ಗುರುವಾರ, 3 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸಬೇಕಾಗುವುದು
Published 1 ಜುಲೈ 2025, 22:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಗಳ ಮದುವೆಯ ವಿಚಾರವಾಗಿ ವಿವಿಧ ರೀತಿಯ ಪರಿಸ್ಥಿತಿ ಎದುರಿಸುವಿರಿ. ಕಂಪ್ಯೂಟರ್ ಎಂಜಿನಿಯರ್‌ ಕಂಪನಿಯನ್ನು ಬದಲಾಯಿಸಬೇಡಿ. ನಿತ್ಯದ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ.
ವೃಷಭ
ದೇಹಕ್ಕೆ ಅಗತ್ಯವಿರುವಷ್ಟು ಆಹಾರ ಹಾಗೂ ವಿಶ್ರಾಂತಿ ತೆಗೆದುಕೊಳ್ಳುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ವೈದ್ಯರ ಸಲಹೆಗಳನ್ನು ಪಾಲಿಸಿ. ಬದುಕುವ ಛಲ ಇರಲಿ.
ಮಿಥುನ
ಮಿತಿಮೀರುತ್ತಿರುವ ಪುತ್ರವ್ಯಾಮೋಹವು ಆತನ ಭವಿಷ್ಯಕ್ಕೆ ಕಂಟಕವನ್ನು ತಂದು ಒಡ್ಡಲಿದೆ. ಹಿಂದೆ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಿ. ಬೇರೆಯವರನ್ನು ಕಾರಣವಿಲ್ಲದೆ ದೂಷಿಸಬೇಡಿ.
ಕರ್ಕಾಟಕ
ಉತ್ತಮ ಗಾಳಿ, ಪ್ರಶಾಂತ ವಾತಾವರಣ, ಏಕಾಂತ ಬೇಕೆಂದು ಮನಸ್ಸಿಗೆ ಅನಿಸುವುದು. ಹರಿತ ವಸ್ತುಗಳನ್ನು ಬಳಸುವಾಗ ಗಮನ ಇರಲಿ. ಗೌರವ ಉಳಿಸಿಕೊಳ್ಳಿ.
ಸಿಂಹ
ವಿದೇಶಕ್ಕೆ ತೆರಳಲು ವಿಪುಲ ಅವಕಾಶ ಒದಗಿಬರಲಿದೆ. ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿ ಪರಿಹಾರವಾಗುವುದು. ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ಹಸಿರು ಬಣ್ಣ ಅದೃಷ್ಟ ತರುವುದು.
ಕನ್ಯಾ
ಬೇಡಿಕೆ ಕಡಿಮೆ ಆಗಿರುವ ವಿದ್ವಾಂಸರಿಗೆ ಶಿಷ್ಯರ ಮೂಲಕ ಹೆಚ್ಚಿನ ಮನ್ನಣೆ ಸಿಗಲಿದೆ. ಒಂಟಿತನ ಹೋಗಲಾಡಿಸಿಕೊಳ್ಳಲು ಕ್ರಿಯಾತ್ಮಕ ಕೆಲಸಗಳತ್ತ ಮನಸ್ಸು ಹರಿಸುವಿರಿ.
ತುಲಾ
ಸುತ್ತಿಬಳಸಿ ವಿಷಯಗಳನ್ನು ಕುಟುಂಬದ ಎದುರು ಇಡುವುದಕ್ಕಿಂತ ಆಕಾಂಕ್ಷೆಗಳನ್ನು ನೇರವಾಗಿ ತಿಳಿಸಿದರೆ ಖಂಡಿತವಾಗಿ ‌ ಬೇಕಾದ ಫಲಿತಾಂಶ ಸಿಗಲಿದೆ. ದಿನಸಿ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ.
ವೃಶ್ಚಿಕ
ಮನೆಯ ಜಾನುವಾರು, ಸಾಕು ಪ್ರಾಣಿಗಳ ಆರೋಗ್ಯದ ವಿಷಯವಾಗಿ ತಲೆಕೆಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವುದು. ಲಾಭದ ಹಾದಿಯಲ್ಲಿ ಬಂದ ನಿಮಗೆ ಸಣ್ಣ ನಷ್ಟವು ಒಮ್ಮೆ ಎಡವಿದಂತಾಗಬಹುದು.
ಧನು
ಯಾವುದೋ ಕಾರಣದಿಂದ ದೂರವಾದ ಸ್ನೇಹಿತನು ಮತ್ತೆ ಪ್ರಾಣಸ್ನೇಹಿತನಾಗಿ ಮರಳಲಿದ್ದಾನೆ. ಉನ್ನತ ವಾಣಿಜ್ಯ ಶಿಕ್ಷಣ ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಮಕರ
ಸಂಭಾಷಣೆಯಲ್ಲಿನ ಉತ್ತಮ ಪದಗಳ ಬಳಕೆಯು ಮುಂದಿರುವವರನ್ನು ಆಕರ್ಷಿಸಿ ಲಾಭವನ್ನುಂಟುಮಾಡುತ್ತದೆ. ಅಪರಿಚಿತ ವ್ಯಕ್ತಿಯ ಕರೆ ಮನಸ್ಸನ್ನು ತಳಮಳಗೊಳಿಸುತ್ತದೆ.
ಕುಂಭ
ಮನಃಶಾಸ್ತ್ರಜ್ಞರು ರೋಗಿಗಳೊಂದಿಗೆ ವ್ಯವಹರಿಸುವುದು ಕಷ್ಟಕರ. ಧೈರ್ಯವಾಗಿ ತಿಳಿದವರ ಮಾರ್ಗದರ್ಶನದಿಂದ ಮುನ್ನಡೆದರೆ ಎಲ್ಲವು ಪರಿಹಾರ. ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸಬೇಕಾಗುವುದು.
ಮೀನ
ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಸಹವರ್ತಿಗಳ ಅಭಿಪಾಯ ಪಡೆದುಕೊಳ್ಳಿ. ಎಲ್ಲದರಿಂದಲೂ ಧನಲಾಭವನ್ನು ಮಾತ್ರ ಯೋಚಿಸಬೇಡಿ. ಸಹಾಯ ಮಾಡುವ ಮನಸ್ಥಿತಿಯನ್ನೂ ಬೆಳೆಸಿಕೊಳ್ಳಿ.
ADVERTISEMENT
ADVERTISEMENT