ದಿನ ಭವಿಷ್ಯ | ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯಿರಿ
Published 2 ಜುಲೈ 2025, 22:20 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೀವು ಆಧ್ಯಾತ್ಮದತ್ತ ವಾಲಲಿದ್ದೀರಿ. ಅಲೌಕಿಕ ಶಕ್ತಿಗಳತ್ತ ಗಮನಹರಿಸುವಿರಿ. ಸಂಜೆ ಹೊತ್ತಿಗೆ ಹಳೆಯ ಸ್ನೇಹಿತರ ಸಂಪರ್ಕ ಸಾಧಿಸಲಿದ್ದೀರಿ. ಕೆಲಸ ಮಾಡುವ ಮುನ್ನ ವಾಸ್ತವಾಂಶಗಳನ್ನು ಅರಿತುಕೊಳ್ಳುವ ಪ್ರಯತ್ನ ಒಳ್ಳೆಯದು.
ವೃಷಭ
ವಾಣಿಜ್ಯ ರಂಗದಲ್ಲಿ ಹೊಸ ತಿರುವು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪರವಾನಗಿ ಕೇಳಿದವರಿಗೆ ಶುಭ ಸಂಕೇತ ಸಿಗುವುದು. ಅಧಿಕಾರಿ ವರ್ಗದವರಿಂದ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಶಂಸೆ ಕೇಳುವಿರಿ.
ಮಿಥುನ
ಒಡನಾಟ ಹೊಂದಿರುವ ವ್ಯಕ್ತಿಗಳ ಹರಿತ ನುಡಿಗಳು ಮನಸ್ಸಿಗೆ ಬೇಸರವನ್ನು ಉಂಟುಮಾಡಬಹುದು. ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಹೊಸ ಯೋಜನೆಗಳು ಜಾರಿಯಾಗಲಿವೆ.
ಕರ್ಕಾಟಕ
ಒತ್ತಾಯಪೂರ್ವಕವಾಗಿ ಮಾಡುತ್ತಿರುವ ಕಾರ್ಯಗಳನ್ನು ಬಿಡಬೇಕು ಎನ್ನುವಂಥ ಮನೋಭಾವ ಬರುವ ಸಾಧ್ಯತೆಗಳಿವೆ. ರಾಜಕಾರಣಿಗಳೊಂದಿಗೆ ಬೆಳೆಸಿಕೊಂಡ ಒಡನಾಟವು ಅಪಾಯ ತಂದೊಡ್ಡಲಿದೆ.
ಸಿಂಹ
ತಂದೆ-ತಾಯಿಯ ಆರೋಗ್ಯದಲ್ಲಿ ಏರುಪೇರಾಗಲಿದೆ. ನೆರೆಹೊರೆಯವರ ಕಿರಿಕಿರಿ ತಪ್ಪದು. ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯಿರಿ. ಮಹಾಗಣಪತಿಯನ್ನು ಆರಾಧಿಸಿ.
ಕನ್ಯಾ
ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು. ಉದಯೋನ್ಮುಖ ತಾರೆಯರಿಗೆ ಮತ್ತು ಕಲಾವಿದರಿಗೆ ಅವಕಾಶ ಲಭಿಸಲಿದೆ. ಹಿಂದಿನ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ.
ತುಲಾ
ಆತ್ಮವಿಶ್ವಾಸದಿಂದಾಗಿ ಕೆಲಸಕಾರ್ಯಗಳಲ್ಲಿ ಅತಿ ಯಶಸ್ಸು ಹೊಂದುವಿರಿ. ಭವಿಷ್ಯದ ವಿಚಾರವಾಗಿ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ. ಕರ್ತವ್ಯದಲ್ಲಿ ಲೋಪವಾಗದಂತೆ ಗಮನವಹಿಸಿ.
ವೃಶ್ಚಿಕ
ಮನೆಯ ಜವಾಬ್ದಾರಿಯಲ್ಲದೇ ಉದ್ಯೋಗಕ್ಕೂ ಪತ್ನಿಯ ಸಹಕಾರ ಸಂಪೂರ್ಣ ಸಿಗಲಿದೆ. ರಿಯಲ್ ಎಸ್ಟೇಟುದಾರರಿಗೆ ಉತ್ತಮ ಅವಕಾಶ ಎದುರಾಗುವುದು, ದುರಾಸೆ ಪಡುವುದು ಸರಿಯಲ್ಲ.
ಧನು
ಬಟ್ಟೆ ವಿನ್ಯಾಸಗಾರರು ತಮ್ಮ ಉಡುಪುಗಳ ರಫ್ತು ಮಾರಾಟವನ್ನು ಹೆಚ್ಚಿಸಿಕೊಳ್ಳಬಹುದು. ಜವಳಿಯ ಮೇಲೇ ಬಂಡವಾಳ ಹಾಕಲು ಸಕಾಲ. ಆಸ್ತಿ ಮಾರಾಟ ಮಾಡಿ ಸಾಲ ಮುಕ್ತರಾಗುವ ಯೋಚನೆ ಸರಿಯಲ್ಲ.
ಮಕರ
ನಾಲ್ಕಾರು ಜನರ ಎದುರು ಅಗೌರವ ಎದುರಿಸುವ ಲಕ್ಷಣಗಳಿವೆ. ಕೆಲಸದ ಕ್ಷೇತ್ರದಲ್ಲಿ ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸಿ. ಆಸ್ತಿಯ ವಿಚಾರವಾಗಿ ಅಣ್ಣ-ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
ಕುಂಭ
ಸ್ವಂತ ಉದ್ಯೋಗಿಗಳಿಗೆ ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದರಿಂದ ಆಸ್ತಿ ಖರೀದಿಯ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ಕನಸು ಕಟ್ಟಿಕೊಂಡವರಿಗೆ ಅವಕಾಶ ಎದುರಾಗುವುದು. ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು.
ಮೀನ
ಮೇಲಧಿಕಾರಿಗಳ ಜತೆಯಲ್ಲಿ ಮನಸ್ತಾಪ ಹೆಚ್ಚಾಗದಂತೆ ಜಾಗ್ರತೆ ವಹಿಸಿ. ಖಾಸಗಿ ಉದ್ಯೋಗದಲ್ಲಿರುವವರಿಗೆ ಒತ್ತಡ ಅಥವಾ ಅಭದ್ರತೆಯ ಅನುಭವ ಆಗುವುದು. ಯಾರದ್ದೋ ಮಾತು ಕೇಳಿ ಸ್ನೇಹ ಕಳೆದುಕೊಳ್ಳಬೇಡಿ.