನಿಮ್ಮ ಮನಸ್ಸಿನಲ್ಲಿ ಮಹತ್ತರ ಬದಲಾವಣೆ ಉಂಟುಮಾಡುತ್ತದೆ. ತಾರುಣ್ಯದಲ್ಲಿದ್ದಾಗ ಮಾಡಿದ ಬುದ್ಧಿವಂತಿಕೆಯ ಕೆಲಸವು ವೃದ್ಧಾಪ್ಯದಲ್ಲಿ ಅನುಕೂಲವಾಗಲಿದೆ.
ಧನು
ವಿದ್ಯಾರ್ಥಿಗಳು ಈ ದಿನದ ತನಕ ನಿತ್ಯದ ಕೆಲಸದಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ ಹೆಚ್ಚು ಹೊತ್ತು ಮನರಂಜನೆಗಳನ್ನೆಲ್ಲವನ್ನು ಬಿಟ್ಟು ಅಧ್ಯಯನದಲ್ಲಿ ತೊಡಗಬೇಕಾಗುತ್ತದೆ. ಸಂತಸದ ವಿಚಾರವನ್ನು ಎಲ್ಲರಿಗೂ ತಿಳಿಸುವಿರಿ.
ಮಕರ
ವೃತ್ತಿ ಜೀವನದಲ್ಲಿ ನಿಮಗೆ ಅನುಭವವೇ ಇರದಂತಹ ಸವಾಲನ್ನು ಬುದ್ಧಿವಂತಿಕೆಯಿಂದ ಪರಿಹರಿಸುವಿರಿ. ಹೆಚ್ಚಿನ ಶ್ರಮವಹಿಸಿ ಕೆಲಸ ನಿರ್ವಹಿಸಿದ ಕಾರಣದಿಂದಾಗಿ ದೇಹಾಯಾಸವು ಅಧಿಕವಾಗಿ ಕಾಡುವುದು.
ಕುಂಭ
ಆಹಾರದಲ್ಲಿನ ವ್ಯತ್ಯಾಸದಿಂದಾಗಿ ಹಲವು ಕಾಯಿಲೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆಗುವುದು. ವೃತ್ತಿಯಲ್ಲಿ ಜವಾಬ್ದಾರಿಯು ಇರುವುದರಿಂದ ವೈಯಕ್ತಿಕ ಜೀವನದಲ್ಲಿನ ಗಮನ ಕಡಿಮೆ ಅಗುವುದು.
ಮೀನ
ಆರೋಪದ ಮಾತುಗಳು ಒಬ್ಬರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದಕ್ಕೆ ನಿಮ್ಮ ಸಂಬಧಿಗಳ ಜೀವನ ಸಾಕ್ಷಿಯಾಗಲಿದೆ. ಪ್ರಾರ್ಥನೆಯ ಪರಿಣಾಮವಾಗಿ ನಿಮ್ಮಿಚ್ಛೆಯ ವಧು ದೊರೆಯುವಳು.