ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನಭವಿಷ್ಯ: ಈ ರಾಶಿಯ ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ವ್ಯಾಪಾರಗಳಿಂದ ಹೇರಳ ಲಾಭ
Published 8 ಮಾರ್ಚ್ 2024, 22:44 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇತ್ತೀಚಿನ ದಿನದಲ್ಲಿ ಸಹೋದರರಲ್ಲಿ ಮೂಡಿದ ಭಿನ್ನಾಭಿಪ್ರಾಯವು ತಂದೆ ತಾಯಿಯ ಹಿತವಚನಗಳಿಂದ ಉತ್ತಮವಾಗಲಿದೆ. ಇಂಟೀರಿಯರ್ ಡೆಕೊರೇಟರ್ ಕೋರ್ಸ್ ಸೇರುವ ಆಸಕ್ತಿಗೆ ಇಂದು ಹಾದಿ ದೊರಕಲಿದೆ.
ವೃಷಭ
ವಿದ್ಯಾರ್ಥಿಗಳಿಗೆ ಉನ್ನತ ಶ್ರೇಣಿ ಪ್ರಾಪ್ತವಾಗಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಭಾಗ್ಯವಿದೆ. ಆದರೆ ಉದ್ಯೋಗದ ಸ್ಥಳದ ಬಗ್ಗೆ ಗಮನವಿರಲಿ. ಈ ದಿನ ನಿರಾಸೆಯ ಜೀವನ ಶೈಲಿಯು ಹಂತ ಹಂತವಾಗಿ ಮುಕ್ತಾಯವಾಗಲಿದೆ.
ಮಿಥುನ
ಮಧ್ಯಾಹ್ನದ ನಂತರ ಷೇರು ವ್ಯವಹಾರಗಳಿಂದ ನಿರೀಕ್ಷಿಸಿದ ಲಾಭ ಬರಲಿದೆ. ಇಂದಿನ ಪರಿಸ್ಥಿತಿಯಲ್ಲಿ ಮನಸ್ಸು ಹತೋಟಿಯಲ್ಲಿಟ್ಟುಕೊಳ್ಳುವುದು ಸಾಹಸದ ವಿಚಾರ. ಹೊರ ಪ್ರಪಂಚದಲ್ಲಿ ಬೆರೆಯುವುದನ್ನು ರೂಢಿಸಿಕೊಳ್ಳಿ.
ಕರ್ಕಾಟಕ
ಹೊಸ ಕೆಲಸ ಶುರು ಮಾಡುವ ಮುನ್ನ ಮುಂದಿನ ಕ್ರಮಗಳ ಕುರಿತು ಗಂಭೀರವಾಗಿ ಯೋಚಿಸಿ ತೀರ್ಮಾನಿಸಬೇಕು. ಕೌಟುಂಬಿಕ ಸಮಸ್ಯೆಗಳಿಗೆ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿ.
ಸಿಂಹ
ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಸಣ್ಣ ಪುಟ್ಟ ತೊಡಕುಗಳು ಕಾಣಿಸಿಕೊಂಡರೂ ಕೆಲಸಗಳು ಅಬಾಧಿತವಾಗಿ ಸಾಗುವುದು. ಶುಭ ಫಲಗಳಿಗಾಗಿ ವಿಷ್ಣು ಸಹಸ್ರ ನಾಮ ಸ್ತೋತ್ರ ಪಠಿಸಿರಿ.
ಕನ್ಯಾ
ಅನಿರೀಕ್ಷಿತವಾಗಿ ದೊರೆತ ಅವಕಾಶಗಳನ್ನು ಯಾವುದೇ ಮುಜುಗರವಿಲ್ಲದೆ ಬಳಸಿಕೊಳ್ಳಲು ಸಿದ್ಧರಾಗಿ. ನಿಮ್ಮ ಮಾತಿನ ಕೌಶಲ, ಚತುರತೆಯಿಂದ ನಡೆಯಬಹುದಾದ ವೃತ್ತಿ ವೈಷಮ್ಯದ ಕಲಹಗಳು ದೂರಾಗಲಿವೆ.
ತುಲಾ
ವಚನ ಪಾಲನೆಯಿಂದ ಹಾಗೂ ಉನ್ನತ ಅಧಿಕಾರಿಗಳ ಸವಿನುಡಿಯಿಂದ ಮಾನಸಿಕ ಉಲ್ಲಾಸ ಸಿಗಲಿದೆ. ಕಬ್ಬಿಣ ಕೆಲಸದ ಗುತ್ತಿಗೆದಾರರಿಗೆ ಹೊಸ ಗುತ್ತಿಗೆ ಸಿಗುವ ಸಂಭವಗಳಿವೆ. ಹೊಸ ಅಲಂಕಾರಿಕ ವಸ್ತು ಖರೀದಿಸುವ ಯೋಗವಿದೆ.
ವೃಶ್ಚಿಕ
ಭೂಮಿ ಖರೀದಿಗೆ ಸಂಬಂಧಿಸಿದಂತೆ ಈ ಹಿಂದೆ ತೆಗೆದುಕೊಂಡ ನಿಲುವುಗಳನ್ನು ಕೆಲವು ಕಾರಣಗಳಿಂದ ಬದಲಾಯಿಸಬೇಕಾಗಬಹುದು. ಕುಶಲ ಕರ್ಮಿಗಳಿಗೆ ಪ್ರದರ್ಶನ ಮಾರಾಟದಿಂದ ಅಧಿಕ ಆದಾಯವಿದೆ.
ಧನು
ವ್ಯವಹಾರದಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಉತ್ತಮ ಆದಾಯ ಪ್ರಾಪ್ತಿಯಾಗಲಿದೆ. ಸ್ವಂತ ವ್ಯವಹಾರ ನಡೆಸಲು ಇದು ಸರಿಯಾದ ಸಮಯವಲ್ಲ. ನಿಮ್ಮ ವೃತ್ತಿರಂಗದಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಲಿದ್ದಾರೆ.
ಮಕರ
ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ವ್ಯಾಪಾರಗಳಿಂದ ಹೇರಳ ಲಾಭ ಸಿಗಲಿದೆ. ಕುಡಿಯುವ ನೀರಿನಿಂದ ಅನಾರೋಗ್ಯ ಉಂಟಾಗಬಹುದು. ರಾಜಕೀಯವಾದ ವಿಚಾರಗಳನ್ನು ಆದಷ್ಟು ಗುಪ್ತವಾಗಿ ಇರಿಸಿ.
ಕುಂಭ
ಕೆಲಸದಲ್ಲಿ ಹೊಸ ಪರಿವರ್ತನೆ ಮಾಡಬೇಕೆಂಬ ಬಹಳ ದಿನಗಳ ನಿಮ್ಮ ಆಲೋಚನೆಗೆ ಇದು ಸುಸಂದರ್ಭ. ವಿವಾಹ ಸಂಬಂಧ ಬೆಳೆಸುವ ಮೊದಲು ಸರಿಯಾಗಿ ಸಮಾಲೋಚನೆ ನಡೆಸಿ ಯೋಚಿಸುವುದು ಉತ್ತಮ.
ಮೀನ
ಕೃಷಿ ಅಥವಾ ಕೃಷಿ ಕೈಗಾರಿಕೆಯಲ್ಲಿನ ವ್ಯವಹಾರಗಳು ಸಮಾಧಾನಕರ ಆದಾಯ ತರಲಿವೆ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ಕಂಡು ಸಮಾಧಾನವಾಗಲಿದೆ. ಜೀವನದಲ್ಲಿ ಅಧಿಕಾರದ ಹುದ್ದೆ ಹೊಂದುವಿರಿ.